ಬೆಂಗಳೂರು : ಶಾಸಕ ಪ್ರದೀಪ್ ಈಶ್ವರ್ ಸಂಸದ ಪ್ರತಾಪ್ ಸಿಂಹ ಕುರಿತು ಈ ಹಿಂದೆ ಏಕವಚನದಲ್ಲಿ ಪ್ರತಾಪ್ ಸಿಂಹ ಒಬ್ಬ ಮುಠ್ಠಾಳ ಅಯೋಗ್ಯ ಎಂದು ವಾಗ್ದಾಳಿ ನಡೆಸಿದ್ದರು. ಹೀಗಾಗಿ ಸಂಸದ ಪ್ರತಾಪ್ ಸಿಂಹ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಮಾನನಷ್ಟ ಕೇಸ್ ದಾಖಲಿಸಿದ್ದಾರೆ.
BREAKING: ರಾಜ್ಯ ಸಭೆ ಚುನಾವಣಾ ‘ಫಲಿತಾಂಶ’ ಪ್ರಕಟ: ಕಾಂಗ್ರೆಸ್ 3, ಬಿಜೆಪಿಗೆ 1 ಸ್ಥಾನ! ಜೆಡಿಎಸ್‌ಗೆ ಮುಖಭಂಗ!!
ಇದಕ್ಕೆ ಇದೀಗ ಪ್ರದೀಪ ಈಶ್ವರ ತಿರುಗೇಟು ನೀಡಿದ್ದು ಬೆಂಗಳೂರಿನಲ್ಲಿ ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನ ಇದ್ದವರು ಮಾನನಷ್ಟ ಕೇಸ್ ದಾಖಲಿಸುತ್ತಾರೆ. ಪ್ರತಾಪ್ ಸಿಂಹ ಯಾಕೆ ದಾಖಲಿಸಿದ್ದಾರೆ? ಎಂದು ವ್ಯಂಗ್ಯವಾಡಿದ್ದಾರೆ.
“13.5 ಕೋಟಿ ರೂಪಾಯಿ ವಂಚಿಸಿದ್ದಾರೆ” ICICI ಬ್ಯಾಂಕ್ ಮ್ಯಾನೇಜರ್ ವಿರುದ್ಧ ಭಾರಿ ವಂಚನೆ ಆರೋಪ
ಪ್ರತಾಪ್ ಸಿಂಹ ಬೈಬರ್ತ್ ರೈಟರ್ ಇರಬಹುದು. ನಾನು ಫೈಟರ್ ಪ್ರತಾಪ್ ಸಿಂಹ ಅವರೇ ಮಾಧ್ಯಮ ಮುಂದೆ ಬಿಲ್ಡ್ ಅಪ್ ಕೊಡುವುದಲ್ಲ, ತಾಕತ್ತಿದ್ದರೆ ಪ್ರತಾಪ್ ಸಿಂಹ ಚರ್ಚೆಗೆ ಬರಬೇಕು. ಅಯೋಗ್ಯ ಮುಠ್ಠಾಳನನ್ನು ಅಯೋಗ್ಯ ಮುಠಾಳ ಅಂತಾನೆ ಹೇಳುತ್ತೇವೆ. ನಿಮ್ಮ ಮಾನನಷ್ಟ ಕೇಸಿಗೆ ಹೆದರುವುದಿಲ್ಲ ಎಂದು ಪ್ರದೀಪ್ ಈಶ್ವರ ವಾಗ್ದಾಳಿ ನಡೆಸಿದ್ದಾರೆ.
ಮೊಬೈಲ್ ಬಳಕೆದಾರರೇ ಗಮನಿಸಿ: ಆನ್ ಲೈನ್ ನಲ್ಲಿ ಸುರಕ್ಷಿತವಾಗಿರಲು ಕೇಂದ್ರ ಸರ್ಕಾರ ನೀಡಿದೆ ಈ ಸಲಹೆ!
ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ನಡೆದ ಗ್ರಾಮ ಪಂಚಾಯಿತಿ ಕಟ್ಟಡ ಶಂಕುಸ್ಥಾಪನಾ ಕಾರ್ಯಕ್ರಮದ ವೇಳೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.ಪ್ರತಾಪ್ ಸಿಂಹ ಒಬ್ಬ ದೊಡ್ಡ ಅಯೋಗ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.
ಬಾಯಿ ಮುಚ್ಕಂಡು ಸುಮ್ಮನಿದ್ದರೆ ಸರಿ. ಇಲ್ಲವಾದಲ್ಲಿ ಇಡೀ ಕಾಂಗ್ರೆಸ್ ಪಾಳಯ ಮೈಸೂರಿಗೆ ಇಳಿಯಬೇಕಾಗುತ್ತೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಡಾ ಕೆ ಸುಧಾಕರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, ತಾನು ಕಾಂಗ್ರೆಸ್ ನಿಂದ ಕಣಕ್ಕಿಳಿಯಲು ಸಿದ್ಧ ಎಂದು ಪ್ರದೀಪ್ ಈಶ್ವರ್ ಗುಡುಗಿದ್ದರು.
ಈ ಹಿನ್ನೆಲೆ ಪ್ರದೀಪ್ ಈಶ್ವರ್ ವಿರುದ್ಧ ಪ್ರತಾಪ್ ಸಿಂಹ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದಾರೆ. ತನ್ನ ವಿರುದ್ಧ ಏಕವಚನದಲ್ಲಿ ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಕ್ರಿಮಿನಲ್ ಮಾನನಷ್ಟ ಕೇಸ್ ದಾಖಲಿಸುವಂತೆ ಖಾಸಗಿ ದೂರು ಸಲ್ಲಿಸಿದ್ದಾರೆ.