ಕೆಎನ್​ಎನ್​ ಡಿಜಿಟಲ್​ ಡೆಸ್ಕ್ : ಪತಿ-ಪತ್ನಿ ಜಗಳ, ಮತ್ತೆ ಒಂದಾಗೋದು ಸಾಮಾನ್ಯ. ಎಲ್ಲಾ ಗಂಡ-ಹೆಂಡತಿ ನಡುವೆ ಒಂದಲ್ಲ ಒಂದು ವಿಷಯಕ್ಕೆ ಜಗಳ ಇದ್ದೇ ಇರುತ್ತದೆ. ಕೆಲವೊಮ್ಮೆ ಈ ಜಗಳ ಎಷ್ಟರಮಟ್ಟಿಗೆ ಉಲ್ಬಣಿಸುತ್ತದೆ ಎಂದರೆ ವಿಷಯವು ಹೊಡೆದಾಟಕ್ಕೆ ತಲುಪುತ್ತದೆ. ಆದ್ರೆ, ಇಲ್ಲಿ ನಡೆದಿರುವ ಘಟನೆ ಎಲ್ಲದಕ್ಕಿಂತ ವಿಚಿತ್ರ.

ಹೌದು, ಗಾಢ ನಿದ್ರೆಯಲ್ಲಿದ್ದ ಪತಿ ಬೇರೊಬ್ಬ ಮಹಿಳೆಯೊಂದಿಗೆ ಇರುವಂತೆ ಕನಸು ಕಂಡಿದ್ದಾನೆ. ಈ ವೇಳೆ ಆತ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿರುವಂತೆ ಕನವರಿಸಿದ್ದಾನೆ. ಇದರಿಂದ ಕೋಪ ನೆತ್ತಿಗೇರಿದ ಪತ್ನಿ ಕುದಿಯುವ ನೀರನ್ನು ಆತನ ಮೇಲೆ ಸುರಿದಿದ್ದಾಳೆ. ಇದರಿಂದಾಗಿ ಅವನ ದೇಹದ ಕೆಲವು ಭಾಗಗಳು ಸಂಪೂರ್ಣವಾಗಿ ಸುಟ್ಟು ಹೋಗಿದೆ.

ಈ ಆಘಾತಕಾರಿ ಘಟನೆ ಬೊಲಿವಿಯಾದಲ್ಲಿ ನಡೆದಿದೆ. ಬೊಲಿವಿಯಾದ ಲಾ ಪಾಜ್‌ನಲ್ಲಿ ಪತ್ನಿಯೊಬ್ಬಳು ತನ್ನ ಪತಿ ಮಲಗಿದ್ದಾಗ ಬೇರೊಬ್ಬ ಮಹಿಳೆಯೊಂದಿಗಿರುವ ಕನಸು ಕಾಣುತ್ತಿದ್ದಾನೆ ಎಂಬ ಕಾರಣಕ್ಕೆ ಘೋರ ಶಿಕ್ಷೆ ನೀಡಿದ್ದಾಳೆ.

ನಂತ್ರ ಆಕೆಯೇ ಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾಳೆ. ನಡೆದ ಎಲ್ಲಾ ವಿಚಾರವನ್ನು ಪೊಲೀಸರಿಗೆ ಸಂಪೂರ್ಣವಾಗಿ ಹೇಳಿದ್ದು, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

Health tips‌ : ʻಈರುಳ್ಳಿಯಷ್ಟೇ ಸಿಪ್ಪೆʼಯೂ ಆರೋಗ್ಯಕ್ಕೆ ಪ್ರಯೋಜನಕಾರಿ.? ಈ ಬಗ್ಗೆ ನಿಮಗೇಷ್ಟು ಗೊತ್ತು.? ಇಲ್ಲಿದೆ ಮಾಹಿತಿ

ದಲೈಲಾಮಾ ಅವರ 87ನೇ ಜನ್ಮದಿನ : ದೂರವಾಣಿ ಕರೆ ಮಾಡಿ ಶುಭ ಕೋರಿದ ಪ್ರಧಾನಿ ಮೋದಿ | PM Modi greets Dalai Lama birthday

Share.
Exit mobile version