ಶಿವಮೊಗ್ಗ : ಲೋಕಸಭಾ ಚುನಾವಣೆಗೆ ತಮ್ಮ ಮಗನಿಗೆ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಬಂಡಾಯ ವೆದಿರುವ ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಇದೀಗ ಶಿವಮೊಗ್ಗದಲ್ಲಿ ತಮ್ಮ ನಿವಾಸದಲ್ಲಿ ನೂತನ ಕಚೇರಿಯನ್ನು ಉದ್ಘಾಟಿಸಿ, ಮೋದಿಯಲ್ಲ ಬ್ರಹ್ಮ ಬಂದು ಹೇಳಿದ್ರು ನಾನು ಚುನಾವಣೆಯಿಂದ ಹಿಂದೆ ಸರಿಯಲ್ಲ. ಚುನಾವಣೆಗೆದ್ದು ಮತ್ತೆ ಮೋದಿ ಅವರ ಹತ್ರಾನೆ ಹೋಗುತ್ತೇನೆ ಎಂದು ತಿಳಿಸಿದರು.
ನಗರದಲ್ಲಿ ಈಶ್ವರಪ್ಪ ನಿವಾಸದಲ್ಲಿ ನೂತನ ಚುನಾವಣಾ ಕಚೇರಿ ಉದ್ಘಾಟನೆ ಮಾಡಿ ಬಳಿಕ ಮಾತನಾಡಿದ ಅವರು, ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ತೀರ್ಮಾನ ಮಾಡಲಾಗಿದೆ. ಹಾಗಾಗಿ ನನ್ನ ನಿವಾಸದಲ್ಲೇ ಕಚೇರಿ ಉದ್ಘಾಟನೆ ಮಾಡಿದ್ದೇವೆ. ನನ್ನ ಮಗನನ್ನು ಎಂಪಿ ಮಾಡುತ್ತೇನೆ ಎಂದು ಸುಳ್ಳು ಹೇಳಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸುಳ್ಳಿನ ಸರದಾರ ಎಂದು ವಾಗ್ದಾಳಿ ಮಾಡಿದ್ದಾರೆ.
ಒಂದೇ ಒಂದು ಜಾತಿಯವರು ನನ್ನ ಈಶ್ವರಪ್ಪ ಇಂತಾ ಜಾತಿಯವ ಎಂದು ಹೇಳಲಿಲ್ಲ. ನಮ್ಮ ಮನೆ ಮಗ ಎಂದು ಐದು ಬಾರಿ ಗೆಲ್ಲಿಸಿ ಕೊಟ್ಟಿದ್ದಾರೆ. ಪಕ್ಷಭೇದ ಮರೆತು ಈಶ್ವರಪ್ಪಗೆ ಬೆಂಬಲ ಕೊಡುತ್ತೇವೆ ಎಂದಿದ್ದಾರೆ. ಜಾತಿಭೇದ ಮರೆತು ಈಶ್ವರಪ್ಪಗೆ ಬೆಂಬಲ ಕೊಡುತ್ತೇವೆ ಎಂದಿದ್ದಾರೆ. ಮೋದಿ ಅಲ್ಲ ಬ್ರಹ್ಮ ಬಂದರು ಕೂಡ ನಾನು ಚುನಾವಣೆಗೆ ನಿಲ್ಲೋದೇ ನಂತರ ಗೆದ್ದ ಮೇಲೆ ಮೋದಿ ಹತ್ರನೇ ಹೋಗುವುದು ಎಂದರು.
ಬಿಜೆಪಿ ವಿರುದ್ಧ 40% ಕಮಿಷನ್ ಜಾಹೀರಾತು: ರಾಹುಲ್ ಗಾಂಧಿ, ಸಿದ್ಧರಾಮಯ್ಯ, ಡಿಕೆಶಿಗೆ ಕೋರ್ಟ್ ಸಮನ್ಸ್
ಯಡಿಯೂರಪ್ಪನವರಿಗೆ ಡಮ್ಮಿ ಕ್ಯಾಂಡಿಡೇಟ್ ಹಾಕಿ ಗೆಲ್ಲುವ ಅಭ್ಯಾಸವಿದೆ. ಈ ರೀತಿ ಡುಮ್ಮಿ ಕ್ಯಾಂಡೇಟ್ ಹಾಕಿ ತಮ್ಮ ಮಗನನ್ನು ಗೆಲ್ಲಿಸಿದ್ದಾರಲ್ಲ ದೇವರು ಮೆಚ್ಚುತಾನ? ಪಕ್ಷ ಬೇಧ ಜಾತಿಭೇದ ಮರೆತು ನನಗೆ ಬೆಂಬಲ ಕೊಡಿ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಬಿಜೆಪಿ ಪರಿಶುದ್ದ ಮಾಡಬೇಕು ಎಂಬ ಹೆಮ್ಮೆ ಇದೆ. ಕಾರ್ಯಕರ್ತರ ನೋವನ್ನು ಹೋಗಲಾಡಿಸಬೇಕು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆಲ್ಲಬಾರದು. ಸಿದ್ದರಾಮಯ್ಯ ಅವರ ಪರಿಸ್ಥಿತಿ ಏನಾಗಿದೆ. ತನ್ನ ಮಗನನ್ನು ನಿಲ್ಲಿಸುತ್ತೇನೆ ಅಂದರು, ಮಗನನ್ನು ನಿಲ್ಲಿಸಿದಾ? ಕಾಂಗ್ರೆಸ್ನಲ್ಲಿ ಅವರ ಪರಿಸ್ಥಿತಿ ಏನು? ವರುಣದಲ್ಲಿ ಹೊಂದಾಣಿಕೆ ಮಾಡಿಕೊಂಡರು. ರಾಜ್ಯದಲ್ಲಿ 27 ಕ್ಷೇತ್ರ ಎಸ್ಡಿಎ ಗೆಲ್ಲಬೇಕು. ಶಿವಮೊಗ್ಗ ಕ್ಷೇತ್ರದಲ್ಲಿ ನಾನು ಗೆಲ್ಲಬೇಕು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ನನಗೆ ಎಷ್ಟು ಸೀಟು ಬಿಜೆಪಿ ತೆಗೆದುಕೊಳ್ಳುತ್ತಾರೆ ಎನ್ನುವ ಭಯ ಶುರುವಾಗಿದೆ. ರಾಜ್ಯ ನಾಯಕರು ವರಿಷ್ಠರಿಗೆ ಏನೂ ಹೇಳುತ್ತಾರೆ ಗೊತ್ತಿಲ್ಲ. ನಾನು ಸೇರಿ ಬಿಜೆಪಿಯಿಂದ 28 ಸ್ಥಾನ ಗೆಲ್ಲುವ ವಿಶ್ವಾಸ ಇದೆ. ಏ. 19 ರಂದು ನನಗೆ ಚುನಾವಣೆ ಸ್ಪರ್ಧೆ ಚಿಹ್ನೆ ಸಿಗುತ್ತದೆ. ಏ. 12 ರಂದು ನಾನು ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ನನ್ನ ಜೊತೆ ಎಲ್ಲ ಹಿಂದೂಗಳು ಇದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಅಸ್ತಿಯ ಮೌಲ್ಯ ಎಷ್ಟು ಗೊತ್ತ? ಇಲ್ಲಿದೆ ಸಂಪೂರ್ಣ ಮಾಹಿತಿ