ಗಾಜಿಯಾಬಾದ್ : ನಗರದ ಶಹೀದ್ ನಗರದಲ್ಲಿ ಕುರ್ಚಿಯ ಮೇಲೆ ಕುಳಿತು ತನ್ನ ಸಹೋದ್ಯೋಗಿಗಳೊಂದಿಗೆ ಮಾತನಾಡುತ್ತಿದ್ದ ಜಿಮ್ ಟ್ರೈನರ್ ಇದ್ದಕ್ಕಿದಂತೆ ಹೃದಯಾಘಾತಗೊಂಡು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.
ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅದೀಲ್ ಎಂಬ ಯುವಕನೆಂದು ಗುರುತಿಸಲಾಗಿದೆ. ಕಳೆದ ಭಾನುವಾರ ಸಂಜೆ 7 ಘಂಟೆಗೆ ಈ ದುರಂತ ಘಟನೆ ಬೆಳಕಿಗೆ ಬಂದಿದೆ. ಇವರು ಫಿಟ್ನೆಟ್ ಫ್ರೀಕ್ ಆಗಿದ್ದರು. ಪ್ರತಿದಿನ ಜಿಮ್ಗೆ ಹೋಗುತ್ತಿದ್ದರು ಆದ್ರೆ ಹೃದಯಘಾದಿಂದ ಸಾವನ್ನಪ್ಪಿರುವುದನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಆದಿಲ್ ಕೆಲವು ದಿನಗಳ ಹಿನ್ನೆಯಷ್ಟೇ ಸ್ವಂತ ಜಿಮ್ ನಡೆಸುತಿದ್ದರು ಎಂದು ಆತನ ಸ್ನೇಹಿತರು ಹೇಳಿದ್ದಾರೆ, ಹೃದಯಾಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ತನ್ನ ಸಹದ್ಯೋಗಿಗಳೊಂದಿಗೆ ಜಿಮ್ ನಲ್ಲಿ ಮಾತನಾಡುತ್ತಿರುವ ವೇಳೆ ಏಕಾಏಕಿ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ ಕೊಡಲೇ ಅಲ್ಲಿದ್ದ ಸಹದ್ಯೋಗಿಗಳು ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟೋತ್ತಿಗಾಗಲೇ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ. ಮೃತ ಆದಿಲ್ ಹೆಂಡತಿ ಮತ್ತು ನಾಲ್ಕು ಮಕ್ಕಳನ್ನು ಅಗಲಿದ್ದಾರೆ
एक और मौत LIVE-
कल ग़ाज़ियाबाद में 35 साल का एक जिम ट्रेनर सामान्य दिनों की तरह अपनी कुर्सी पर बैठा और वहीं हार्ट अटैक से उसकी मौत हो गई। सेकंड में मौत pic.twitter.com/7TX5di258X— Narendra nath mishra (@iamnarendranath) October 19, 2022