ಬೆಂಗಳೂರು : ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಬಿಜೆಪಿ ನಾಯಕರು ಭೇಟಿ ನೀಡಿದ್ದರು. ಈ ವೇಳೆ ಭಾಷಣದಲ್ಲಿ ಬಿಜೆಪಿ MLC ಸಿಟಿ ರವಿ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದು, ಅವರ ವಿರುದ್ಧ FIR ದಾಖಲಾಗಿದೆ. ಈ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ಸಿಟಿ ರವಿ ಪ್ರಚೋದನಾಕಾರಿ ಭಾಷಣ ಏನು ಮಾಡಿಲ್ಲ. ಇದಕ್ಕಿಂತ ಕೆಟ್ಟದಾಗಿ ಕಾಂಗ್ರೆಸ್ ನವರು ಬಹಳ ಸಲ ಮಾತನಾಡಿದ್ದಾರೆ. ವಿಧಾನಸೌಧದಲ್ಲೇ ಪಾಕ್ ಜಿಂದಾಬಾದ್ ಎಂದವರಿಗೆ ಏನು ಮಾಡಿದ್ರಿ? ಸಿಟಿ ರವಿ ಏನಾದರು ದೇಶದ್ರೋಹಿ ಕೆಲಸ ಮಾಡಿದ್ದರಾ? ಯಾರ್ಯಾರು ಮಾತಾಡುತ್ತಾರೋ ಅವರ ವಿರುದ್ಧ ಕೇಸ್ ಹಾಕಲು ಟೀಮ್ ಮಾಡಿದ್ದಾರೆ.
ಕಾಂಗ್ರೆಸ್ ನಲ್ಲಿ ಒಂದು ಟೀಮ್ ಮಾಡಿದ್ದಾರೆ, ಅದರಲ್ಲಿ ಸಚಿವರು ಇದ್ದಾರೆ. ಇನ್ನೆರಡು ವರ್ಷ ಆಮೇಲೆ ಇದೆ ನಿಮಗೆ ತಿರುಗುಬಾಣ ಆಗುತ್ತೆ. ನಮ್ಮ ಸರ್ಕಾರ ಬಂದಾಗ ನಿಮ್ಮ ಮೇಲೂ 100% ಇದೆ ಮಾಡುತ್ತೇವೆ. ಇದರ ಅಪ್ಪಂನಂತಹ ಡಬಲ್ ಕೇಸ್ ಮಾಡಿತ್ತೇವೆ. ಕೇಂದ್ರದಲ್ಲೂ ನಾವು ಅಧಿಕಾರದಲ್ಲಿ ಇದ್ದೇವೆ ರಾಜ್ಯದಲ್ಲೂ ಬರುತ್ತೇವೆ. ಬಿಜೆಪಿ ಬಳಿ ಬೇಡುವಂತಹ ಸ್ಥಿತಿ ನಿಮಗೆ ಬರುತ್ತದೆ. ಮುಸ್ಲಿಂರದ್ದೆ ತಪ್ಪು ಅಂತ ಚಲುವರಾಯಸ್ವಾಮಿ ಅವರೇ ಹೇಳಿದ್ದಾರೆ. ಕೃತ್ಯವೆಸಗಿದವರ ವಿರುದ್ಧ ಗೂಂಡಾ ಕಾಯ್ದೆ ಹಾಕುವ ಬಗ್ಗೆ ಚರ್ಚೆ ಮಾಡಿಲ್ಲ.