ಕೋಲಾರ: ಕೋಲಾರ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೇ ವಿಚಾರವಾಗಿ, ಮುನಿರತ್ನ ಪ್ರತಿಕ್ರಿಯೆ ನೀಡಿದ್ದಾರೆ.
ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಎಂದು ಅವರು ಘೋಷಣೆ ಮಾಡಲಿ ಮಾಡದೆ ಇರಲಿ, ಅವರು ಬರಲಿ ಬರದೆ ಇರಲಿ, ಅದು ನಮಗೆ ಬೇಡವಾದ ವಿಷಯಚವಾಗಿದೆ. ಆದರೆ ನಾವು ಅಂತೂ ಕೋಲಾರವನ್ನು ಗೆದ್ದೆ ಗೆಲ್ಲುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ಈಗ ರಾಜಕೀಯ ಎನ್ನವುದು ಯಾರೂ ಊಹೆ ಮಾಡಲಾಗುವುದಿಲ್ಲ. ನಮ್ಮಲ್ಲಿ ಈಗಾಗಲೇ ಪ್ರಬಲ ಅಭ್ಯರ್ಥಿ ಇದ್ದಾರೆ, ಯಾರೋ ಒಬ್ಬರು ಗಣ್ಯ ವ್ಯಕ್ತಿ, ಮುಖ್ಯಮಂತ್ರಿಗಳಾಗಿದ್ದವರು ಬಂದು ಗೆಲ್ತಾರೆ ಎನ್ನುವುದು ಭ್ರಮೆ ಎಂದು ಟಾಂಗ್ ನೀಡಿದ್ದಾರೆ.
ಅತ್ತೆ-ಸೊಸೆ ಬಾಂಧವ್ಯ ಚೆನ್ನಾಗಿರಬೇಕೇ? ಹಾಗಾದ್ರೆ ಮೊದಲು ಇದನ್ನ ತಿಳಿದುಕೊಳ್ಳಿ| Relationship Tips
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿ, ಅದು ಮುಖ್ಯಮಂತ್ರಿಗಳಿಗಿರುವ ಪರಮಾಧಿಕಾರ ಅವರು ಯಾವ ನಿರ್ಧಾರವನ್ನಾದರೂ ತೆಗದುಕೊಳ್ಳಬಹುದು ಜಾರಕಿಹೊಳಿ ಅವರು ಒಳ್ಳೆಯ ವ್ಯಕ್ತಿ, ಶಾಸಕ, ಜಾರಕಿಹೊಳಿ ಹಾಗೂ ಈಶ್ವರಪ್ಪ ಅವರನ್ನ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲು ಯಾವುದೇ ವಿರೋಧವಿಲ್ಲ ಕೆಲವು ಘಟನೆಗಳು, ಕುತಂತ್ರದ ಸಂಚು ಹಾಗಾಗಿ ಅವರು ಮೋಸ ಹೋಗಿದ್ದಾರೆ.
‘ಸಹಕಾರ ಸಂಘ’ಗಳ ಸದಸ್ಯರಿಗೆ ಗುಡ್ ನ್ಯೂಸ್: ಜ.31ರವರೆಗೆ ‘ಯಶಸ್ವಿನಿ ಯೋಜನೆ’ಗೆ ನೊಂದಣಿಗೆ ಅವಧಿ ವಿಸ್ತರಣೆ