ನವದೆಹಲಿ : ಆರ್‌ಬಿಐ ಹೊಸ 5000 ರೂ. ನೋಟುಗಳನ್ನು ಪರಿಚಯಿಸಲಿದೆಯೇ.? ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯೊಂದು ಸದ್ದು ಮಾಡ್ತಿದೆ. ಈ ಸುದ್ದಿಗೆ ಕೇಂದ್ರ ಸರ್ಕಾರ ಸಧ್ಯ ಪ್ರತಿಕ್ರಿಯಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಓಡಾಡುತ್ತಿರುವ ವೈರಲ್ ಸುದ್ದಿ ಸಂಪೂರ್ಣವಾಗಿ ಸುಳ್ಳು ಎಂದು ಅದು ಸ್ಪಷ್ಟಪಡಿಸಿದೆ.
ಸೋಮವಾರ ಸಂಜೆ ಪಿಐಬಿ ಫ್ಯಾಕ್ಟ್ ಚೆಕ್ ವಿಭಾಗವು ಟ್ವಿಟರ್ (ಎಕ್ಸ್)ನಲ್ಲಿ ಸ್ಪಷ್ಟಪಡಿಸಿದ್ದು, ಆರ್‌ಬಿಐ ಹೊಸ 5,000 ರೂ. ನೋಟುಗಳನ್ನು ಪರಿಚಯಿಸುವ ಯಾವುದೇ ನಿರ್ಧಾರವನ್ನ ತೆಗೆದುಕೊಂಡಿಲ್ಲ. ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಾಗಿ, https://rbi.org.in ವೆಬ್‌ಸೈಟ್’ನ್ನ ಸಂಪರ್ಕಿಸಬೇಕು ಎಂದು ಅದು ಸಲಹೆ ನೀಡಿದೆ. ನಕಲಿ ಮಾಹಿತಿಯ ಬಗ್ಗೆ ಎಚ್ಚರದಿಂದಿರಬೇಕು ಮತ್ತು ಅನುಮಾನಾಸ್ಪದ ಲಿಂಕ್’ಗಳ ಮೇಲೆ ಕ್ಲಿಕ್ ಮಾಡಬಾರದು ಎಂದು ಅದು ಸ್ಪಷ್ಟಪಡಿಸಿದೆ.
ಯಾವುದೇ ಅನುಮಾನಾಸ್ಪದ ಮಾಹಿತಿಯು ಹರಿದಾಡುತ್ತಿದ್ದರೆ, ಸಂಬಂಧಿತ ಲಿಂಕ್ ಅಥವಾ ಫೋಟೋವನ್ನು PIB FactCheck WhatsApp ಸಂಖ್ಯೆ +91 8799711259 ಅಥವಾ PIB FactCheck ಮೂಲಕ ಕಳುಹಿಸಬೇಕು.
⚠️ सतर्क रहें ⚠️
सोशल मीडिया पर दावा किया जा रहा है कि भारतीय रिजर्व बैंक द्वारा ₹5000 के नए नोट जारी किए जाएंगे#PIBFactCheck
✅ यह दावा #फर्जी है
✅@RBI द्वारा ऐसा कोई निर्णय नहीं लिया गया है
✅ आधिकारिक वित्तीय जानकारी हेतु वेबसाइट https://t.co/e6gEcOvLu3 पर विजिट करें pic.twitter.com/EF82vaxMvE
— PIB Fact Check (@PIBFactCheck) November 24, 2025
21 ಲಕ್ಷಕ್ಕೂ ಹೆಚ್ಚು ‘ಫ್ರಾಂಡ್ ನಂಬರ್’ಗಳು ಬ್ಯಾನ್ ; ಫೋನ್ ಬಳಕೆದಾರರಿಗೆ ‘ಟ್ರಾಯ್’ ಮಹತ್ವದ ಸಲಹೆ
ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆ ತಡೆಯಾಜ್ಞೆ ತೆರವಿಗೆ ಪ್ರಯತ್ನ: ಉಪಾಧ್ಯಕ್ಷ ಸುಂದರ್ ಸಿಂಗ್
ನಕಲಿ ‘IMEI’ ಇರುವ ಫೋನ್ ಬಳಸಿದ್ರೆ 50 ಲಕ್ಷ ರೂ. ದಂಡ ತೆರಬೇಕಾಗುತ್ತೆ; ದೂರಸಂಪರ್ಕ ಇಲಾಖೆ ಖಡಕ್ ಎಚ್ಚರಿಕೆ








