ಬೆಂಗಳೂರು : ಕೆಂಪುಕೋಟೆಯಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಕೇಂದ್ರ ನಿರಾಕರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಸಿ ಎನ್ ಅಶ್ವತ್ ನಾರಾಯಣ್ ಕಿಡಿಕಾರಿದ್ದು ಮೊಮ್ಮಕ್ಕಳನ್ನು ನೋಡಿಕೊಳ್ಳುವ ಈ ವಯಸ್ಸಲ್ಲಿ ಸಿಎಂ ಸಿದ್ದರಾಮಯ್ಯಗೆ ಯಾಕೆ ಇಂತಹ ಕೆಟ್ಟ ಬುದ್ಧಿ ಬಂದಿದೆ ಎಂದು ಕಿಡಿ ಕಾರಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ವಿಚಾರದಲ್ಲಿ ರಾಜಕೀಯ ಹೇಳಿಕೆ ಸರಿಯಲ್ಲ. ಎಂದು ಬಿಜೆಪಿ ಶಾಸಕಾ ಸಿಎನ್ ಅಶ್ವಥ್ ನಾರಾಯಣ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ.ಐವತ್ತಕ್ಕಿಂತ ಹೆಚ್ಚು ವರ್ಷಗಳ ಕಾಲ ಆಡಳಿತದಲ್ಲಿ ಅನುಭವವನ್ನು ಹೊಂದಿದ್ದಾರೆ ಎಂದು ತಿಳಿಸಿದರು.
ರಾಜಕೀಯ ಪ್ರೇರಿತವಾಗಿ ಹೇಳಿಕೆ ಕೊಡುವುದು ಬಹಳ ಕಷ್ಟಕರ. ಕರ್ನಾಟಕಕ್ಕೆ ಅವಮಾನ ಆಗುವ ರೀತಿ ರಾಜಕೀಯ ಮಾಡ್ತಿದ್ದಾರೆ. ಯಾವುದೋ ಒಂದು ಸಮಿತಿಯು ಟ್ಯಾಬ್ಲೋ ಆಯ್ಕೆ ಮಾಡುತ್ತದೆ. ಸಿದ್ದರಾಮಯ್ಯಗೆ ಯಾಕೆ ಈ ವಯಸ್ಸಿನಲ್ಲಿ ಕೆಟ್ಟ ಬುದ್ಧಿ ಬಂದಿದೆ? 75ನೇ ವಯಸ್ಸಿನಲ್ಲಿ ಮೊಮ್ಮಕ್ಕಳನ್ನು ನೋಡಿಕೊಳ್ಳುವ ಕಾಲ 18 ವರ್ಷದ ಹುಡುಗರು ಮಾತನಾಡುವ ರೀತಿ ಏಕೆ ಮಾತನಾಡುತ್ತಿದ್ದೀರ? ಎಂದು ಸಿಎಂ ವಿರುದ್ಧ ಡಾಕ್ಟರ್ ಅಶ್ವಥ್ ನಾರಾಯಣ್ ಆಕ್ರೋಶ ಹೊರ ಹಾಕಿದ್ದಾರೆ.