ಬೆಂಗಳೂರು : ರಾಜ್ಯದಲ್ಲಿ ಆರ್ ಎಸ್ ಎಸ್ ನಿರ್ಬಂಧ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ವಿಪಕ್ಷ ನಾಯಕರು ಹಾಗೂ ಆರ್ ಎಸ್ ಎಸ್ ಮುಖಂಡರು ತೀವ್ರ ವಾಗ್ದಾಳಿ ನಡೆಸಿದ್ದು ಇದರ ಮಧ್ಯ ನಾನು ಬಿಜೆಪಿಯಲ್ಲಿದ್ದಾಗ ಅಂದಿನ ಆರ್ ಎಸ್ ಎಸ್ ಚೆನ್ನಾಗಿತ್ತು ಆದರೆ ಈಗ ಬಿಜೆಪಿಯ ಪುಡಾರಿಗಳು ಸೇರಿದ ಮೇಲೆ ಆರ್ ಎಸ್ ಎಸ್ ಹಾಳಾಗಿದೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದರು.
ನಾನು ಆರ್ ಎಸ್ ಎಸ್ ಹಾಗೂ ಬಿಜೆಪಿಯಲ್ಲಿ ಇದ್ದಾಗ ಅಂದಿನ ಆರ್ ಎಸ್ ಎಸ್ ಚೆನ್ನಾಗಿತ್ತು. ಈಗ ಬಿಜೆಪಿಯ ಪುಡಾರಿಗಳು ಸೇರಿದ ಮೇಲೆ ಆರ್ ಎಸ್ ಎಸ್ ಹಾಳಾಗಿದೆ. ಯಾವುದೇ ಸಂಸ್ಥೆ ಅಥವಾ ಕಾರ್ಯಕ್ರಮ ಮಾಡಬೇಕಾದ ಅನುಮತಿ ಪಡೆಯಬೇಕು ಅಂತ ಹೇಳಿದ್ದರು. ಪಿಡಿಒ ಪ್ರವೀಣ್ ಕುಮಾರ್ ಅಮಾನತು ಆದೇಶಕ್ಕೆ ತಡೆಯಾಜ್ಞೆ ನೀಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಕೋರ್ಟ್ ಆದೇಶಕ್ಕೆ ನಾವು ತಲೆಬಾಗಬೇಕಾಗಿದೆ ಎಂದು ತಿಳಿಸಿದರು.








