ಬೆಳಗಾವಿ : ಸಾಮಾನ್ಯವಾಗಿ ದಕ್ಷಿಣ ಕರ್ನಾಟಕದ ಭಾಗದಲ್ಲಿ ಚಿಕ್ಕಮಂಗಳೂರು ಶಿವಮೊಗ್ಗ ಹಾಸನದಲ್ಲಿ ಕಾಡಾನೆಗಳು ನಾಡಿಗೆ ಬರುವುದು ಸಾಮಾನ್ಯವಾಗಿದೆ. ಆದರೆ ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಇಂದು ಬೆಳ್ಳಂಬೆಳ್ಳಿ ಕಾಡಾನೆ ಗ್ರಾಮಕ್ಕೆ ನುಗ್ಗಿದ್ದು ಜನರಲ್ಲಿ ಭೀತಿ ಹುಟ್ಟಿಸಿದೆ.
ಕಾಂಗ್ರೆಸ್ ಹಿಂದೂ ವಿರೋಧಿ ಏಕೆ ? : ಟ್ವಿಟ್ ನಲ್ಲಿ ಕಾಂಗ್ರೆಸ್ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ
ಹೌದು ಬೆಳಗಾವಿಯ ವೈಭವ ನಗರ ಶಾಹು ನಗರದಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ. ಬೆಳ್ಳಂಬೆಳಗ್ಗೆ ಕಾಡಾನೆ ನೋಡಿ ಬೆಳಗಾವಿ ಜನರು ಗಾಬರಿಯಾಗಿದ್ದಾರೆ. ಈ ವೇಳೆ ತಕ್ಷಣ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಪೋಲೀಸರು ಆಗಮಿಸಿದ್ದಾರೆ ಕಾಡಾನೆಯನ್ನು ಅರಣ್ಯಕ್ಕೆ ಓಡಿಸಲು ಅರಣ್ಯ ಅಧಿಕಾರಿಗಳು ಹರಸಾಹಸ ಪಟ್ಟರು.ಮಹಾರಾಷ್ಟ್ರದ ಪಶ್ಚಿಮ ಘಟ್ಟದಿಂದ ಈ ಆನೆ ಬಂದಿದೆ ಎಂದು ಹೇಳಲಾಗುತ್ತಿದೆ.
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ 6ನೇ ಗ್ಯಾರಂಟಿ ಘೋಷಣೆ: ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್
ಮಹಾರಾಷ್ಟ್ರದ ಕೊವಡ್ ಗ್ರಾಮದಿಂದ ನೀರು ಕುಡಿಯೋಕೆ ಕಾಡಾನೆಗಳು ಗ್ರಾಮದತ್ತ ಬರುತ್ತವೆ ಎಂದು ಹೇಳಲಾಗುತ್ತಿದೆ. ಆದರೆ ಈ ಸಂದರ್ಭದಲ್ಲಿ ಮನುಷ್ಯರು ಓಡಾಡಿದ್ದು ಕಂಡುಬಂದಲ್ಲೇ ಕಾಡಾನೆ ದಾಳಿ ಮಾಡುವ ಸಂಭವವಿದೆ. ಹಿರೇ ಹೇಳಿ ಬೀದಿಯಲ್ಲಿ ರಾಜಾರೋಷವಾಗಿ ಕಾಡಾನೆ ನಡೆದು ಹೋಗುತ್ತಿರುವುದನ್ನು ಜನರು ಮುಗಿಬಿದ್ದು ನೋಡುತ್ತಿರುವ ದೃಶ್ಯ ಕಂಡು ಬಂದಿತು.