ನವದೆಹಲಿ : ದಲೈಲಾಮಾ ಅವರ 87 ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ದೂರವಾಣಿ ಕರೆ ಮಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ.

SHOCKING NEWS : ಗಣಿ ಜಿಲ್ಲೆಯಲ್ಲಿ ʻ ಘನಘೋರ ʼ ಘಟನೆ ಬೆಳಕಿಗೆ : ಮಹಿಳೆಯ ಪ್ರಾಣ ಹಿಂಡಿದ ʻ ಬುರ್ಖಾ ʼ

ಈ ಕುರಿತಂತೆ ಪ್ರಧಾನಿ ಮೋದಿಯವರು ಟ್ವೀಟ್​ ಮಾಡಿದ್ದು, ದಲೈಲಾಮಾ ಅವರಿಗೆ ಇಂದು ಫೋನ್ ಮೂಲಕ 87 ನೇ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದೇವೆ. ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾವು ಪ್ರಾರ್ಥಿಸುತ್ತೇವೆ ಎಂದೇಳಿದ್ದಾರೆ.

ದಲೈಲಾಮಾ ಅವರ 87ನೇ ಹುಟ್ಟುಹಬ್ಬವನ್ನು ಧರ್ಮಶಾಲಾದಲ್ಲಿ ಆಚರಿಸಲಾಯಿತು.ಸೆಂಟ್ರಲ್ ಟಿಬೆಟಿಯನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಲಿವುಡ್ ನಟ ರಿಚರ್ಡ್ ಗೆರೆ ಕೂಡ ಭಾಗವಹಿಸಿದ್ದರು. ಇದರ ಜೊತೆಗೆ ಸಿಎಂ ಠಾಕೂರ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು.

ಸ್ವಲ್ಪ ಸಮಯದ ಹಿಂದೆ ನಾನು ದಲೈ ಲಾಮಾ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದೇನೆ. ಅವರು ತುಂಬಾ ಸಂತೋಷಪಟ್ಟರು. ಅವರ ಜನ್ಮದಿನದಂದು ನಾನು ಅವರಿಗೆ ಶುಭ ಹಾರೈಸಿದಾಗ ಅವರು ನನಗೆ ದೇವಭೂಮಿ ಹಿಮಾಚಲದಲ್ಲಿ ವಾಸಿಸುವ ಅವಕಾಶವನ್ನು ನೀಡಿದಕ್ಕಾಗಿ ಹಿಮಾಚಲ ಸರ್ಕಾರ ಮತ್ತು ಕೇಂದ್ರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು ಎಂದು ಠಾಕೂರ್ ಹೇಳಿದ್ದಾರೆ.

1959 ರಲ್ಲಿ ಚೀನಾದಿಂದ ಪಲಾಯನ ಮಾಡಿದ ನಂತರ ದಲೈ ಲಾಮಾ ಭಾರತವನ್ನು ತನ್ನ ಮನೆಯಾಗಿ ಮಾಡಿಕೊಂಡಿದ್ದಾರೆ. ಅಹಿಂಸೆ ಮತ್ತು ಸ್ವಾತಂತ್ರ್ಯದ ಕಟ್ಟಾ ಪ್ರತಿಪಾದಕರಾದ ದಲೈ ಲಾಮಾ ಅವರಿಗೆ 1989 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ.

Watch: ಡ್ರಮ್ಸ್ ಬಾರಿಸುವ ಮೂಲಕ ಪತಿ ಸಿಎಂ ಏಕನಾಥ್ ಶಿಂಧೆ ಅವರನ್ನು ಮನೆಗೆ ಸ್ವಾಗತಿಸಿದ ಪತ್ನಿ!

Share.
Exit mobile version