ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ಕೊಲೆ ಆರೋಪಿ ನಟ ದರ್ಶನ್ ಕನಿಷ್ಠ ಸೌಲಭ್ಯ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ವಿಚಾರವಾಗಿ ಕಾನೂನು ಪ್ರಾಧಿಕಾರ ಜೈಲಲ್ಲಿ ಕನಿಷ್ಠ ಸೌಲಭ್ಯ ನೀಡಲಾಗುತ್ತದೆಯೋ ಇಲ್ಲವೋ ಎಂದು ಪರಿಶೀಲಿಸಿ ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟಿಗೆ ವರದಿಯನ್ನು ಸಲ್ಲಿಸಿದರು.
ವರದಿ ಸಲ್ಲಿಸಿದ ಬಳಿಕ ನಟ ದರ್ಶನ್ ಜೈಲಿನಲ್ಲಿ ತನ್ನ ಸಹಚರರೊಂದಿಗೆ ಕೂಗಾಡಿದ್ದಾರೆ. ಜೈಲಿನ ನಿಯಮದ ಪ್ರಕಾರ ಸೌಲಭ್ಯ ನೀಡಿದರು, ದರ್ಶನ್ ಆರೋಪಿಸಿದ್ದಾರೆ. ಖುದ್ದು ನ್ಯಾಯಾಧೀಶರ ಭೇಟಿಗೂ ಆರೋಪಿ ದರ್ಶನ್ ಅರ್ಜಿ ಹಾಕಿದ್ದರು. ಕಾನೂನು ಸೇವೆಗಳ ಪ್ರಾಧಿಕಾರ ವರದಿ ವಿಚಾರ ಕೇಳಿ ದರ್ಶನಗೆ ಶಾಕ್ ಆಗಿದೆ. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ವರದರಾಜ್ ವರದಿಯನ್ನು ನಿನ್ನೆ ಕೋರ್ಟಿಗೆ ಸಲ್ಲಿಸಿದ್ದರು. ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
ಈ ವೇಳೆ ಬ್ಯಾರಕ್ ನಲ್ಲಿ ನಟ ದರ್ಶನ್ ವರದಿ ನನ್ನ ವಿರುದ್ಧ ಇದೆ ಎಂದು ಕೂಗಾಡಿದ್ದಾರೆ. ಸಹ ಕೈದಿಗಳ ಜೊತೆಗೆ ಕೊಲೆ ಆರೋಪಿ ದರ್ಶನ್ ಕೂಗಾಡಿದ್ದಾರೆ. ನನಗೆ ಏಕೆ ಈ ಶಿಕ್ಷೆ ನಾನು ಹೀಗೆ ಸಾಯಬೇಕಾ ಅಂತ ಗೋಳಾಡಿದ್ದಾರೆ. ದರ್ಶನ್ ಕೋಪಗೊಂಡ ರೀತಿ ನೋಡಿ ಇತರೆ ಕೈದಿಗಳು ಸೈಲೆಂಟ ಆಗಿದ್ದಾರೆ. ದರ್ಶನ್ ಅನ್ನು ತಕ್ಷಣ ಆರೋಪಿ ನಾಗರಾಜ್ ಸಮಾಧಾನ ಮಾಡಿದ್ದಾನೆ ಅದು ಬಿಟ್ಟರೆ ಉಳಿದವರು ದರ್ಶನ್ ಕಡೆ ನೋಡದೆ ಸೈಲೆಂಟ್ ಆಗಿದ್ದಾರೆ.
ಕೆಲ ಕಾಲ ಕಿರುಚಾಡಿದ ಬಳಿಕ ದರ್ಶನ್ ಮತ್ತೆ ಸೈಲೆಂಟ್ ಆಗಿದ್ದಾರೆ ಇಂದು ವಕೀಲರ ಜೊತೆ ಮಾತನಾಡಬೇಕು ಅಂತ ದರ್ಶನ್ ಹೇಳಿದ್ದ. ಈಗ ಆಗಿರುವುದು ಹಾಗಿದೆ ಮುಂದೇನು ಅಂತ ಮಾತುಕತೆ ನಡೆಸಿದ್ದಾನೆ. ಅಲ್ಲದೇ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಲು ದರ್ಶನ್ ನಿರ್ಧಾರ ಮಾಡಿದ್ದಾನೆ ಎಂದು ತಿಳಿದುಬಂದಿದೆ.