ಬೆಂಗಳೂರು : ರಾಜ್ಯದಲ್ಲಿ ಸಿಎಂ ಕಿತ್ತಾಟದ ಮಧ್ಯ ಮಾಜಿ ಸಂಸದೆ ನಟಿ ರಮ್ಯಾ, ಯಾರನ್ನು ಸಿಎಂ ಮಾಡಿದರು ಓಕೆ ಎಲ್ಲಾ ನಾಯಕರಿಗೂ ಅರ್ಹತೆ ಇದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ಇದ್ದಾರೆ ಪಕ್ಷದ ಹಿರಿಯ ನಾಯಕರು ಒಂದು ನಿರ್ಧಾರಕ್ಕೆ ಬರುತ್ತಾರೆ ಎಂದು ಮಾಜಿ ಸಂಸದೆ ಹಾಗೂ ನಟಿ ರಮ್ಯ ತಿಳಿಸಿದರು.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರ ಇದು ನಾನು ಹೇಳುವಂಥದ್ದಲ್ಲ ಕಾಂಗ್ರೆಸ್ ಹಿರಿಯ ನಾಯಕರು ಕುರಿತು ಚರ್ಚೆ ಮಾಡುವಂತದ್ದು, ಇದರಲ್ಲಿ ನನ್ನ ಹೇಳಿಕೆ ಏನಿಲ್ಲ ಅವರು ಯಾರನ್ನು ಮಾಡುತ್ತಾರೋ ಅವರು ಸಿಎಂ ಆಗಲಿ, ರಾಜ್ಯದಲ್ಲಿ ಸಿಎಂ ಆಗುವ ಅರ್ಹತೆ ಯಾರಿಗೆ ಇದೆ ಅವರನ್ನು ಮಾಡಲಿ. ಪ್ರತಿಯೊಬ್ಬ ನಾಯಕರಿಗೂ ಸಿ ಆಗುವ ಅರ್ಹತೆ ಇದೆ ಯಾರೇ ಸಿಎಂ ಆದರು ಕೂಡ ಒಳ್ಳೆಯದೇ ಎಂದರು.








