ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರ ಗೌಡ ಹಾಗೂ ಎಲ್ಲಾ 17 ಆರೋಪಿಗಳನ್ನು ತಕ್ಷಣ ಬಂಧಿಸಿದ್ದಾರೆ. ಆದರೆ ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಈ ರೀತಿ ಕ್ರಮ ಯಾಕೆ ಆಗಲಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು.
ಇಂದು ವಿಧಾನಸಭೆಯಲ್ಲಿ ಮಾತನಾಡಿದ ಅವರು,ಕೊಲೆ ಮಾಡಿದರು ಅಂತ ದರ್ಶನ ಅಂಡ್ ತಂಡವನ್ನು ಬಂಧಿಸಿದರು. ಆದರೆ ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣಕ್ಕೆ ಸಂಬಂದಿಸಿದಂತೆ ಏಕೆ ಈ ರೀತಿ ತಕ್ಷಣ ಬಂದಿಸುವ ಕ್ರಮ ಆಗಲಿಲ್ಲ ಎಂದು ವಿಧಾನಸಭೆಯಲ್ಲಿ ಶಾಸಕ ಬಸನಗೌಡ ಯತ್ನಾಳ್ ಪ್ರಶ್ನಿಸಿದರು.
ಹಗರಣ ಬೆಳಕಿಗೆ ಬಂದ ಬಳಿಕ 40 ದಿನಗಳ ಕಳೆದರೂ ಕೂಡ ಯಾರನ್ನು ಬಂಧನ ಮಾಡಿಲ್ಲ ಯಾಕೆ? ನಮ್ಮ ಹೋರಾಟ ಬಳಿಕ ನಾಗೇಂದ್ರ ರಾಜೀನಾಮೆ ಪಡೆದರು. ನಂತರ ಅಧಿಕಾರಿಗಳನ್ನು ಬಂಧಿಸಿ ವಿಚಾರಣೆ ನಡೆಸಿದರು. ಸರ್ಕಾರ ಯಾಕೆ ಹಳಿ ತಪ್ಪಿತೋ ಗೊತ್ತಿಲ್ಲ ಸಿಎಂ ಸಿದ್ದರಾಮಯ್ಯರ ಮೇಲೆ ಭಾರಿ ನಂಬಿಕೆ ಇತ್ತು ಎಂದರು
ಯಾಕೆ ಈ ರೀತಿ ಆಯಿತು ಗೊತ್ತಾಗುತ್ತಿಲ್ಲ. ಯಾಕೆ ಎಲ್ಲಾ ನಿಗಮದ ಹಣ ನಿಲ್ಲಿಸಿದ್ದೀರಿ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಎಲ್ಲಾ ನಿಗಮಗಳ ಬಗ್ಗೆಯೂ ಕೂಡ ಮಾತನಾಡಬೇಕು. ಚುನಾವಣಾ ಆಯೋಗವು ಇದರ ಕುರಿತು ತನಿಖೆ ಮಾಡಬೇಕು ಎಂದು ವಿಧಾನಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದರು.
ಇದೆ ವೇಳೆ ಚರ್ಚೆಯ ಸಂದರ್ಭದಲ್ಲಿ ಸ್ವಪಕ್ಷದವರನ್ನೇ ಯತ್ನಾಳ ಲೇವಡಿ ಮಾಡಿದ ಘಟನೆಯ ನಡೆಯಿತು. ಬಿಜೆಪಿಯಿಂದ ಉಗ್ರ ಪ್ರತಿಭಟನೆ ರಾಜ್ಯ ಸರ್ಕಾರ ಗಢಗಢ ನಡುಗುತ್ತಿದ್ದು ಎಂದು ಉಲ್ಲೇಖಸಿ ನಂತರ ಗಡ ಗಢಗಢನು ಇಲ್ಲ ಬಡಬಡನು ಇಲ್ಲ. ಪ್ರತಿಭಟನೆ ನಂತರ ಅಶೋಕ್ ಸಿಎಂ ಗೆ ಕರೆ ಮಾಡುತ್ತಾರೆ. ತಪ್ಪು ತಿಳಿದುಕೊಳ್ಳಬೇಡಿ ಸರ್ ಮೇಲಿನವರ ಒತ್ತಡ ಇತ್ತು ಹೈಕಮಾಂಡ್ ಒತ್ತಡ ಅಂತಾರೆ ಎಂದು ಶಾಸಕ ಬಸನಗೌಡ ಪಾಟೀಲ ಸ್ವ ಪಕ್ಷದವರನ್ನೆ ಲೇವಡಿ ಮಾಡಿದರು.