ಬೆಂಗಳೂರು : ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ, ವರುಣಾ ಕ್ಷೇತ್ರದಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ 60,000 ಕ್ಕಿಂತ ಹೆಚ್ಚು ಲೀಡ್ ಕೊಡದೆ ಹೋದರೆ ನನಗೆ ಅವಮಾನ ಆಗುತ್ತದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಬಿವೈ ವಿಜಯೇಂದ್ರ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದ್ದು ಈ ರೀತಿ ಹೇಳುವುದಾದರೆ ನಿಮ್ಮ ಗ್ಯಾರಂಟಿ ಯೋಜನೆಗಳ ವಿಶ್ವಾಸ ಎಲ್ಲಿ ಹೋಯಿತು ಎಂದು ಪ್ರಶ್ನೆಸಿದರು.
ಯುಪಿಐ ಮೂಲಕ ನಗದು ಠೇವಣಿ ಸೌಲಭ್ಯವನ್ನು ಘೋಷಿಸಿದ ಆರ್ಬಿಐ, ಈಗ ಎಟಿಎಂ ಕಾರ್ಡ್ ಅಗತ್ಯವಿಲ್ಲ
ಮಾಧ್ಯಮದ ಸಂದರ್ಶನ ಒಂದರಲ್ಲಿ ಮಾತನಾಡಿದ ಬಿ ವೈ ವಿಜಯೇಂದ್ರ ಅವರು ಸಿಎಂ ಸಿದ್ದರಾಮಯ್ಯ ಅವರು ಕಳೆದ ನಾಲ್ಕೈದು ದಿನಗಳಿಂದ ಮೈಸೂರಿನಲ್ಲಿ ಚುನಾವಣಾ ಪ್ರಚಾರಕ್ಕಾಗಿ ಬಿಡು ಬಿಟ್ಟಿದ್ದಾರೆ. ಋಣ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ನಾನು ಸಿಎಂ ಸ್ಥಾನದಲ್ಲಿ ಇರಬೇಕು ಬೇಡ ಹಾಗಾದ್ರೆ ನನಗೆ 60,000 ಲೀಡ್ ಕೊಡಿ ಎಂದು ಹೇಳಿದ್ದಾರೆ ಹಾಗಾದರೆ ಇವರಿಗೆ ಗ್ಯಾರಂಟಿ ಯೋಜನೆಗಳ ಮೇಲೆ ಇರುವಂತಹ ವಿಶ್ವಾಸ ಹೋಯಿತಾ ಎಂದು ಪ್ರಶ್ನಿಸಿದರು.
ಬೆಂಗಳೂರಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ‘ಡ್ರಗ್ಸ್ ಮಾರಾಟ’: ಇಬ್ಬರು ಆರೋಪಿಗಳು ಸೇರಿದಂತೆ ಹಲವು ವಸ್ತುಗಳು ವಶಕ್ಕೆ
ಈಗಾಗಲೇ ಕಾಂಗ್ರೆಸ್ ಈ ಯೋಜನೆಗಳಿಂದ ಜನರಿಗೂ ಕೂಡ ಅರಿವಾಗಿದ್ದು ಚುನಾವಣೆಯಲ್ಲಿ ಇವರಿಗೆ ಮತ ಹಾಕಿ ನಾವು ಮೂರ್ಖರಾಗಿದ್ದೇವೆ ಈ ಬಾರಿ ಲೋಕಸಭೆಯಲ್ಲಿ ನಾವು ಮೂರ್ಖರಾಗುವುದು ಬೇಡ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಬೇಕು ಎಂದು ಜನ ತೀರ್ಮಾನಿಸಿದ್ದಾರೆ ಮತ್ತೊಮ್ಮೆ ಪ್ರಧಾನಿಯಾಗಿ ನರೇಂದ್ರ ಮೋದಿಯವರು ದೇಶದ ನೇತೃತ್ವ ವಹಿಸಲಿದ್ದಾರೆ ಎಂದು ಬಿ ವೈ ವಿಜಯೇಂದ್ರ ತಿಳಿಸಿದರು.