ಕಲಬುರ್ಗಿ : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯಲ್ಲಿ ಐಟಿಬಿಟಿ ಪ್ರಿಯಾಂಕ್ ಖರ್ಗೆ ಮಾತನಾಡಿದ್ದು, ವಿಶ್ವಗುರುವಿಗೆ ಎಲ್ಲಾ ಗೊತ್ತಿರುತ್ತೆ ಅಂತಾರೆ ಇದೇಕೆ ಗೊತ್ತಿರಲ್ಲ? ಹುಬ್ಬಳ್ಳಿ ನೇಹಾ ಹತ್ಯೆ ಕೇಸ್ ಬಗ್ಗೆ ಇದ್ದ ಕಾಳಜಿ ಪ್ರಜ್ವಲ್ ಕೇಸ್ ನಲ್ಲಿ ಯಾಕೆ ಇಲ್ಲ? ಎಂದು ಕಲ್ಬುರ್ಗಿಯಲ್ಲಿ ಐಟಿ ಬಿಟಿ ಸಚಿವ ಪ್ರಿಯಾಂಕ ಖರ್ಗೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಪೆನ್ ಡ್ರೈವ್ ಮಾಡಿದ್ದು ಯಾರು, ಬಿಡುಗಡೆ ಮಾಡಿದ್ಯಾರು ಎಲ್ಲಾ ಗೊತ್ತಿದೆ ಎಂದು ಕಲಬುರ್ಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದರು.ಮೈತ್ರಿ ಅಭ್ಯರ್ಥಿ ಬಿಡುಗಡೆ ಮಾಡಿದ್ದು ಅಂತ ಚಾಲಕ ಹೇಳುತ್ತಾನೆ.ಎಲ್ಲಾ ವಿಷಯ ಗೊತ್ತಿದ್ದರೂ ಬಿಜೆಪಿಗರು ಪ್ರಜ್ವಲ್ ಗೆ ಟಿಕೆಟ್ ಕೊಟ್ಟರು. ಸರ್ಕಾರ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡಲು ಹೇಳಿದೆ. ಆದರೆ ಇದುವರೆಗೂ ಕೇಂದ್ರ ಸರ್ಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂದು ಪ್ರಶ್ನಿಸಿದರು.
ಎಸ್ಐಟಿ ರಚನೆ ಮಾಡಿ ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪ ವಿಚಾರ ಕುಮಾರಸ್ವಾಮಿ ಆರೋಪಕ್ಕೆ ಸಚಿವ ಪ್ರಿಯಾಂಕ ಖರ್ಗೆ ತಿರುಗಿತು ನೀಡಿದ್ದು,ಈ ಕೇಸ್ ಎಸ್ಐಟಿ ಬಿಟ್ಟು ಎನ್ ಜಿ ಒಗೆ ಕೊಡುವುದಕ್ಕೆ ಆಗುತ್ತಾ ಪ್ರಕರಣದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿಲ್ಲ ಎಂದು ತಿರುಗೇಟು ನೀಡಿದರು.