ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನದಲ್ಲಿ ಜೀವನ ಶೈಲಿಯಿಂದ ಅನಾರೋಗ್ಯ ತುತ್ತಾಗುತ್ತಿದ್ದೇವೆ. ತಮ್ಮ ಬೇಕು ಬೇಡಗಳನ್ನು ಪೂರೈಸಿಕೊಳ್ಳುವ ಶಕ್ತಿ ಇಂದು ಮನುಷ್ಯನಿಗೆ ಇದ್ದರೂ ಕೂಡ ಆರೋಗ್ಯವನ್ನು ಮಾತ್ರ ಗೆಲ್ಲಲು ಸಾಧ್ಯವಾಗುತ್ತಿಲ್ಲ.
ಅದರಲ್ಲೂ ಮಾನಸಿಕವಾಗಿ ಮನುಷ್ಯ ದಿನದಿಂದ ದಿನಕ್ಕೆ ಕುಗ್ಗುತ್ತಿದ್ದಾನೆ. ಏಕೆ ನಾವೆಲ್ಲರೂ ಚಿಕ್ಕ ವಯಸ್ಸಿನಲ್ಲಿ ಇದ್ದ ಸಂತೋಷವನ್ನು ನೆಮ್ಮದಿಯನ್ನು ಈಗ ಕಾಣಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಒಮ್ಮೆ ಕುಳಿತು ಆಲೋಚನೆ ಮಾಡಿದರೆ, ಹಲವಾರು ಕಾರಣಗಳು ತೆರೆದು ಕೊಳ್ಳುತ್ತವೆ. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ತಿಳಿಸಲಾಗಿದೆ.
ಅತಿ ಹೆಚ್ಚು ಡಿಜಿಟಲ್ ಬಳಕೆ
ಇಂದಿನ ದಿನಗಳಲ್ಲಿ ಪ್ರಪಂಚ ಡಿಜಿಟಲ್ ಮಾಯವಾಗಿದೆ. ಎಲ್ಲಾ ಕೆಲಸಗಳು ನಮ್ಮ ಕೈ ಬೆರಳುಗಳಲ್ಲಿ ನಡೆಯುವಂತಹ ಕಾಲ ಬಂದಿದೆ.
ಬಹಳಷ್ಟು ಜನರು ಇಂದು ತಮ್ಮ ದುಡಿಮೆಯ ಜೊತೆಗೆ ಇತರ ಕೆಲಸಗಳಿಗೂ ಸಹ ಟೆಕ್ನಾಲಜಿ ಮೇಲೆ ಅವಲಂಬಿತರಾಗಿದ್ದಾರೆ. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಜನರ ಸ್ವನಿರ್ಮಿತ ಆತ್ಮವಿಶ್ವಾಸ ಕುಗ್ಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ.
ಜಂಕ್ ಫುಡ್ ಸೇವನೆ
ನಾವು ತಿನ್ನುತ್ತಿರುವ ಆಹಾರ ಇಂದು ವಿಷಮಯವಾಗಿದೆ. ಅದರಿಂದಲೇ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹಾಳಾಗುತ್ತಿದೆ. ಈಗಂತೂ ರಸ್ತೆ ಬದಿ ಆಹಾರಗಳಿಗೆ ಫುಲ್ ಬೇಡಿಕೆ ಹೆಚ್ಚಿದೆ.
ಅಲ್ಲಿ ಸ್ವಚ್ಛತೆ ಇಲ್ಲದೆ ಇದ್ದರೂ ಕೂಡ ಆಹಾರ ತಿನ್ನಲು ರುಚಿ ಆಗಿರುವುದರಿಂದ ಎಲ್ಲರೂ ಕೂಡ ಬೀದಿ ಬದಿಯ ಆಹಾರಗಳಿಗೆ ಮಾರುಹೋಗುತ್ತಿದ್ದಾರೆ. ಮಾನಸಿಕ ಆರೋಗ್ಯದ ಮೇಲೆ ಇದು ತೀವ್ರತರದ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಸಂಶೋಧನೆ ಹೇಳುತ್ತಿದೆ.
ದುಚ್ಚಟಗಳು
ಜನರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹದಗೆಡಲು ಇಂದು ಪೂರಕವಾದ ವಾತಾವರಣವನ್ನು ಸಮಾಜ ನಿರ್ಮಾಣ ಮಾಡಿದೆ. ಅದರಲ್ಲಿ ಧೂಮಪಾನ ಹಾಗೂ ಮಧ್ಯಪಾನ ಕೂಡ ಒಂದು.ಶಾಲಾ, ಕಾಲೇಜಿಗೆ ಹೋಗುವ ಮಕ್ಕಳು ಕೂಡ ಈ ದಾಸ್ಯಕ್ಕೆ ತಮ್ಮನ್ನು ತಾವು ಬಲಿಕೊಟ್ಟು ಕೊಳ್ಳುತ್ತಿದ್ದಾರೆ.
ಸಂಬಂಧಗಳು ಉಳಿಯುತ್ತಿಲ್ಲ
ಹಳೆಯ ಕಾಲದಂತೆ ಈಗಿನ ಕಾಲದಲ್ಲಿ ಮಾಡುವ ಮದುವೆಗಳು ಎಷ್ಟು ದಿನಗಳ ಕಾಲ ಬಾಳಿಕೆ ಹೊಂದಿರುತ್ತವೆ ಎಂದು ಹೇಳಲು ಸಾಧ್ಯವೇ ಇಲ್ಲ. ಇಂದು ಮನುಷ್ಯ ಎಲ್ಲಾ ಇದ್ದು ಕೂಡ ನೆಮ್ಮದಿಯಾಗಿ ಬದುಕಲು ಆಗುತ್ತಿಲ್ಲ.