ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಅದೇ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಮಾಡಿದಂತ ಸೂತ್ರಧಾರಿಯ ಸುಳಿವು ಪತ್ತೆಯಾಗಿರೋದಾಗಿ ತಿಳಿದು ಬಂದಿದೆ.

ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಪ್ರಕರಣದಲ್ಲಿ, ಇದೀಗ ಮತ್ತೊಂದು ಹೊಸ ಟ್ವಿಸ್ಟ್ ಸಿಕ್ಕಿದೆ. ಅದೇ ವಾಟ್ಸ್ ಆಪ್ ನಲ್ಲಿ ಮೊದಲು ಶೇರ್ ಮಾಡಿದಂತ ಆರೋಪಿಯ ಸುಳಿವು ಪತ್ತೆಯಾಗಿದೆಯಂತೆ.

ಮೊದಲು ಯಾರು ವಾಟ್ಸ್ ಆಪ್ ನಲ್ಲಿ ಕಾಪಿ ಮಾಡಿದ್ರೋ ಆ ವ್ಯಕ್ತಿಯ ಸುಳಿವು ಪತ್ತೆಯಾಗಿದೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋವನ್ನು ಮೊದಲು ವಾಟ್ಸ್ ಆಪ್ ನಲ್ಲಿ ಶೇರ್ ಮಾಡಿದ್ದೇ ಶ್ರೇಯಸ್ ಶಿಷ್ಯ ಎಂಬುದಾಗಿ ತಿಳಿದು ಬಂದಿದೆ.

ಕೈ ಮುಖಂಡನಿಗೆ ಮೊದಲು ವಾಟ್ಸ್ ಮೂಲಕ ಶ್ರೇಯಸ್ ಶಿಷ್ಯ ಪ್ರಜ್ವಲ್ ರೇವಣ್ಣ ಅವರ ವೀಡಿಯೋ ಕಳುಹಿಸಿರೋದಾಗಿ ಪತ್ತೆಯಾಗಿದೆ ಎನ್ನಲಾಗಿದೆ. ಸ್ವತಹ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ನಂಬರ್ ನಿಂದಲೇ ಅಶ್ಲೀಲ ವೀಡಿಯೋ ಶೇರ್ ಮಾಡಿರೋದಾಗಿ ಪತ್ತೆಯಾಗಿದೆ ಎನ್ನಲಾಗುತ್ತಿದೆ.

ಶ್ರೇಯಸ್ ಶಿಷ್ಯ ಮೊದಲು ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋವನ್ನು ಮಾಜಿ ಕಾರು ಚಾಲಕ ಕಾರ್ತಿಕ್ ನಂಬರ್ ನಿಂದಲೇ ವಾಟ್ಸ್ ಆಪ್ ನಲ್ಲಿ ಕಾಂಗ್ರೆಸ್ ಮುಖಂಡರಿಗೆ ವೀಡಿಯೋ ಶೇರ್ ಮಾಡಿರೋ ಸ್ಕ್ರೀನ್ ಶಾಟ್ ಕೂಡ ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.

ರಾಹುಲ್ ಗಾಂಧಿಯನ್ನು ಭಾರತದ ಪ್ರಧಾನಿಯನ್ನಾಗಿ ಮಾಡಲು ಪಾಕ್ ಬಯಸಿದೆ: ಮೋದಿಯಿಂದ ಸ್ಪೋಟಕ ಮಾಹಿತಿ

ಕ್ಯಾನ್ಸರ್ ಪ್ರಕರಣಗಳಿಗೆ 648 ಕೋಟಿ ಪರಿಹಾರ ನೀಡಲು `ಜಾನ್ಸನ್ & ಜಾನ್ಸನ್’ ಅಂಗಸಂಸ್ಥೆ ನಿರ್ಧಾರ

Share.
Exit mobile version