ಕೆಎನ್ಎನ್ಡಿಜಿಟಲ್ ಡೆಸ್ಕ್ : ಹೊಸ ವರ್ಷದ ಆಚರಣೆಗಳು ಮುಗಿದಿದ್ದು, ಮಕರ ಸಂಕ್ರಾಂತಿ ಶೀಘ್ರದಲ್ಲೇ ಬರಲಿದೆ. ಆದ್ರೆ, ಈ ವರ್ಷ ಸಂಕ್ರಾಂತಿಯ ದಿನಾಂಕದ ಬಗ್ಗೆ ಜನರಲ್ಲಿ ಗೊಂದಲವಿದೆ. ಮಕರ ಸಂಕ್ರಾಂತಿಯನ್ನ ಜನವರಿ 14 ಅಥವಾ ಜನವರಿ 15 ರಂದು ಆಚರಿಸಲಾಗುತ್ತದೆಯೇ.? ಗೊಂದಲ ಶುರುವಾಗಿದೆ. ಮಕರ ಸಂಕ್ರಾಂತಿ ರಾತ್ರಿಯಲ್ಲಿ ಕಾಣಿಸಿಕೊಳ್ಳುವುದು ಇದಕ್ಕೆ ಮುಖ್ಯ ಕಾರಣ. ಅಂದು ಸೂರ್ಯನು ತನ್ನ ಪಥವನ್ನ ಬದಲಾಯಿಸುತ್ತಾನೆ. ಇನ್ನು ಮಕರ ರಾಶಿಯನ್ನ ಪ್ರವೇಶಿಸುವ ದಿನವೇ ಸಂಕ್ರಾಂತಿಯನ್ನ ಆಚರಿಸಲಾಗುತ್ತದೆ. ಆದ್ರೆ, ಈ ಬಾರಿ ರಾತ್ರಿ ವೇಳೆಯಲ್ಲಿ ಸೂರ್ಯನ ರಾಶಿಯ ಪರಿವರ್ತನೆ ಆಗುತ್ತಿರುವುದರಿಂದ ಹಬ್ಬವನ್ನ ಯಾವಾಗ ಆಚರಿಸಬೇಕು ಎಂಬ ಬಗ್ಗೆ ಹಲವು ಅನುಮಾನಗಳು ಮೂಡಿವೆ.
ಮಕರ ಸಂಕ್ರಾಂತಿಯನ್ನ ಸೂರ್ಯನು ಮಕರ ರಾಶಿಯಲ್ಲಿ ಪ್ರವೇಶಿಸುವ ದಿನದಂದು ಸಂಕ್ರಾಂತಿ ಆಚರಿಸಲಾಗುತ್ತದೆ. ಈ ವರ್ಷ ಜನವರಿ 14 ರಂದು (ಶನಿವಾರ) ರಾತ್ರಿ 08.45ಕ್ಕೆ ಸೂರ್ಯ ಭಗವಂತ ಮಕರ ರಾಶಿಗೆ ಬರುತ್ತಾನೆ. ಹಾಗಾಗಿ ಮಕರ ಸಂಕ್ರಾಂತಿ ಮುಹೂರ್ತ ಜನವರಿ 14 ರಂದು ಬರಲಿದೆ. ಆದ್ರೆ, ಈ ಬಾರಿ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಸಮಯದಿಂದ ಮಕರ ಸಂಕ್ರಾಂತಿಯ ದಿನಾಂಕದ ಬಗ್ಗೆ ಗೊಂದಲವಿದೆ.
ಮಕರ ಸಂಕ್ರಾಂತಿ 2023 ಯಾವಾಗ?
ಪಂಚಾಂಗದ ಪ್ರಕಾರ, ಸೂರ್ಯನ ಮಕರ ಸಂಕ್ರಾಂತಿ ಮುಹೂರ್ತವು ಜನವರಿ 14ರ ಶನಿವಾರದಂದು ರಾತ್ರಿ 08:45ಕ್ಕೆ ಇರುತ್ತದೆ. ಸಾಮಾನ್ಯವಾಗಿ ಮಕರ ಸಂಕ್ರಾಂತಿಯ ಸಮಯದಲ್ಲಿ ಸ್ನಾನ ಮತ್ತು ದಾನಗಳನ್ನ ಮಾಡಲಾಗುತ್ತದೆ. ಆದ್ರೆ, ಸಂಕ್ರಾಂತಿ ಸ್ನಾನ ಮತ್ತು ದಾನವನ್ನ ರಾತ್ರಿಯಲ್ಲಿ ಮಾಡಬಾರದು. ಆದ್ದರಿಂದ ಉದಯತಿಥಿ ಎಂದರೆ ಸೂರ್ಯೋದಯವಾದಾಗ ಮಕರ ಸಂಕ್ರಾಂತಿ ಸ್ನಾನ ಮಾಡಬೇಕು ಎಂದು ಪಂಡಿತರು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಈ ವರ್ಷ ಮಕರ ಸಂಕ್ರಾಂತಿಯನ್ನ 15ನೇ ಜನವರಿ 2023 ಭಾನುವಾರದಂದು ಆಚರಿಸಲಾಗುವುದು ಎಂದು ಹೇಳಲಾಗಿದೆ.
ಸಿಎಂ ಬೊಮ್ಮಾಯಿಯವರೇ ವಿಧಾನಸೌಧದಲ್ಲಿ ಸಿಕ್ಕ ಹಣ ಯಾವುದು? ಉತ್ತರಿಸಿ: ಟ್ವಿಟ್ ನಲ್ಲಿ ಕಾಂಗ್ರೆಸ್ ಪ್ರಶ್ನೆ
Good News : ದೇಶದ ರೈತರಿಗೆ ಭರ್ಜರಿ ನ್ಯೂಸ್ ; ‘Pm Kisan’ ಹಣ ದ್ವಿಗುಣ, ಅನ್ನದಾತರ ಆದಾಯ ದುಪ್ಪಟ್ಟು