ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಡೆತ್ ನೋಟ್ ಬರೆದಿಟ್ಟು ನಿಗಮದ ಅಧಿಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈ ಒಂದು ಪ್ರಕರಣಕ್ಕೆ ಈ ಒಂದು ಹಣ ವರ್ಗಾವಣೆ ಆಗಿದ್ದಾದರೂ ಎಲ್ಲಿ ಎಂಬುದರ ಕುರಿತು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಸಾಫ್ಟ್‌ವೇರ್ ಕಂಪನಿಯೊಂದರ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಸ್ಫೋಟಕವಾದ ಅಂತಹ ಮಾಹಿತಿ ಬಹಿರಂಗವಾಗಿದೆ.
ಹೌದು 87 ಕೋಟಿ ರೂ.ಗಳನ್ನು ಐಟಿ ಕಂಪನಿಯೊಂದರ 14 ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಆಗಿರುವ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ನಿಗಮದ ಖಾತೆಯಲ್ಲಿರುವ ಇನ್ನೂ 100 ಕೋಟಿ ರೂ. ವರ್ಗಾಯಿಸುವ ಪ್ರಯತ್ನಗಳೂ ನಡೆದಿದ್ದವು. ಈ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳ ಮಧ್ಯೆ ಅಸಮಾಧಾನ ಉಂಟಾಗಿತ್ತು.ಇದರಿಂದಾಗಿ 100 ಕೋಟಿ ರೂ. ವರ್ಗಾವಣೆ ಯತ್ನಕ್ಕೆ ಹಿನ್ನಡೆಯಾಗಿತ್ತು ಎನ್ನಲಾಗಿದೆ.
ಅವ್ಯವಹಾರ ಬೆನ್ನಲ್ಲೇ ನಿಗಮದ ಎಲ್ಲಾ ಕಚೇರಿ ತೆರೆಯಲಾಗಿದ್ದು ಅಕೌಂಟೆಂಟ್ ಪರುಶುರಾಮ್ ಕಚೇರಿ ಬೀಗ ಹಾಕಲಾಗಿದೆ. ಕಳೆದ ಶುಕ್ರವಾರ ಲಾಕ್ ಆಗಿರುವ ಕಚೇರಿ ಇವತ್ತಿನವರೆಗೂ ಓಪನ್ ಆಗಿಲ್ಲ. ಅಲ್ಲದೆ ಈ ಒಂದು ಪ್ರಕರಣವನ್ನು ರಚಿಸ ಸರ್ಕಾರ ಸಿಐಡಿ ಗೆ ಹಸ್ತಾಂತರಿಸಿದ್ದರಿಂದ ಹಿಂದೂ ಸಿಐಡಿ ತಂಡ ಬೆಳಿಗ್ಗೆ ಮೃತ ಚಂದ್ರಶೇಖರ್ ನಿವಾಸಕ್ಕೆ ಭೇಟಿ ನೀಡಿ ಅವರ ಪತ್ನಿ ಕವಿತಾರಿಂದ ಮಾಹಿತಿ ಪಡೆದುಕೊಂಡು ಕೆಲವು ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಅಧೀಕ್ಷಕ ಚಂದ್ರಶೇಖರನ್ ಅವರು ತನ್ನ ಡೆತ್‌ನೋಟ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಜೆಜೆ ಮತ್ತು ಅಕೌಂಟೆಂಟ್ ಪರಶುರಾಮ್ ಹೆಸರು ಬರೆದಿದ್ದರು. ಪದ್ಮನಾಭ ಜೆಜೆ ಕಚೇರಿ ಓಪನ್ ಇದ್ದರೂ ಅವರು ಇನ್ನೂ ಕಚೇರಿಗೆ ಬಂದಿಲ್ಲ. ಚಂದ್ರಶೇಖರ್ ಮೃತಪಟ್ಟ ನಂತರ ಪರುಶುರಾಮ್ ಅವರು ಕಚೇರಿಗೆ ಬಂದೇ ಇಲ್ಲ.