ಕೊಪ್ಪಳ : ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರ ಆಯ್ಕೆ ವಿರೋಧಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.ಇಂದು ಹೈಕೋರ್ಟ್ ಪ್ರತಾಪ್ ಸಿಂಹ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ. ಈ ವಿಚಾರವಾಗಿ ಶಿವರಾಜ್ ತಂಗಡಗಿ ಪ್ರತಾಪ್ ಸಿಂಹಗೆ ಬಿಜೆಪಿಯವರೇ ಟಿಕೆಟ್ ಕೊಟ್ಟಿಲ್ಲ ಟಿಕೆಟ್ ತಪ್ಪಿದೆ ಅಂದರೆ ಅವರ ಯೋಗ್ಯತೆ ಏನೆಂದು ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಬಾನು ಮುಷ್ತಾಕ್ ಕನ್ನಡದ ಹೆಮ್ಮೆ, ನಾಡಹಬ್ಬ ದಸರಾಗೆ ಎಲ್ಲಾ ಸಮುದಾಯದ ಜನರು ಬರುತ್ತಾರೆ. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದ ದೇವೇಗೌಡರನ್ನು ಬಿಜೆಪಿ ಯಾಕೆ ತಮ್ಮ ಪಕ್ಷಕ್ಕೆ ಕರೆದುಕೊಂಡಿದೆ? ಪ್ರತಾಪ್ ಸಿಂಹಗೆ ಬಿಜೆಪಿಯವರೇ ಟಿಕೆಟ್ ಕೊಟ್ಟಿಲ್ಲ ಟಿಕೆಟ್ ತಪ್ಪಿದೆ ಅಂದರೆ ಅವರ ಯೋಗ್ಯತೆ ಏನೆಂದು ಗೊತ್ತಾಗುತ್ತದೆ. ಬಿಜೆಪಿಯವರಿಗೆ ಯಾವ ನೈತಿಕತೆ ಇದೆ? ಬಿಜೆಪಿ ನಾಯಕರ ಮಕ್ಕಳೆಲ್ಲ ವಿದೇಶದಲ್ಲಿ ಇದ್ದಾರೆ.
ಬಿಜೆಪಿಯವರು ಬಡವರ ಮಕ್ಕಳನ್ನು ಹೋರಾಟಕ್ಕೆ ಕಳುಹಿಸುತ್ತಾರೆ. ಬಿಜೆಪಿಯವರು ತಮ್ಮ ಮಕ್ಕಳ ಜೊತೆ ಹೋರಾಟಕ್ಕೆ ಬನ್ನಿ. ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯ ಯಾಕೆ ರದ್ದು ಮಾಡಲಿಲ್ಲ? ಇಂದು ದೇಶದಲ್ಲಿ ಧರ್ಮ ಜಾತಿಗಳ ಬಗ್ಗೆ ಚರ್ಚೆಯಾಗುತ್ತಿದೆ. ಧರ್ಮದ ಬಗ್ಗೆ ಚರ್ಚೆ ಮಾಡಿ ಪಾಕಿಸ್ತಾನದ ಗತಿ ಏನಾಗಿದೆ ನೀವೇ ನೋಡಿ ಎಂದು ಸಚಿವ ಶಿವರಾಜ್ ತಂಗಡಿಗೆ ಕಿಡಿಕಾರಿದರು.