ಬೆಂಗಳೂರು: ಸಿಎಂ ಬದಲಾವಣೆ, ಮೂವರು ಡಿಸಿಎಂ ಸೃಷ್ಠಿಯ ವಿವಾದ ರಾಜ್ಯದಲ್ಲಿ ತಾರಕಕ್ಕೇರಿದೆ. ಈ ವಿಚಾರವನ್ನು ಮಾತನಾಡದಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಖಡಕ್ ವಾರ್ನಿಂಗ್ ನೀಡಿದ್ದರು. ಆದ್ರೇ ಸಚಿವ ಕೆ.ಎನ್ ರಾಜಣ್ಣ ಮಾತ್ರ ಡಿಕೆಶಿ ವಾರ್ನಿಂಗ್ ನಾನು ಕೇಳ್ತೀನಾ? ನೋಟಿಸ್ ಕೊಡಲಿ ಆಮೇಲೆ ಮಾತಾಡ್ತೀನಿ ಅಂತ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಡಿದಂತ ಅವರು, ಡಿಕೆ ಶಿವಕುಮಾರ್ ನೋಡಿಸ್ ಕೊಟ್ಟ ಮೇಲೆ ನಾನು ಮಾತಾಡುತ್ತೇನೆ. ಸಲಹೆ ನೀಡುವಾಗ ಸಾರ್ವಜನಿಕವಾಗಿ ವಿವಾದ ಆಗಬಾರದು ಎಂದರು.

ನಾನು ವಿವಾದ ಆಗಬಾರದು ಎನ್ನುವ ಮಾತನ್ನು ಒಪ್ಪುತ್ತೇನೆ. ನಾನು ಡಿಸಿಎಂ ಬಗ್ಗೆ ತಪ್ಪಾಗಿ ಏನು ಹೇಳಿಲ್ಲ. ನಾವು ಕೇಳಬಾರದಾ ಅಂತ ಪ್ರಶ್ನಿಸಿದಂತ ಅವರು, ನಾವು ಕೇಳಿದ್ದೇ ತಪ್ಪಾಗುತ್ತದೆಯೇ? ಕೇಳಿದ್ದೇ ತಪ್ಪು ಅಂದ್ರೆ ಯಾವುದೇ ಕ್ರಮ ತೆಗೆದುಕೊಂಡರು ಎದುರಿಸೋದಕ್ಕೆ ನಾನು ತಯಾರಿದ್ದೇನೆ ಅಂತ ಹೇಳಿದರು.

ನಾನು ಡಿಕೆಶಿ ವಾರ್ನಿಂಗ್ ಕೇಳ್ತೀನಾ? ನಾನು ನಾನೇ,. ರಾಜಣ್ಣ, ರಾಜಣ್ಣನೇ. ಅಧಿಕಾರಕ್ಕೆ ನಾನು ಅಂಟಿಕೊಂಡಿಲ್ಲ. ಬಾಯಿಗೆ ಬೀಗ ಹಾಕಿಕೊಳ್ಳಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ರೆ ನಾನು ಕೇಳುವವನಲ್ಲ ಅಂತ ವಾಗ್ಧಾಳಿ ನಡೆಸಿದರು.

ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ʻNEETʼ ಕೋಚಿಂಗ್ : ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ

BREAKING : ಶಾಸಕ ವಿನಯ್‌ ಕುಲಕರ್ಣಿಗೆ ಕೋರ್ಟ್ ಶಾಕ್‌ : ಧಾರವಾಡ ಭೇಟಿಗೆ‌ ಮತ್ತೆ ನಿರಾಕರಣೆ

Share.
Exit mobile version