ಕೊಚ್ಚಿ (ಕೇರಳ): ಕೋಝಿಕ್ಕೋಡ್ನ ಸರ್ಕಾರಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ನಲ್ಲಿ ತಂಗಿರುವ ಬಾಲಕಿಯರ ಮೇಲೆ, ಹಾಸ್ಟೆಲ್ನಲ್ಲಿರುವ ಹುಡುಗರಿಗೆ ಇಲ್ಲದ ಕಾಲಮಿತಿಯನ್ನು ವಿಧಿಸಿರುವ ಬಗ್ಗೆ ರಾಜ್ಯ ಸರ್ಕಾರವನ್ನು ಕೇರಳ ಹೈಕೋರ್ಟ್ ಟೀಕಿಸಿದೆ.
ರಾತ್ರಿ 9.30ರ ನಂತರ ವಿದ್ಯಾರ್ಥಿನಿಯರು ಹಾಸ್ಟೆಲ್ನಿಂದ ಹೊರಗೆ ಹೋಗದಂತೆ ಉನ್ನತ ಶಿಕ್ಷಣ ಇಲಾಖೆ ಹೊರಡಿಸಿರುವ ಆಕ್ಷೇಪಾರ್ಹ ಅಧಿಸೂಚನೆಯ ವಿರುದ್ಧ ಕೋಝಿಕ್ಕೋಡ್ನ ಸರ್ಕಾರಿ ವೈದ್ಯಕೀಯ ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಸಲ್ಲಿಸಿದ ಮನವಿಯನ್ನು ಪರಿಗಣಿಸುವಾಗ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರ ಏಕ ಪೀಠ ಈ ಪ್ರಶ್ನೆಯನ್ನು ಕೇಳಿದೆ.
“ತೊಂದರೆ ಉಂಟುಮಾಡುವವರನ್ನು ಬಂಧಿಸಬೇಕು. ಆದ್ರೆ, ಹೆಣ್ಣುಮಕ್ಕಳಲ್ಲ” ಎಂದು ನ್ಯಾಯಾಲಯವು ಗಮನಿಸಿದೆ. ವಿದ್ಯಾರ್ಥಿಗಳನ್ನು ಎಷ್ಟು ದಿನ ಲಾಕ್ ಅಪ್ ಮಾಡಲಾಗುತ್ತದೆ? ಹುಡುಗಿಯರಿಗೆ ಮಾತ್ರ ನಿಯಂತ್ರಣ ಬೇಕು ಎಂದು ನಾವು ಹೇಗೆ ಹೇಳಲು ಸಾಧ್ಯ? ಹಾಸ್ಟೆಲ್ನಲ್ಲಿರುವ ಹುಡುಗಿಯರಿಗೆ ರಾತ್ರಿ 9.30 ನಿಗದಿತ ಸಮಯ ಏಕೆ? 9.30ರ ನಂತರ ಗುಡ್ಡ ಕುಸಿಯಲಿದೆಯೇ? ನಗರವು ಮುಕ್ತವಾಗಿರಬೇಕು ಮತ್ತು ಸುರಕ್ಷಿತವಾಗಿರಬೇಕು. ಹೆಣ್ಣುಮಕ್ಕಳೂ ಈ ಸಮಾಜದಲ್ಲಿ ಬದುಕಬೇಕು ಮತ್ತು ಕ್ಯಾಂಪಸ್ ಅನ್ನು ಸುರಕ್ಷಿತವಾಗಿರಿಸುವ ಜವಾಬ್ದಾರಿಯನ್ನು ಸರ್ಕಾರ ಹೊಂದಿದೆ ಎಂದು ನ್ಯಾಯಾಲಯ ಹೇಳಿದೆ.
”ಹೆಣ್ಣು ಮಕ್ಕಳಿರುವ ಪೋಷಕರ ಕಾಳಜಿಯನ್ನೂ ನ್ಯಾಯಾಲಯ ಗಣನೆಗೆ ತೆಗೆದುಕೊಳ್ಳುತ್ತದೆ. ರಾಜ್ಯದಲ್ಲಿ ಕಾಲಮಿತಿ ಇಲ್ಲದ ಹಾಸ್ಟೆಲ್ಗಳಿವೆ. ಆ ಮಕ್ಕಳಿಗೆ ಹೆತ್ತವರಿಲ್ಲವೇ? ನ್ಯಾಯಾಲಯ ಸರ್ಕಾರವನ್ನು ದೂಷಿಸುವುದಿಲ್ಲ. ಎಲ್ಲಾ ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಲಾಕ್ ಮಾಡಲು ಬಯಸಿದರೆ, ಸರ್ಕಾರ ಏನು ಮಾಡಬಹುದು? ನಾವು ರಾತ್ರಿ ಭಯಪಡಬಾರದು. ಗಂಡುಮಕ್ಕಳಿಗೆ ನೀಡುವ ಸ್ವಾತಂತ್ರ್ಯ ಹೆಣ್ಣುಮಕ್ಕಳಿಗೂ ಸಿಗುವಂತೆ ನೋಡಿಕೊಳ್ಳಬೇಕು ಎಂದಿದೆ.
ನ್ಯಾಯಾಧೀಶರಿಗೆ ಹೆಣ್ಣು ಮಕ್ಕಳಿಲ್ಲದ ಕಾರಣ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ನಿಯಂತ್ರಣವನ್ನು ವಿರೋಧಿಸುತ್ತಿದ್ದಾರೆ ಎಂಬ ಟೀಕೆ ಕಂಡುಬಂದಿದೆ ಎಂದು ನ್ಯಾಯಾಲಯ ಹೇಳಿದೆ. ನನ್ನ ಹತ್ತಿರದ ಸಂಬಂಧಿಗಳಾದ ಹುಡುಗಿಯರು ಹಾಸ್ಟೆಲ್ನಲ್ಲಿ ಇದ್ದಾರೆ. ಹೊಸದಿಲ್ಲಿಯಲ್ಲಿ ಓದುತ್ತಿದ್ದಾರೆ. ನಿಯಂತ್ರಣವಿಲ್ಲ. ದೆಹಲಿಯ ಜೆಎನ್ಯು ಕ್ಯಾಂಪಸ್ನಲ್ಲಿ ಯಾವುದೇ ಸಮಯದ ಮಿತಿಯಿಲ್ಲ ಎಂದು ಕೋರ್ಟ್ ಗಮನಿಸಿದೆ.
ಯುಪಿ: ಅಯ್ಯೋ! ವರನ ʻಮೂಗು ಚಪ್ಪಟೆʼಯಾಗಿದೆ ಎಂದ ಮಹಿಳೆ, ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು!
Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಗ್ರಾಮೀಣ, ನಗರ ಪುನರ್ವಸತಿ ಕಾರ್ಯಕರ್ತ ಹುದ್ದೆಗಳಿಗೆ ಅರ್ಜಿ ಆಹ್ವಾನ