ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿ ಪವಿತ್ರ ಗೌಡ ಸೇರಿದಂತೆ ದರ್ಶನ್ ಹಾಗೂ ಎಲ್ಲಾ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ. ನಿನ್ನೆ ನಟ ದರ್ಶನ್ ಅವರನ್ನು ಭೇಟಿಯಾಗಲು ವಿಜಯಲಕ್ಷ್ಮಿ ಹಾಗೂ ಅವರ ಪುತ್ರ ಆಗಮಿಸಿದ್ದರು ಇದನ್ನು ತಿಳಿದ ಪವಿತ್ರ ಗೌಡ ನನ್ನನ್ನು ನೋಡಲು ನನ್ನ ಪೋಷಕರು ಯಾಕೆ ಬಂದಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಹೌದು ನಿನ್ನೆ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ಭೇಟಿಯಾಗಿದ್ದರು. ಈ ವಿಷಯ ತಿಳಿದು ನಟಿ ಪವಿತ್ರ ಗೌಡ ಸಹಜವಾಗಿ ಬೇಸರಗೊಂಡಿದ್ದು ನನ್ನ ಪೋಷಕರು ಇನ್ನು ಯಾಕೆ ನನ್ನನ್ನು ಭೇಟಿ ಮಾಡಲು ಬಂದಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಕುಟುಂಬಸ್ಥರಿಗೆ ಕರೆ ಮಾಡಿ ಕಣ್ಣೀರು ಹಾಕಿದ್ದಾರೆ. ಕರೆ ಮಾಡಿ ತಿಳಿಸಿದ ಬೆನ್ನಲ್ಲೆ ಪವಿತ್ರ ಗೌಡರನ್ನು ಕುಟುಂಬಸ್ಥರು ಭೇಟಿಯಾಗಿದ್ದಾರೆ.
ಮನೆಯವರಿಗೆ ಕರೆ ಮಾಡಿ ಪವಿತ್ರ ಗೌಡ ಆವಾಜ್ ಹಾಕಿದ್ದಳು ನನ್ನನ್ನು ಏಕೆ ನೋಡಲು ಬಂದಿಲ್ಲ. ನಾನು ಹೇಳಿದ ವಸ್ತುಗಳನ್ನು ಯಾಕೆ ತಂದಿಲ್ಲ ಎಂದು ಅವಾಜ್ ಹಾಕಿದ್ದಾಳೆ. ಜೈಲಿನ ನಿಯಮ ಪ್ರಕಾರ ವಾರಕ್ಕೆ ಎರಡು ಅಥವಾ ಮೂರು ಸಲ ಭೇಟಿಗೆ ಮಾತ್ರ ಅವಕಾಶವಿದೆ ತಿಂಗಳಿಗೆ 60 ನಿಮಿಷ ಫೋನ್ ಸಂಭಾಷಣೆ ನಡೆಸಲು ಅವಕಾಶವಿದೆ.
ಪವಿತ್ರ ಗೌಡ ಅವಾಜ್ ಹಾಕುತ್ತಿದ್ದಂತೆ, ವಿಷಯ ತಿಳಿದು ಇಂದು ಪವಿತ್ರ ಗೌಡ ಅವರ ತಂದೆ, ತಾಯಿ, ಸಹೋದರ ಹಾಗೂ ಪವಿತ್ರ ಗೌಡ ಮಗಳು ಇಂದು ಜೈಲಿನಲ್ಲಿ ಭೇಟಿಯಾಗಲು ಆಗಮಿಸಿದ್ದಾರೆ. ಇವಳೆ ಪವಿತ್ರ ಗೌಡ ಸಹೋದರ ಕಪ್ಪುಬಣ್ಣದ ಬ್ಯಾಂಕ್ ನಲ್ಲಿ ಅವರ ಬಟ್ಟೆ ಹಾಗೂ ಇತರೆ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಹೊರಗಡೆ ಐಷಾರಾಮಿ ಜೀವನ ನಡೆಸುತ್ತಿದ್ದ ಪವಿತ್ರ ಗೌಡಗೆ ಇಂದು ಜೈಲಿನಲ್ಲಿ ಈ ರೀತಿ ಕಷ್ಟ ಅನುಭವಸುತ್ತಿದ್ದರೆ.