Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶನಿ ದೋಷದಿಂದ ವಿಮುಕ್ತಿಗಾಗಿ ಶನಿ ಜಯಂತಿಯನ್ನು ಹೀಗೆ ತಪ್ಪದೇ ಮಾಡಿ!

BREAKING: ಪಿಎಂ ಮೋದಿ ಕುರಿತು ದಾರಿ ತಪ್ಪಿಸುವ ಎಕ್ಸ್ ಪೋಸ್ಟ್: ಮಧು ಕಿಶ್ವರ್‌ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್!

Too much sex: ಅತಿಯಾದ ಲೈಂಗಿಕ ಕ್ರಿಯೆಯಿಂದ ವೀರ್ಯಾಣುಗಳ ಸಂಖ್ಯೆ ಕಮ್ಮಿಯಾಗುತ್ತಾ? ತಜ್ಞರ ಮಾಹಿತಿ ಇಲ್ಲಿದೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಂದು ‘ಗುಡ್ ಫ್ರೈಡೇ’; ಯೇಸು ಕ್ರಿಸ್ತನ ಬಲಿದಾನದ ದಿನವನ್ನು ‘ಗುಡ್’ ಎಂದು ಕರೆಯುವುದು ಏಕೆ? ಇಲ್ಲಿದೆ ಈ ಪವಿತ್ರ ದಿನದ ಆಳವಾದ ಅರ್ಥ ಮತ್ತು ರಹಸ್ಯ!
INDIA

ಇಂದು ‘ಗುಡ್ ಫ್ರೈಡೇ’; ಯೇಸು ಕ್ರಿಸ್ತನ ಬಲಿದಾನದ ದಿನವನ್ನು ‘ಗುಡ್’ ಎಂದು ಕರೆಯುವುದು ಏಕೆ? ಇಲ್ಲಿದೆ ಈ ಪವಿತ್ರ ದಿನದ ಆಳವಾದ ಅರ್ಥ ಮತ್ತು ರಹಸ್ಯ!

By ಗೋಪಾಲ್‌ ಎನ್‌

ಇಡೀ ವಿಶ್ವದಾದ್ಯಂತ ಕ್ರೈಸ್ತ ಧರ್ಮೀಯರು ಇಂದು ಅತ್ಯಂತ ಗಂಭೀರವಾಗಿ ಮತ್ತು ಪ್ರಾರ್ಥನಾಪೂರ್ವಕವಾಗಿ ‘ಗುಡ್ ಫ್ರೈಡೇ’ ಅನ್ನು ಆಚರಿಸುತ್ತಿದ್ದಾರೆ. ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ಈ ದುಃಖದ ದಿನವನ್ನು ‘ಗುಡ್’ (ಶುಭ) ಎಂದು ಏಕೀ ಕರೆಯಲಾಗುತ್ತದೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡುವುದು ಸಹಜ. ಈ ಹೆಸರಿನ ಹಿಂದಿರುವ ಅಸಲಿ ಅರ್ಥ ಮತ್ತು ಮಹತ್ವ ಇಲ್ಲಿದೆ.

ಕ್ರೈಸ್ತ ನಂಬಿಕೆಯ ಪ್ರಕಾರ, ಲೋಕದ ಪಾಪಗಳನ್ನು ನೀಗಿಸಲು ದೇವರು ತನ್ನ ಏಕೈಕ ಮಗನಾದ ಯೇಸು ಕ್ರಿಸ್ತನನ್ನು ಭೂಮಿಗೆ ಕಳುಹಿಸಿದನು. ಯೇಸು ಕ್ರಿಸ್ತರು ಮಾನವಕುಲದ ಉದ್ದಾರಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದನು.

ರೋಮನ್ ಆಡಳಿತದ ಅವಧಿಯಲ್ಲಿ, ಯೇಸು ಕ್ರಿಸ್ತರನ್ನು ಗೆತ್ಸೆಮನೆ ತೋಟದಲ್ಲಿ ಬಂಧಿಸಿ, ನಂತರ ಕ್ಯಾಲ್ವರಿ ಬೆಟ್ಟದ ಮೇಲೆ ಶಿಲುಬೆಗೇರಿಸಲಾಯಿತು. ಈ ಘಟನೆ ನಡೆದ ದಿನವೇ ಶುಕ್ರವಾರ.
​’ಗುಡ್’ ಎಂದು ಕರೆಯುವುದು ಏಕೆ?: 1. ಪವಿತ್ರ ದಿನ: ಪ್ರಾಚೀನ ಇಂಗ್ಲಿಷ್‌ನಲ್ಲಿ ‘Good’ ಎಂದರೆ ‘Holy’ (ಪವಿತ್ರ) ಎಂದರ್ಥ. ಅಂದರೆ ಇದು ‘ಪವಿತ್ರ ಶುಕ್ರವಾರ’.

ಯೇಸು ಕ್ರಿಸ್ತರ ಈ ಬಲಿದಾನದಿಂದಾಗಿ ಮಾನವರಿಗೆ ಪಾಪಗಳಿಂದ ವಿಮೋಚನೆ ಸಿಕ್ಕಿತು ಮತ್ತು ದೇವರು ಹಾಗೂ ಮಾನವರ ನಡುವೆ ಮರುಸಂಬಂಧ ಏರ್ಪಟ್ಟಿತು ಎಂದು ನಂಬಲಾಗಿದೆ. ಈ ಮಹತ್ಕಾರ್ಯ ನಡೆದ ದಿನವಾದ್ದರಿಂದ ಇದನ್ನು ‘ಗುಡ್’ ಎನ್ನಲಾಗುತ್ತದೆ.

ಈ ಸಾವಿನ ಮೂರನೇ ದಿನ ಯೇಸು ಕ್ರಿಸ್ತರು ಪುನರುತ್ಥಾನಗೊಳ್ಳುತ್ತಾರೆ (ಮರಳಿ ಜೀವಂತವಾಗಿ ಏಳುತ್ತಾರೆ). ಆ ವಿಜಯಕ್ಕೆ ಈ ಬಲಿದಾನವೇ ಅಡಿಪಾಯ.

 ಈ ದಿನ ಜನರು ಸಂಭ್ರಮಿಸುವುದಿಲ್ಲ. ಬದಲಾಗಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ, ಉಪವಾಸ ಮಾಡುತ್ತಾರೆ ಮತ್ತು ಯೇಸುವಿನ ತ್ಯಾಗವನ್ನು ಸ್ಮರಿಸುತ್ತಾರೆ.ಯೇಸು ಶಿಲುಬೆಯ ಮೇಲೆ ಮರಣವನ್ನಪ್ಪಿದ ಸಮಯವಾದ ಮಧ್ಯಾಹ್ನ 3 ಗಂಟೆಗೆ ಅನೇಕ ಕಡೆಗಳಲ್ಲಿ ಮೌನ ಆಚರಿಸಲಾಗುತ್ತದೆ.ಶೋಕದ ಸಂಕೇತವಾಗಿ ಅನೇಕರು ಕಪ್ಪು ಬಟ್ಟೆಯನ್ನು ಧರಿಸಿ ಮೆರವಣಿಗೆಗಳಲ್ಲಿ ಪಾಲ್ಗೊಳ್ಳುತ್ತಾರೆ.

​ಗುಡ್ ಫ್ರೈಡೇ ನಮಗೆ ಕ್ಷಮೆ, ಪ್ರೀತಿ ಮತ್ತು ತ್ಯಾಗದ ಮಹತ್ವವನ್ನು ಸಾರುತ್ತದೆ. ಯೇಸು ಕ್ರಿಸ್ತನು ತನಗೆ ತೊಂದರೆ ನೀಡಿದವರನ್ನು ಕ್ಷಮಿಸಿ “ತಂದೆಯೇ, ಇವರನ್ನು ಕ್ಷಮಿಸು, ತಾವು ಏನು ಮಾಡುತ್ತಿದ್ದೇವೆಂದು ಇವರಿಗೆ ತಿಳಿದಿಲ್ಲ” ಎಂದು ಹೇಳಿದ ಮಾತು ಇಂದಿಗೂ ಪ್ರಸ್ತುತವಾಗಿದೆ.

Why Is Good Friday Called 'Good'? Meaning Explained
Share. Facebook Twitter LinkedIn WhatsApp Email

Related Posts

BREAKING: ಪಿಎಂ ಮೋದಿ ಕುರಿತು ದಾರಿ ತಪ್ಪಿಸುವ ಎಕ್ಸ್ ಪೋಸ್ಟ್: ಮಧು ಕಿಶ್ವರ್‌ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್!

1 Min Read

CBSE 12ನೇ ತರಗತಿಯ ಮರುಮೌಲ್ಯಮಾಪನ ಪೋರ್ಟಲ್ ಆರಂಭ ವಿಳಂಬ: ಜೂನ್ 1ಕ್ಕೆ ಮುಂದೂಡಿಕೆ!

2 Mins Read

​ದಿನಕ್ಕೊಂದು ಚಮಚ ತುಪ್ಪ: ನಿಮ್ಮ ಆರೋಗ್ಯದಲ್ಲಿ ಆಗುವ ಅದ್ಭುತ ಬದಲಾವಣೆಗಳೇನು?

2 Mins Read
Recent News

ಶನಿ ದೋಷದಿಂದ ವಿಮುಕ್ತಿಗಾಗಿ ಶನಿ ಜಯಂತಿಯನ್ನು ಹೀಗೆ ತಪ್ಪದೇ ಮಾಡಿ!

BREAKING: ಪಿಎಂ ಮೋದಿ ಕುರಿತು ದಾರಿ ತಪ್ಪಿಸುವ ಎಕ್ಸ್ ಪೋಸ್ಟ್: ಮಧು ಕಿಶ್ವರ್‌ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್!

Too much sex: ಅತಿಯಾದ ಲೈಂಗಿಕ ಕ್ರಿಯೆಯಿಂದ ವೀರ್ಯಾಣುಗಳ ಸಂಖ್ಯೆ ಕಮ್ಮಿಯಾಗುತ್ತಾ? ತಜ್ಞರ ಮಾಹಿತಿ ಇಲ್ಲಿದೆ

ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಚುನಾವಣಾ ಪ್ರಕ್ರಿಯೆಗೆ ತಡೆ ನೀಡಲು ಹೈಕೋರ್ಟ್ ನಕಾರ

State News
KARNATAKA

ಶನಿ ದೋಷದಿಂದ ವಿಮುಕ್ತಿಗಾಗಿ ಶನಿ ಜಯಂತಿಯನ್ನು ಹೀಗೆ ತಪ್ಪದೇ ಮಾಡಿ!

By ವಸಂತ ಬಿ ಈಶ್ವರಗೆರೆ KARNATAKA 3 Mins Read

ಶನಿ ದೋಷವನ್ನು ಅನುಭವಿಸುತ್ತಿರುವ ಮೇಷ, ಸಿಂಹ, ಕನ್ಯಾ, ಧನುಸ್ಸು, ಕುಂಭ ಹಾಗೂ ಮೀನ ರಾಶಿಯವರಿಗೆ ಶನಿ ದೋಷದಿಂದ ವಿಮುಕ್ತಿ ದೊರಕುವ…

ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಚುನಾವಣಾ ಪ್ರಕ್ರಿಯೆಗೆ ತಡೆ ನೀಡಲು ಹೈಕೋರ್ಟ್ ನಕಾರ

ಬೆಂಗಳೂರಲ್ಲಿ ವರುಣನ ಆರ್ಭಟಕ್ಕೆ ಮತ್ತೊಂದು ಬಲಿ: ಭಾರಿ ಮಳೆಗೆ ಕಾಂಪೌಂಡ್ ಕುಸಿದು ಆಟೋ ಚಾಲಕ ಸಾವು

Lokayukta Raid: ಬೆಂಗಳೂರಲ್ಲಿ 15 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗಲೇ ಬೆಸ್ಕಾಂ ಜಾಗೃತದಳದ ಎಇಇ ಲೋಕಾಯುಕ್ತ ಬಲೆಗೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.