ಹಾವೇರಿ : ಸದ್ಯ ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಹಾಗೂ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸುವ ವಿಚಾರ ಭಾರಿ ಚರ್ಚೆಯಾಗುತ್ತಿದ್ದು, ಈ ವಿಷಯವಾಗಿ ಸಚಿವ ಶಿವಾನಂದ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಬಹಿರಂಗ ವೇದಿಕೆಯಲ್ಲಿ ಒಕ್ಕಲಿಗ ಸಮುದಾಯದ ಚಂದ್ರಶೇಖರ ಸ್ವಾಮೀಜಿಗಳು ಸಿಎಂ ಸ್ಥಾನದ ಕುರಿತು ಮಾತನಾಡಿದರು. ಈ ವಿಷಯವಾಗಿ ಪ್ರತಿಕ್ರಿಯಿಸಿದ ಶಿವಾನಂದ ಪಾಟೀಲ್ ಸೇಮ್ ಬದ್ಲಾವಣೆ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀರ ಅದೇನು ಆಗೋದ ಹೋಗುವುದ ಎಂದು ತಿಳಿಸಿದರು.
ಹಾವೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ್ ಪಾಟೀಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯಾರೋ ಒಬ್ಬರು ಮಾತನಾಡಿದರು ಎಂದು ಅದಕ್ಕೆ ಯಾಕೆ ಪ್ರತಿಕ್ರಿಯೆ ಕೊಡಬೇಕು? ಒಬ್ಬರು ಸ್ವಾಮೀಜಿ ಮಾತನಾಡಿದರೆ ರಾಜಕಾರಣ ಆಗುತ್ತಾ? ಸ್ವಾಮೀಜಿಗಳ ಮಾತು ಅಲ್ಲೇ ಕೇಳಿ ಅಲ್ಲೇ ಬಿಡಬೇಕು. ಅದು ಯಾರು ಅವರನ್ನು ಬಳಸಿಕೊಂಡಿದ್ದಾರೋ ನನಗೆ ಗೊತ್ತಿಲ್ಲ ಎಂದು ಅವರು ತಿಳಿಸಿದರು.
ಸಿಎಂ ಸ್ಥಾನದ ಬದಲಾವಣೆ ಕುರಿತಂತೆ ಸ್ವಾಮೀಜಿಗಳು ಮಾತನಾಡಿದ್ದಾರೆ. ರಾಜಕಾರಣಿಗಳು ಆ ವಿಷಯದ ಬಗ್ಗೆ ಮಾತನಾಡಿದರೆ ಅದಕ್ಕೊಂದು ಬೆಲೆ ಇರುತ್ತದೆ ಆದರೆ ಸ್ವಾಮೀಜಿಗಳು ಮಾತನಾಡಿದರೆ ಸರ್ಕಾರ ಪತನವಾಗುತ್ತದ? ಯಾವ ಕಾರಣಕ್ಕೂ ಆಗಲ್ಲ ಎಂದು ಸ್ಪಷ್ಟಪಡಿಸಿದರು.