ಬೆಂಗಳೂರು : ಇಂದು ಕಾಂಗ್ರೆಸ್ ಪಕ್ಷದ ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಚಿತ್ರನಟಿ ಭಾವನಾ ಅವರನ್ನು ಕಾಂಗ್ರೆಸ್ ನ ಹಿರಿಯ ಮುಖಂಡರ ಮುಂದೆಯೇ ಕೈ ಕಾರ್ಯಕರ್ತೆಯೊಬ್ಬರು ʻ ನೀವು ಬಿಜೆಪಿಗೆ ಹೋಗಿದ್ದೀರಿ ಮತ್ಯಾಕೆ ಕಾಂಗ್ರೆಸ್ಗೆ ಇಲ್ಲಿಗೆ ಬಂದಿದ್ದೀರಿ ʼ ಎಂದು ಪ್ರಶ್ನಿಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಸಂಗ ಪಡೆಯಿತು.
ಕತ್ರಿನಾ ಕೈಫ್-ವಿಕ್ಕಿ ಕೌಶಲ್ಗೆ ಕೊಲೆ ಬೆದರಿಕೆ ಕೇಸ್: ನಟ ಮನ್ವಿಂದರ್ ಸಿಂಗ್ ಜು. 28 ರವರೆಗೆ ಪೊಲೀಸ್ ಕಸ್ಟಡಿಗೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಸಲೀಂ ಅಹಮದ್ ಅವರು ಕುಳಿತಿದ್ದ ವೇದಿಕೆಯತ್ತ ತೆರಳಿದ ನಟಿ ಭಾವನಾ ಅವರನ್ನು ಮಹಿಳಾ ಕಾರ್ಯಕರ್ತೆಯೊಬ್ಬರು ತಡೆಹಿಡಿದು ‘ವೇದಿಕೆಯ ಬಿಟ್ಟು ಬದಿಗೆ ಬನ್ನಿ’ ಎಂದು ಅಡ್ಡಿಪಡಿಸಿದರು.
ನೀವು ಬಿಜೆಪಿಗೆ ಹೋಗಿದ್ದೀರಿ ಮತ್ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ಪ್ರಶ್ನಿಸಿದರು. ಬಳಿಕ ವೇದಿಕೆಯಲ್ಲಿ ಇದ್ದ ನಾಯಕರು ಸಮಾಧಾನ ಪಡಿಸಿದರು. ಆ ಹಿನ್ನೆಲೆಯಲ್ಲಿ ನಟಿ ಭಾವನಾ ಕಾರ್ಯಕರ್ತರು ಕುಳಿತಿದ್ದ ಬದಿಯಲ್ಲೇ ನಿಂತು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಕತ್ರಿನಾ ಕೈಫ್-ವಿಕ್ಕಿ ಕೌಶಲ್ಗೆ ಕೊಲೆ ಬೆದರಿಕೆ ಕೇಸ್: ನಟ ಮನ್ವಿಂದರ್ ಸಿಂಗ್ ಜು. 28 ರವರೆಗೆ ಪೊಲೀಸ್ ಕಸ್ಟಡಿಗೆ
ಈ ವೇಳೆ ಮಾತನಾಡಿದ ನಟಿ ಭಾವನಾ, ಈ ಹಿಂದೆ ನಾನು ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿದ್ದೆ. ಅದು ಆತುರದ ನಡೆ ಎಂದು ಅನಿಸಿತು. ಆ ಹಿನ್ನೆಲೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿರುವುದಾಗಿ ಹೇಳಿದರು.
ಕತ್ರಿನಾ ಕೈಫ್-ವಿಕ್ಕಿ ಕೌಶಲ್ಗೆ ಕೊಲೆ ಬೆದರಿಕೆ ಕೇಸ್: ನಟ ಮನ್ವಿಂದರ್ ಸಿಂಗ್ ಜು. 28 ರವರೆಗೆ ಪೊಲೀಸ್ ಕಸ್ಟಡಿಗೆ
ಬಿಜೆಪಿಗೆ ಹೋದ ನಂತರ ನಾನು ಮಾಡಿದ್ದ ತಪ್ಪು ಅರಿವಿಗೆ ಬಂತು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರ ತರುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ತಿಳಿಸಿದರು.