ನವದೆಹಲಿ: ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಮತ್ತು ಧಾರ್ಮಿಕ ಅಸಮತೋಲನ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ನಾಗಪುರದಲ್ಲಿ ಬುಧವಾರ ನಡೆದ ಸಾಂಪ್ರದಾಯಿಕ ವಿಜಯದಶಮಿ ಆಚರಣೆಯಲ್ಲಿ ಆರ್ಎಸ್ಎಸ್ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಓವೈಸಿ, ʻನೀವು ಆತಂಕಪಡಬೇಡಿ. ದೇಶದ ಮುಸ್ಲಿಂ ಜನಸಂಖ್ಯೆಯ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ. ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿಲ್ಲ, ಬದಲಿಗೆ ಕುಸಿಯುತ್ತಿದೆ. ನಾವು ಹೆಚ್ಚು ಕಾಂಡೋಮ್ ಬಳಸುತ್ತೇವೆ. ಈ ಬಗ್ಗೆ ಮಾತ್ರ ಮೋಹನ್ ಭಾಗವತ್ ಅವರು ಮಾತನಾಡುವುದಿಲ್ಲʼ ಎಂದು ಮೋಹನ್ ಭಾಗವತ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
#WATCH | On RSS chief Mohan Bhagwat’s statement that there’s a religious imbalance in India, AIMIM chief Asaduddin Owaisi says, “Don’t fret, Muslim population is not increasing, it’s rather falling… Who’s using condoms the most? We are. Mohan Bhagwat won’t speak on this.” pic.twitter.com/kcaYLaNm7A
— ANI (@ANI) October 8, 2022
“ಜನಸಂಖ್ಯೆಗೆ ಸಂಪನ್ಮೂಲಗಳು ಬೇಕು. ಸಂಪನ್ಮೂಲಗಳನ್ನು ನಿರ್ಮಿಸದೆ ಅದು ಬೆಳೆದರೆ ಅದು ಹೊರೆಯಾಗುತ್ತದೆ. ಜನಸಂಖ್ಯೆಯನ್ನು ಆಸ್ತಿ ಎಂದು ಪರಿಗಣಿಸುವ ಇನ್ನೊಂದು ದೃಷ್ಟಿಕೋನವಿದೆ. ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ಎಲ್ಲರಿಗೂ ಜನಸಂಖ್ಯಾ ನೀತಿಯ ಮೇಲೆ ಕೆಲಸ ಮಾಡಬೇಕಾಗಿದೆ” ಎಂದು ಮೋಹನ್ ಭಾಗವತ್ ಸಲಹೆ ನೀಡಿದ್ದರು.