ಕೊಪ್ಪಳ: ಮುಂದಿನ ವಿಧಾನಸಭೆಯಲ್ಲಿ ಕಾಂಗ್ರೆಸ್ 60-70 ಸ್ಥಾನ ಗೆದ್ರೆ ಬೆರಳು ಕಟ್ ಮಾಡಿಕೊಳ್ಳುತ್ತೇನೆ ಅಂತ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಅವರು ಸವಾಲ್ ಹಾಕಿದ್ದಾರೆ. ಅವರು ಇಂದು ಕುಷ್ಟಗಿಯ ಬಿಜೆಪಿ ಜನಸ್ಪಂದನಾ ಕಾರ್ಯಕ್ರದಲ್ಲಿ ಮಾತನಾಡುತ್ತ ಈ ಬಗ್ಗೆ ಹೇಳಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 60 ಸೀಟುಗಳು ಗೆಲ್ಲಲ್ಲ. ಒಂದು ವೇಳೆ ಗೆದ್ದರೇ ನಾನು ನನ್ನ ಬೆರಳು ಕಟ್ ಮಾಡಿಕೊಳ್ಳುತ್ತೇನೆ ಎಂದು ಕೈಗೆ ಸವಾಲು ಹಾಕಿದರು.
ಇದೇ ವೇಳೆ ಅವರು ರಾಹುಲ್ ಗಾಂಧಿ ಎಷ್ಟೇ ತಿರುಗಾಡಿದ್ರು ಮತ್ತೆ ಅಧಿಕಾರಕ್ಕೆ ಬರೋದು ಇಲ್ಲ, ಅವರು ಸುಮ್ನೆ ತಿರಗಬೇಕು ಅಂತ ಹೇಳಿದರು. ಇನ್ನೂ ಕೆಲವು ದಿನಗಳ ಹಿಂದೆ ರಾಯಚೂರು ಜಿಲ್ಲೆಯಲ್ಲಿ ಕಾಂಗ್ರೆಸ್ 7 ಸ್ಥಾನ ಗೆದ್ದರೆ ಅರ್ಧ ಮೀಸೆ ತೆಗೆಯುವೆ ಅಂತ ಅವರು ಹೇಳಿದ್ದು, ಸ್ಮರಿಸಿಕೊಳ್ಳಬಹುದು.