ನವದೆಹಲಿ: ಬ್ಯಾಂಕ್ ಉದ್ಯೋಗಿಗಳಿಗೆ ವಾರದಲ್ಲಿ ಐದು ದಿನಗಳ ಕೆಲಸದ ಅವಧಿ ಇದ್ದು, ಈ ಸಮಯವನ್ನು ಹೆಚ್ಚಿಸುವಂತೆ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ಒತ್ತಾಯಿಸಿದೆ. ಭಾರತೀಯ ಬ್ಯಾಂಕ್ಗಳ ಸಂಘಕ್ಕೆ ಪತ್ರ ಬರೆದಿರುವ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ (ಎಐಬಿಇಎ) ಈ ಪ್ರಸ್ತಾವನೆಯನ್ನು ಇಟ್ಟಿದೆ.
ಯೂನಿಯನ್ ದಿನಕ್ಕೆ ಕೆಲಸದ ಸಮಯವನ್ನು 30 ನಿಮಿಷಗಳವರೆಗೆ ಹೆಚಿಸುವಂತೆ ಪ್ರಸ್ತಾಪಿಸಿದೆ. ಅಲ್ಲದೇ ಒಕ್ಕೂಟವು ಪ್ರಸ್ತುತ ಗ್ರಾಹಕ ಸೇವಾ ಸಮಯವನ್ನು 30 ನಿಮಿಷಗಳವರೆಗೆ ಹೆಚ್ಚಿಸುವಂತೆ ಪ್ರಸ್ತಾಪ ಇಟ್ಟಿದೆ. ಬ್ಯಾಂಕ್ ನೌಕರರ ಮಂಡಳಿಯು ಕಳುಹಿಸಿರುವ ಪತ್ರದ ಪ್ರಕಾರ, ಸದ್ಯ ಕೆಲಸದ ಸಮಯವು ಬೆಳಗ್ಗೆ 9:45 ರಿಂದ ಸಂಜೆ 4:45ಕ್ಕೆ ಇದ್ದು, ಅದನ್ನು 9.15 ರಿಂದ ಸಂಜೆ 4.45 ರವರೆಗೆ ಮಾಡುವಂತೆ ಒಕ್ಕೂಟ ಪ್ರಸ್ತಾಪಿಸಿದೆ.
ನಗದು ವಹಿವಾಟಿನ ಸಮಯವನ್ನು ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30 ಮತ್ತು ಮಧ್ಯಾಹ್ನ 2 ರಿಂದ 3.30 ರವರೆಗೆ ಪರಿಷ್ಕರಿಸಬೇಕು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಯೂನಿಯನ್ ಪರಿಷ್ಕೃತ ನಗದುರಹಿತ ವಹಿವಾಟಿನ ಸಮಯವನ್ನು ಮಧ್ಯಾಹ್ನ 3.30 ರಿಂದ 4.45 ರವರೆಗೆ ಮಾಡುವಂತೆ ಒತ್ತಾಯಿಸಿದೆ ಎಂದು ತಿಳಿದುಬಂದಿದೆ.
ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿಎಚ್ ವೆಂಕಟಾಚಲಂ ಮಾತನಾಡಿ, ಬ್ಯಾಂಕ್ಗಳಲ್ಲಿ ವಾರಕ್ಕೆ ಐದು ದಿನ ಕೆಲಸ ಮಾಡುವ ವ್ಯವಸ್ಥೆಯನ್ನು ಪರಿಚಯಿಸಲು ಒಕ್ಕೂಟವು ಒತ್ತಾಯಿಸುತ್ತಿದೆ. ಇದನ್ನು ಕಳೆದ ವರ್ಷ ಜೀವ ವಿಮಾ ನಿಗಮದಲ್ಲಿ ಪರಿಚಯಿಸಲಾಯಿತು.
ಯೂನಿಯನ್ನ ಪದಾಧಿಕಾರಿಗಳ ಪ್ರಕಾರ, ಭಾರತೀಯ ಬ್ಯಾಂಕ್ಗಳ ಅಸೋಸಿಯೇಷನ್ ಎರಡು ಶನಿವಾರಗಳ ರಜೆಯೆಂದು ಸರಿದೂಗಿಸುವ ಬಗ್ಗೆ ತನ್ನ ಅಭಿಪ್ರಾಯಗಳನ್ನು ಕೇಳಿದೆ. ಕೆಲಸದ ಸಮಯವನ್ನು ಮೂವತ್ತು ನಿಮಿಷಗಳಷ್ಟು ಹೆಚ್ಚಿಸಬಹುದು ಎಂದು ಅವರು ಹೇಳಿದರು. ಐಬಿಎ, ಕೇಂದ್ರ ಮತ್ತು ಆರ್ಬಿಐ ಪ್ರಸ್ತಾವನೆಗೆ ಒಪ್ಪಿಗೆ ನೀಡುತ್ತವೆ ಎಂಬ ಭರವಸೆ ವ್ಯಕ್ತಪಡಿಸಿದರು.
BIGG NEWS : ಪರಿಶಿಷ್ಟರ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ `ವೇದ ಗಣಿತ’ ತರಬೇತಿ : ಆದೇಶ ಪತ್ರ ಹಿಂಪಡೆದ ರಾಜ್ಯ ಸರ್ಕಾರ
BIG NEWS: ನ್ಯಾಟೋ ಪಡೆಗಳಿಗೆ ಎಚ್ಚರಿಕೆ ನೀಡಿದ ಪುಟಿನ್: ಯುದ್ಧಕ್ಕೆ ಬಂದ್ರೆ ಹುಷಾರ್ ಎಂದ ರಷ್ಯಾ ಅಧ್ಯಕ್ಷ
BIG NEWS: ಉಕ್ರೇನ್ಗೆ 5,975 ಕೋಟಿ ರೂ. ಮೌಲ್ಯದ ಮಿಲಿಟರಿ ನೆರವು ಘೋಷಿಸಿದ ಯುಎಸ್