ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಭೂಗಳ್ಳರಿದ್ದಾರೆ. ನಿಮ್ಮ ಪ್ರಕಾರ ಬೆಸ್ಟ್ ಭೂಗಳ್ಳ ಅವಾರ್ಡ್ ಯಾರಿಗೆ ಹೋಗಬಹುದು? ಊಹಿಸಿ ಎಂಬುದಾಗಿ ವೀಡಿಯೋ ಶೇರ್ ಮಾಡಿ, ಬಿಜೆಪಿ ಕರ್ನಾಟಕ ಕೇಳಿದೆ.
ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಭೂಗಳ್ಳರಿದ್ದಾರೆ. ನಿಮ್ಮ ಪ್ರಕಾರ ಬೆಸ್ಟ್ ಭೂಗಳ್ಳ ಅವಾರ್ಡ್ ಯಾರಿಗೆ ಹೋಗಬಹುದು? ಊಹಿಸಿ. #CorruptCongress #ಥಟ್ಅಂತಹೇಳಿ pic.twitter.com/KT76Q9QDkd
— BJP Karnataka (@BJP4Karnataka) January 2, 2023
ಈ ಬಗ್ಗೆ ಟ್ವಿಟ್ ಮಾಡಿದ್ದು, ಕಳಸಾ-ಬಂಡೂರಿ ಅನುಷ್ಠಾನಕ್ಕೆ ಕರ್ನಾಟಕ ಭಾಗದ ರೈತರು ಪ್ರತಿಭಟನೆ ಮಾಡಿದ್ದಾಗ ಸಿದ್ಧರಾಮಯ್ಯ ಸರ್ಕಾರ ಪೊಲೀಸರನ್ನು ಹಳ್ಳಿ ಹಳ್ಳಿಗೆ ಕಳಿಸಿ ರೈತರ ಮೇಲೆ ಲಾಠಿ ಬೀಸಿತ್ತು. ದೆಹಲಿ ಧಣಿಗಳ ಸಂತೋಷಕ್ಕಾಗಿ ಮಹಾದಾಯಿಗೆ ದನಿಯಾಗದವರು ರೈತರ ಮೇಲೆ ದಬ್ಬಾಳಿಕೆ ನಡೆಸಲು ಹಿಂದೆ-ಮುಂದೆ ನೋಡಿರಲಿಲ್ಲ ಎಂದಿದೆ.
ಕಳಸಾ-ಬಂಡೂರಿ ಅನುಷ್ಠಾನಕ್ಕೆ ಕರ್ನಾಟಕ ಭಾಗದ ರೈತರು ಪ್ರತಿಭಟನೆ ಮಾಡಿದ್ದಾಗ @siddaramaiah ಸರ್ಕಾರ ಪೊಲೀಸರನ್ನು ಹಳ್ಳಿ ಹಳ್ಳಿಗೆ ಕಳಿಸಿ ರೈತರ ಮೇಲೆ ಲಾಠಿ ಬೀಸಿತ್ತು. ದೆಹಲಿ ಧಣಿಗಳ ಸಂತೋಷಕ್ಕಾಗಿ ಮಹಾದಾಯಿಗೆ ದನಿಯಾಗದವರು ರೈತರ ಮೇಲೆ ದಬ್ಬಾಳಿಕೆ ನಡೆಸಲು ಹಿಂದೆ-ಮುಂದೆ ನೋಡಿರಲಿಲ್ಲ. #ರಾಜ್ಯವಿರೋಧಿಕಾಂಗ್ರೆಸ್
1/5 pic.twitter.com/R9mGD1BfLH— BJP Karnataka (@BJP4Karnataka) January 2, 2023
ಕಾಂಗ್ರೆಸ್ ಪ್ರತಿಭಟಿಸುವುದು ಜನರಿಗಾಗಿ ಅಲ್ಲ ಬದಲಾಗಿ ತನಗಾಗಿ ಎಂಬುದನ್ನು ಸಾಬೀತು ಮಾಡಿದ್ದಕ್ಕೆ ಧನ್ಯವಾದಗಳು ಸುರ್ಜೇವಾಲ. ಕಳಸಾ-ಬಂಡೂರಿ ಯೋಜನೆ ಡಿಪಿಆರ್ಗೆ ಅನುಮೋದನೆ ಸಿಕ್ಕಿದೆ. ಸಮಸ್ಯೆಯನ್ನು ಸದಾ ಜೀವಂತವಿರಿಸಿ ತಾನು ರಾಜಕೀಯ ಮಾಡುವ ಸೂತ್ರದಲ್ಲಿ ನಂಬಿಕೆ ಇಟ್ಟ ಪಕ್ಷಕ್ಕೆ ಕಸಿವಿಸಿ ಶುರುವಾಗಿದೆ ಎಂದು ಹೇಳಿದೆ.
ಕಾಂಗ್ರೆಸ್ ಪ್ರತಿಭಟಿಸುವುದು ಜನರಿಗಾಗಿ ಅಲ್ಲ ಬದಲಾಗಿ ತನಗಾಗಿ ಎಂಬುದನ್ನು ಸಾಬೀತು ಮಾಡಿದ್ದಕ್ಕೆ ಧನ್ಯವಾದಗಳು @rssurjewala. ಕಳಸಾ-ಬಂಡೂರಿ ಯೋಜನೆ ಡಿಪಿಆರ್ಗೆ ಅನುಮೋದನೆ ಸಿಕ್ಕಿದೆ. ಸಮಸ್ಯೆಯನ್ನು ಸದಾ ಜೀವಂತವಿರಿಸಿ ತಾನು ರಾಜಕೀಯ ಮಾಡುವ ಸೂತ್ರದಲ್ಲಿ ನಂಬಿಕೆ ಇಟ್ಟ ಪಕ್ಷಕ್ಕೆ ಕಸಿವಿಸಿ ಶುರುವಾಗಿದೆ.#ರಾಜ್ಯವಿರೋಧಿಕಾಂಗ್ರೆಸ್
2/5— BJP Karnataka (@BJP4Karnataka) January 2, 2023
ಕರ್ನಾಟಕಕ್ಕೆ ಹನಿ ನೀರನ್ನೂ ಬಿಡುವುದಿಲ್ಲ ಎಂದು ಸೋನಿಯಾ ಗಾಂಧಿ ಘೋಷಿಸಿದ್ದರು. ಗೋವಾ ಉಸ್ತುವಾರಿಯಾಗಿದ್ದ ದಿನೇಶ್ ಗುಂಡೂರಾವ್ ಕರ್ನಾಟಕ ಮರೆತು ಗೋವಾ ಪರ ನಿಂತಿದ್ದಾರೆ. ಈಗ ರಾಜ್ಯಕ್ಕೆ ಬಿಜೆಪಿ ಅನುಕೂಲ ಮಾಡುತ್ತಿರುವಾಗ ಕಾಂಗ್ರೆಸ್ ಪಕ್ಷ ಆಂದೋಲನದ ಹೆಸರಿನಲ್ಲಿ ರಾಜಕೀಯ ಶುರು ಮಾಡಿರುವುದು ಅವರ ಜನವಿರೋಧಿ ಧೋರಣೆಗೆ ಸಾಕ್ಷಿ ಎಂದು ವಾಗ್ಧಾಳಿ ನಡೆಸಿದೆ.
ಕರ್ನಾಟಕಕ್ಕೆ ಹನಿ ನೀರನ್ನೂ ಬಿಡುವುದಿಲ್ಲ ಎಂದು ಸೋನಿಯಾ ಗಾಂಧಿ ಘೋಷಿಸಿದ್ದರು. ಗೋವಾ ಉಸ್ತುವಾರಿಯಾಗಿದ್ದ @dineshgrao ಕರ್ನಾಟಕ ಮರೆತು ಗೋವಾ ಪರ ನಿಂತಿದ್ದಾರೆ. ಈಗ ರಾಜ್ಯಕ್ಕೆ ಬಿಜೆಪಿ ಅನುಕೂಲ ಮಾಡುತ್ತಿರುವಾಗ ಕಾಂಗ್ರೆಸ್ ಪಕ್ಷ ಆಂದೋಲನದ ಹೆಸರಿನಲ್ಲಿ ರಾಜಕೀಯ ಶುರು ಮಾಡಿರುವುದು ಅವರ ಜನವಿರೋಧಿ ಧೋರಣೆಗೆ ಸಾಕ್ಷಿ.
3/5
— BJP Karnataka (@BJP4Karnataka) January 2, 2023
ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮಹಾದಾಯಿ ನ್ಯಾಯಾಧಿಕರಣ ಸ್ಥಾಪಿಸಿದ್ದು ಕಳಸಾ-ಬಂಡೂರಿ ಯೋಜನೆಯ ವೇಗವನ್ನು ಕುಂಠಿತಗೊಳಿಸಲು. ಕಾಂಗ್ರೆಸ್ನ ಜಲ ಜನಾಂದೋಲನ ಅದನ್ನು ಸಾಬೀತುಪಡಿಸಿದೆ. ರಾಜ್ಯಕ್ಕೆ ಒಳಿತು ಮಾಡುವ ಎಲ್ಲಾ ಯೋಜನೆಗಳಲ್ಲೂ ಕಾಂಗ್ರೆಸ್ಗೆ ಸಮಸ್ಯೆಯಿರುವುದು ಹೊಸತೇನಲ್ಲ ಎಂದಿದೆ.
ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮಹಾದಾಯಿ ನ್ಯಾಯಾಧಿಕರಣ ಸ್ಥಾಪಿಸಿದ್ದು ಕಳಸಾ-ಬಂಡೂರಿ ಯೋಜನೆಯ ವೇಗವನ್ನು ಕುಂಠಿತಗೊಳಿಸಲು. ಕಾಂಗ್ರೆಸ್ನ ಜಲ ಜನಾಂದೋಲನ ಅದನ್ನು ಸಾಬೀತುಪಡಿಸಿದೆ. ರಾಜ್ಯಕ್ಕೆ ಒಳಿತು ಮಾಡುವ ಎಲ್ಲಾ ಯೋಜನೆಗಳಲ್ಲೂ ಕಾಂಗ್ರೆಸ್ಗೆ ಸಮಸ್ಯೆಯಿರುವುದು ಹೊಸತೇನಲ್ಲ.
4/5
— BJP Karnataka (@BJP4Karnataka) January 2, 2023
ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ ಜನತೆಯ ನೀರಿನ ಬವಣೆ ನೀಗಿಸುವ ಕಳಸಾ-ಬಂಡೂರಿ ಯೋಜನೆಗೆ ವಿರೋಧವೇಕೆ? ಜಲ ಜನ ಆಂದೋಲನ ರದ್ದುಪಡಿಸಿದರೆ ಹೂಡಿಕೆ ದಂಡವಾಗುತ್ತದೆ ಎಂಬುದು ಡಿ.ಕೆ ಶಿವಕುಮಾರ್ ಅವರ ಲೆಕ್ಕಾಚಾರವೇ? ಜನಪರ ಯೋಜನೆಗಳಿಗೂ ವಿರೋಧವೇಕೆ ಎಂಬ ಪ್ರಶ್ನೆಗೆ ಕಾಂಗ್ರೆಸ್ ಸ್ಪಷ್ಟ ಉತ್ತರ ನೀಡಬೇಕಿದೆ ಎಂದು ಹೇಳಿದೆ.
ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ ಜನತೆಯ ನೀರಿನ ಬವಣೆ ನೀಗಿಸುವ ಕಳಸಾ-ಬಂಡೂರಿ ಯೋಜನೆಗೆ ವಿರೋಧವೇಕೆ? ಜಲ ಜನ ಆಂದೋಲನ ರದ್ದುಪಡಿಸಿದರೆ ಹೂಡಿಕೆ ದಂಡವಾಗುತ್ತದೆ ಎಂಬುದು @DKShivakumar ಅವರ ಲೆಕ್ಕಾಚಾರವೇ? ಜನಪರ ಯೋಜನೆಗಳಿಗೂ ವಿರೋಧವೇಕೆ ಎಂಬ ಪ್ರಶ್ನೆಗೆ ಕಾಂಗ್ರೆಸ್ ಸ್ಪಷ್ಟ ಉತ್ತರ ನೀಡಬೇಕಿದೆ. #ರಾಜ್ಯವಿರೋಧಿಕಾಂಗ್ರೆಸ್
5/5— BJP Karnataka (@BJP4Karnataka) January 2, 2023