ಬೆಂಗಳೂರು: ಲೋಕಸಭಾ ಚುನಾವಣೆಯ ಬೆನ್ನಲ್ಲೇ ಕರ್ನಾಟಕ 6 ವಿಧಾನಪರಿಷತ್ತಿನ ಸ್ಥಾನಗಳ ಭರ್ತಿಗೆ ಚುನಾವಣೆ ಘೋಷಣೆಯಾಗಿದೆ. ಜೂನ್.3ರಂದು ವಿಧಾನಪರಿಷತ್ತಿನ 6 ಸ್ಥಾನಗಳಿಗೆ ಮತದಾನ ನಡೆದ್ರೆ, ಜೂನ್.6ರಂದು ಫಲಿತಾಂಶ ಪ್ರಕಟವಾಗಲಿದೆ.

ಚುನಾವಣಾ ಆಯೋಗದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಮೂರು ಶಿಕ್ಷಕರ ಕ್ಷೇತ್ರ ಹಾಗೂ ಮೂರು ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಮೇ.16ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ರೇ, ಮೇ.20 ನಾಮಪತ್ರವನ್ನು ಹಿಂಪಡೆಯಲು ಕೊನೆಯ ದಿನವಾಗಿದೆ ಎಂದಿದೆ.

ದಿನಾಂಕ 21-06-2024ರಂದು ಕರ್ನಾಟಕ ನಾರ್ಥ್ ಈಸ್ಟ್ ಪದವೀಧರರ ಕ್ಷೇತ್ರದ ಡಾ.ಚಂದ್ರಶೇಖರ ಬಿ ಪಾಟೀಲ್, ಸೌಥ್ ವೆಸ್ಟ್ ಪದವೀಧರರ ಕ್ಷೇತ್ರ ಆಯನೂರು ಮಂಜುನಾಥ್ ಹಾಗೂ ಬೆಂಗಳೂರು ಪದವೀಧರರ ಕ್ಷೇತ್ರದ ಎ ದೇವೇಗೌಡ ಅಭ್ಯರ್ಥಿಗಳ ಸ್ಥಾನಗಳು ಖಾಲಿಯಾಗಲಿವೆ. ಅಲ್ಲದೇ ಕರ್ನಾಟಕ ಸೌಥ್ ಈಸ್ಟ್ ಶಿಕ್ಷಕರ ಕ್ಷೇತ್ರದ ಡಾ.ವೈಎ ನಾರಾಯಣಸ್ವಾಮಿ, ಕರ್ನಾಟಕ ಸೌತ್ ವೆಸ್ಟ್ ಶಿಕ್ಷಕರ ಕ್ಷೇತ್ರದ ಎಸ್ ಎಲ್ ಬೋಜೇಗೌಡ ಹಾಗೂ ಸೌಥ್ ಶಿಕ್ಷಕರ ಕ್ಷೇತ್ರ ಮರಿತಿಬ್ಬೇಗೌಡ ಅವರು ನಿವೃತ್ತರಾಗಲಿದ್ದಾರೆ. ಈ 6 ವಿಧಾನಪರಿಷತ್ತಿನ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ.

ಮೇ.9ರಂದು 6 ವಿಧಾನಪರಿಷತ್ತಿನ ಸ್ಥಾನಗಳಿಗೆ ಅಧಿಸೂಚನೆ ಹೊರಬೀಳಲಿದೆ. ಮೇ.16 ನಾಮಪತ್ರವನ್ನು ಸಲ್ಲಿಸೋದಕ್ಕೆ ಕೊನೆಯ ದಿನವಾಗಿದೆ. ನಾಮಪತ್ರಗಳ ಪರೀಶನೆ ಮೇ.17ರಂದು ನಡೆಯಲಿದೆ. ನಾಮಪತ್ರವನ್ನು ಅಭ್ಯರ್ಥಿಗಳು ಹಿಂಪಡೆಯಲು ಮೇ.20 ಕೊನೆಯ ದಿನವಾಗಿದೆ.

ಜೂನ್.3ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ 6 ವಿಧಾನಪರಿಷತ್ತಿನ ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಬಳಿಕ ಜೂನ್.6ರಂದು ಮತಏಣಿಕೆ ಕಾರ್ಯ ನಡೆದು, ಅಂದೇ ಫಲಿತಾಂಶ ಪ್ರಕಟವಾಗಲಿದೆ. ಜೂನ್.12ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

ವರದಿ: ವಸಂತ ಬಿ ಈಶ್ವರಗೆರೆ

ಕ್ಯಾನ್ಸರ್ ಪ್ರಕರಣಗಳಿಗೆ 648 ಕೋಟಿ ಪರಿಹಾರ ನೀಡಲು `ಜಾನ್ಸನ್ & ಜಾನ್ಸನ್’ ಅಂಗಸಂಸ್ಥೆ ನಿರ್ಧಾರ

Prajwal Revanna: ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ವೀಡಿಯೋ ವೈರಲ್ ‘ಸೂತ್ರಧಾರಿ’ ಸುಳಿವು ಪತ್ತೆ

Prajwal Revanna: ಪ್ರಜ್ವಲ್ ರೇವಣ್ಣ ವೀಡಿಯೋ ಬಿಡುಗಡೆಗೆ ಕ್ಷಣಗಣನೆ, 8AM: ಏ.8ರಂದೇ ‘ಫೇಸ್ ಬುಕ್’ನಲ್ಲಿ ‘ನವೀನ್ ಗೌಡ ಪೋಸ್ಟ್’

Share.
Exit mobile version