Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮದುವೆ ನಿರಾಕರಿಸಿದ್ದಕ್ಕೆ ಯುವತಿ ಸೇರಿ ಕುಟುಂಬದವರ ಮೇಲೆ ಭೀಕರ ಹಲ್ಲೆ: ಬೆಳಗಾವಿಯಲ್ಲಿ ಪಾಗಲ್ ಪ್ರೇಮಿಯ ಅಟ್ಟಹಾಸ!

18/03/2026 3:18 PM

ಶಾಲಾ ಆಡಳಿತ ಮಂಡಳಿ : ಎಡವಟ್ಟು : ಪ್ರವೇಶ ಪತ್ರ ನಿರಾಕರಿಸಿದ ಹಿನ್ನೆಲೆ, ಇಬ್ಬರು SSLC ವಿದ್ಯಾರ್ಥಿಗಳ ಭವಿಷ್ಯ ಅತಂತ್ರ!

18/03/2026 3:17 PM

ರಾಜ್ಯದಲ್ಲೊಂದು ‘ವಿಸರ್ಜನೆ’ ಅಭಿಯಾನ: ಭಗ್ನಗೊಂಡ ದೇವರ ಫೋಟೋಗಳಿಗೆ ಸಿಗಲಿದೆ ಗೌರವಪೂರ್ಣ ವಿದಾಯ!

18/03/2026 2:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರತಿ ಗ್ರಾಮದ ಅಭಿವೃದ್ದಿ ಆದಾಗ ಸಮಗ್ರ ಕರ್ನಾಟಕ ಪರಿಕಲ್ಪನೆ ಸಾಕಾರ: ಸಂಸದ ಬಸವರಾಜ ಬೊಮ್ಮಾಯಿ
KARNATAKA

ಪ್ರತಿ ಗ್ರಾಮದ ಅಭಿವೃದ್ದಿ ಆದಾಗ ಸಮಗ್ರ ಕರ್ನಾಟಕ ಪರಿಕಲ್ಪನೆ ಸಾಕಾರ: ಸಂಸದ ಬಸವರಾಜ ಬೊಮ್ಮಾಯಿ

By kannadanewsnow0904/01/2026 3:20 PM

ಬೆಂಗಳೂರು: ಸಮ್ರಗ ಕರ್ನಾಟಕ ಪರಿಕಲ್ಪನೆ ಸಾಕಾರ ಆಗಲು ಪ್ರತಿ ಜಿಲ್ಲೆ, ಗ್ರಾಮಗಳ ಅಭಿವೃದ್ಧಿ ಆಗಬೇಕು. ಯಾವಾಗ ಉತ್ತರ ಕರ್ನಾಟಕ ಭಾಗದ ಜನರ ತಲಾ ಆದಾಯ ರಾಜ್ಯದ ತಲಾ ಆದಾಯಕ್ಕೆ ಸರಾಸರಿ ಬರುತ್ತದೆ ಆಗ ಅಭಿವೃದ್ಧಿ ಆದಂತೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಬೆಂಗಳೂರಿನಲ್ಲಿ ವಿಜಯ ಕರ್ನಾಟಕ ಪತ್ರಿಕೆ ಉತ್ತರ ಕರ್ನಾಟಕ ಭಾಗದ ಸಾಧಕರಿಗೆ ಏರ್ಪಡಿಸಿದ್ದ ವಿಕೆ ಎಕ್ಸಲೆನ್ಸ್ ಆಂಡ್ ಆನರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ, ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿ ಮಾತನಾಡಿದರು. ವಿಜಯ ಕರ್ನಾಟಕ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗರುತಿಸಿ ಪ್ರಶಸ್ತಿ ನೀಡುತ್ತಿದ್ದಾರೆ. ಯಾರೂ ಕೂಡ ಪ್ರಶಸ್ತಿ ಗಾಗಿ ಸಾಧನೆ ಮಾಡಿಲ್ಲ ಎನಿಸುತ್ತದೆ. ಬದುಕಿನಲ್ಲಿ ಏನಾದರೂ ಸಾಧಿಸಬೆಕು ಅದರಿಂದ ನಮ್ಮ ರಾಜ್ಯ ಸಮಾಜ ಮುಂದೆ ಬರಬೇಕು ಅಂತ ಸಾಧನೆ ಮಾಡಿದ್ದಿರಿ, ನೀವು ಸಿವಿಲ್ ಎಂಜನೀಯರಿಂಗ್ , ಆರ್ಕಿಟೆಕ್ ನಲ್ಲಿ ಸಾಧನೆ ಮಾಡಿದ್ದೀರಿ, ಬೆಂಗಳೂರಿನಲ್ಲಿ ಇದ್ದು ಸಾಧನೆ ಮಾಡುವುದಕ್ಕಿಂತ ಉತ್ತರ ಕರ್ನಾಟಕದಲ್ಲಿ ಸಾಧನೆ ಮಾಡುವುದು ಬಹಳ ಕಷ್ಟ ಇಲ್ಲಿ ಎಲ್ಲವೂ ಕೈಗೆಟಕುವ ಸ್ಥಿತಿಯಲ್ಲಿರುತ್ತದೆ. ಅಲ್ಲಿ ಪ್ರತಿಯೊಂದು ಕಷ್ಟ ಪಟ್ಟು ಪಡೆಯಬೇಕು ಎಂದು ಹೇಳಿದರು.

ಸಮ್ರಗ ಕರ್ನಾಟಕ ಪರಿಕಲ್ಪನೆ ಸಾಕಾರ ಆಗಲು ಪ್ರತಿ ಜಿಲ್ಲೆ ಗ್ರಾಮಗಳ ಅಭಿವೃದ್ಧಿ ಆಗಬೇಕು. ನೀವು ಎಂತಹ ಕಷ್ಡದ ಪರಿಸ್ಥಿಯಲ್ಲಿ ಸ್ವಾಭಿಮಾನದಿಂದ ಸಾಧನೆ ಮಾಡಿದ್ದೀರಿ. ಕರ್ನಾಟಕ ಸುಸಂಸ್ಕೃತ ರಾಜ್ಯ ಉತ್ತರ ಕರ್ನಾಟಕ ಸಂಸ್ಕೃತಿ ಮತ್ತು ಸಂಸ್ಕಾರ ಮಾನವೀಯತೆಯಿಂದ ಕೂಡಿರುವ ಸಂಸ್ಕಾರ ಹೊಂದಿದೆ. ಇನ್ನೊಬ್ಬರನ್ನು ನಮ್ಮವರಂತೆ ಗೌರವಿಸುವ ಸಂಸ್ಕಾರ ಅಲ್ಲಿದೆ. ಜಾತಿ ಗೀತಿ ಎಲ್ಲಾ ರಾಜಕಾರಣಿಗಳು, ಮಠಾಧೀಶರಲ್ಲಿ ಇರುತ್ತದೆ. ಹಳ್ಳಿ ಯಲ್ಲಿ ಎಲ್ಲರೂ ಮಾವ, ಅಳಿಯ, ಕಾಕಾ, ಎನ್ನುವ ಸಂಬಂದ ಎಲ್ಲರಲ್ಲೂ ಇರುತ್ತವೆ. ಹೀಗಾಗಿ ಇನ್ನೂ ಸಂಬಂಧಗಳು ಜಿವಂತವಾಗಿವೆ. ಬೆಂಗಳೂರಿನಲ್ಲಿ ಕೋಟಿ ರೂ. ಬೆಲೆ ಬಾಳುವ ಪ್ಲಾಟ್ ನಲ್ಲಿ ಇರುವುದಕ್ಕಿಂತ ಹಳ್ಳಿಗಳಲ್ಲಿ ಇರುವುದು ಖುಷಿ ಇದೆ. ಇದು ನನ್ನ ಅನುಭವದ ಮಾತು ಎಂದು ಹೇಳಿದರು.

ತಲಾ ಆದಾಯ ವ್ಯತ್ಯಾಸ

ನಾವು ಇನ್ನೂ ಬಹಳ ಸಾಧಿಸಬೇಕಿದೆ. ಬೆಂಗಳೂರು ಬೆಳವಣಿಗೆ ಮಿತಿ ಮೀರಿದೆ. ಸುತ್ತಲಿನ ಜಿಲ್ಲೆಗಳು ಅಭಿವೃದ್ಧಿ ಆಗಿವೆ. ನಮ್ಮ ದೂರದ ಕಲಬುರ್ಗಿ, ಬೀದರ ರಾಯಚೂರು ಇನ್ನೂ ಬೆಳೆಯಬೇಕು. ಅಲ್ಲಿ ಬೆಳೆಯಲು ಅವಕಾಶ ಇದೆ ಅದಕ್ಕೆ ಉತ್ತಮ ವಾತಾವರಣ ಸೃಷ್ಟಿಸುವ ಕೆಲಸ ಸರ್ಕಾರ ಮಾಡಬೇಕು. ಕರ್ನಾಟಕದ ತಲಾವಾರು ಆದಾಯ 3.40 ಲಕ್ಷ ಅಂತ ಆಗಿದೆ. ಇದು ಸತ್ಯ ಅಲ್ಲಾ. ಬೆಂಗಳೂರಿನಲ್ಲಿ ತಲಾ ಆದಾಯ 7.5 ಲಕ್ಷ ರೂ. ಇದೆ. ಆದರೆ ಉತ್ತರ ಕರ್ನಾಟಕದ ಬೀದರದು 1.25 ಲಕ್ಷ ಇದೆ. ಗುಲಬರ್ಗ 1.40. ಲಕ್ಷ ಇದೆ. ಹುಬ್ಬಳ್ಳಿ 1.80 ಲಕ್ಷ‌ ಇದೆ. ಯಾವಾಗ ಆ ಭಾಗದ ತಲಾ ಆದಾಯ ರಾಜ್ಯದ ಸರಾಸರಿ ಬರುತ್ತದೆ ಆಗ ಅಭಿವೃದ್ಧಿ ಆದಂತೆ.‌ ಇಲ್ಲಿ ಐಟಿ ಬಿಟಿ ಇರುವುದರಿಂದ ಅವರ ಆದಾಯ ಹೆಚ್ಚಿರುವುದರಿಂದ ಆ ರಿತಿ ಬಿಂಬಿಸಲಾಗುತ್ತಿದೆ. ತಲಾ ಆದಾಯ ಸಿಟಿ ಗ್ರಾಮೀಣ ಪ್ರದೇಶದಲ್ಲಿ ವ್ಯತ್ಯಾಸ ಇದೆ. ಉತ್ತರ ಕರ್ನಾಟಕದಲ್ಲಿ ಇನ್ನೂ ಕಡಿಮೆ ಇದೆ. ಇದನ್ನು ಯೋಜನಾ ಆಯೊಗ ಗಮನಿಸಿ ಸರ್ಕಾರದ ಗಮನಕ್ಕೆ ತರಬೆಕು ಅವರು ಬಜೆಟ್ ನಲ್ಲಿ ಯೋಜನೆ ರೂಪಿಸಿ ಅಭಿವೃದ್ದಿ ಪಡಿಸಬೇಕು ಎಂದರು.

ಯೋಜನೆಗಳು ಸಾಕಾರಗೊಳ್ಳಲಿ

ಗುಲಬರ್ಗ ಮಧ್ಯಭಾರತದ ಸಮೀಪ ಬರುತ್ತದೆ. ಗುಲಬರ್ಗಾ ಮಧ್ಯ ಭಾರತದ ಕೇಂದ್ರವಾಗಿ ಬೆಳೆಯಬಹುದು. ಅಲ್ಲಿ ಏರ್ ಪೋರ್ಟ್ ಇತ್ತು ಅದನ್ನು ಸ್ಥಗಿತಗೊಳಿಸಲಾಗಿದೆ. ಅದರಿಂದ ಆ ಭಾಗದ ಜನರಿಗೆ ಅನಾನುಕೂಲವಾಗುತ್ತದೆ. ನಾನು ಸಿಎಂ ಆಗಿದ್ದಾಗ ಗುಲಬರ್ಗ ಟೆಕ್ಸ್ ಟೈಲ್ ಪಾರ್ಕ್ ಮಾಡಿದ್ದೆವೆ. ಅದಕ್ಕಾಗಿ 900 ಎಕರೆ ಜಮೀನು ನೀಡಿದ್ದೇವೆ. ಅಲ್ಲಿ ಒಂದು ಲಕ್ಷ ಜನರಿಗೆ ಉದ್ಯೋಗ ಸಿಗುತ್ತದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯದ ಸಚಿವರೊಂದಿಗೆ ಮಾತನಾಡಿದ್ದೆನೆ‌. ಶೀಘ್ರವೇ ಅದನ್ನು ಆರಂಭಿಸಲು ಕ್ರಮ ಕೈಗೊಳ್ಳುತ್ತೇವೆ. ರಾಯಚೂರಿನಲ್ಲಿ ಫಾರ್ಮಾ ಕಂಪನಿ ಬರಲು ಅವಕಾಶ ಮಾಡಿದ್ದೇವೆ. ಅಲ್ಲಿ ಏರ್ ಪೋರ್ಟ್ ಮಾಡಲು ಜಮಿನು‌ ಕೊಟ್ಡಿದ್ದೇವೆ. ಅಲ್ಲಿನ ಜನರು ಶ್ರಮಜಿವಿಗಳಿದ್ದಾರೆ. ಅವರು ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಾರೆ. ಕಲ್ಯಾಣ ಕರ್ನಾಟಕ ಮಂಡಳಿಗೆ ಮಿಸಲಿಟ್ಟ. ಹಣ ಸಂಪೂರ್ಣ ಬಳಕೆ ಆಗಬೇಕು. ವಿಜಯಪುರ ವಿಮಾನ ನಿಲ್ದಾಣ ನಾವಿದ್ದಾಗ ಸಿವಿಲ್ ಕೆಲಸ ಮುಗಿದಿತ್ತು. ಎರಡೂವರೆ ವರ್ಷ ಆಗಿದೆ. ಇನ್ನೂ ಆಗಿಲ್ಲ. ಎರಡನೇ ಹಾಗೂ ಮೂರನೆ ದರ್ಜೆಯ ನಗರಗಳು ಅಭಿವೃದ್ಧಿ ಆಗುತ್ತಿವೆ. ಉದಾಹರಣೆಗೆ ಬಿಜಾಪುರ ಸಾಕಷ್ಟು ಅಭಿವೃದ್ಧಿ ಆಗಿದೆ. ಅಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಅದನ್ನು ರಪ್ತು ಮಾಡಬಹುದು. ಹುಬ್ಬಳ್ಳಿ ಧಾರವಾಡದಲ್ಲಿ ಏರೊ ಸ್ಪೇಸ್ ಕಂಪನಿಗಳು ಬಂದಿವೆ.

ತಾವು ಬಹಳ ಶ್ರಮಜಿವಿಗಳು ಶ್ರಮ ಇಲ್ಲದೆ ಯಾವುದೇ ಸಾಧನೆ ಆಗುವುದಿಲ್ಲ. ನಾನು ಟಾಟಾ ಇಂಡಸ್ಟ್ರಿ ಯಲ್ಲಿ ಕೆಲಸ ಮಾಡುವಾಗ ಒಬ್ಬ ನಿರ್ದೇಶಕರು ಲಕ್ ಬಗ್ಗೆ ಹೇಳಿದರು. ಸಮಯಕ್ಕೆ ತಕ್ಕ ಪ್ರತಿಫಲ ಸಿಕ್ಕರೆ ಸಾಧನೆ ಮುಂದೆ ತೆಗೆದುಕೊಂಡು ಹೋಗಬಹುದು. ಇನ್ನೊಂದು ಹಾಸಿಗೆ ಇದ್ದವನಿಗೆ ನಿದ್ದೆ ಇಲ್ಲ ನಿದ್ದೆ ಇದ್ದವನಿಗೆ ಹಾಸಿಗೆ ಇಲ್ಲ. ಹಾಸಿಗೆ ಇದ್ದವನು ಬೆವರು ಸುರಿಸಿ ದುಡಿದರೆ ನಿದ್ದೆ ಬರುತ್ತದೆ. ಶ್ರಮ ಮತ್ತು ಸಂಘರ್ಷ ಜೀವಂತವಾಗಿದ್ದಾಗ ಮಾತ್ರ ಸಂತೋಷ ಮತ್ತು ಯಶಸ್ವಿಯಾಗಿರಲು ಸಾಧ್ಯ ಎಂದರು.

ಖನಿಜದಿಂದ ವಜ್ರ ತೆಗೆದಂತೆ

ನೀವು ಬಹಳ ಖುಷಿಯಿಂದ ಬಂದಿದ್ದೀರಿ, ನಿಮ್ಮ ಕುಟುಂಬದವರು ಸಮತೊಷದಿಂದ ಇದ್ದಾರೆ‌. ವಿಜಯ ಕರ್ನಾಟಕದವರು ಸಾಧಕರನ್ನು ನ್ಯಾಯ ಸಮ್ಮತವಾಗಿ ಆಯ್ಕೆ ಮಾಡುತ್ತಾರೆ. ಅವರು ಖನಿಜದಿಂದ ವಜ್ರವನ್ನು ತೆಗೆದಂತೆ ಆಯ್ಕೆ ಮಾಡಿದ್ದಾರೆ. ವಿಜಯ ಕರ್ನಾಟಕ ಸುದ್ದಿಯನ್ನು ನೀಡುವ ಮೂಲಕ ಜಾಗೃತಿ ಮೂಡಿಸುತ್ತದೆ.‌ ಜನರ ಸಮಸ್ಯೆಗಳನ್ನು ಚರ್ಚೆಗೆ ಇಡುತ್ತಾರೆ. ಹಲವಾರು ಸಮಾಜಮುಖಿಯಾಗಿ ಕೆಲಸ ಮಾಡುತ್ತಾರೆ.‌

ನಾನು ಮಂತ್ರಿಯಾಗಿ ಕೊಪ್ಪಳಕ್ಕೆ ಹೋದಾಗ ಅಲ್ಲಿ ತುಂಗಭದ್ರಾ ಡ್ಯಾಮ್ ನೀರು ಲೀಕ್ ಆಗುತ್ತಿರುವ ಬಗ್ಗೆ ಆರ್ಟಿಕಲ್ ಬರೆದಿದ್ದರು. ಅದನ್ನು ನೋಡಿ ತಕ್ಷಣ ಅಧಿಕಾರಿಗಳ ಸಭೆ ಮಾಡಿ ಸುಮಾರು ಇನ್ನೂರು ಕಿಮಿ ಕೆನಾಲ್ ಮಾಡಿದೆವು ಈಗ ಎರಡೂವರೆ ಲಕ್ಷ ಎಕರೆ ನೀರಾವರಿ ಆಗಿದೆ. ನಾನು ವಾರ್ ಆನ್ ಡ್ರಗ್ಸ್ ಅಭಿಯಾನ ಆರಂಭಿಸಿದೆ, ಅದಕ್ಕೆ ವಿಜಯ ಕರ್ನಾಟಕದವರು ಕೈಜೊಡಿಸಿದರು. ಅದನ್ನು ರಾಜ್ಯದ ಕಾಲೆಜು , ಶಾಲೆಗಳಿಗೆ ಹೋಗಿ ಜಾಗೃತಿ ಮೂಡಿಸುವ ಕೆಲಸ ಮಾಡಿತು. ಪತ್ರಿಕೆ ಸಮಾಜಮುಖಿ ಕೆಲಸ ಮಾಡಿದಾಗ ಸರ್ಕಾರ ಸ್ಪಂದಿಸುವುದು ಅನಿವಾರ್ಯ ಆಗಲಿದೆ ಎಂದು ಹೇಳಿದರು.

ವಿಜಯ ಕರ್ನಾಟಕ ಹೊಸದಾಗಿ ವಿಕ ಮನಿ ಹಣಕಾಸಿನ ಮಾರುಕಟ್ಟೆ ಕುರಿತು ಕನ್ನಡದಲ್ಲಿ ಸಾಮಾನ್ಯ ಜನರಿಗೆ ಹಣಕಾಸಿನ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ. ವಿಜಯ ಕರ್ನಾಟಕ ಸಮಾಜ ಮುಖಿಯಾಗಿ ಉತ್ತಮ ಕೆಲಸ ಮಾಡುತ್ತಿದೆ. ಕನ್ನಡಕ್ಕಾಗಿ, ರೈತರಿಗಾಗಿ, ಮಕ್ಕಳಿಗಾಗಿ ಅವರು ಮಾಡುತ್ತಿರುವ ಕೆಲಸ ಮುಂದುವರೆಯಲಿ, ನಿಮ್ಮ ಸಾಧನೆ ನಿರಂತರವಾಗಿರಲಿ. ಸಾಧನೆ ಅಂದರೆ ಬಹಳ ದೊಡ್ಡ ಶಬ್ದ, ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳಿದರು ಸಾಧಕನಿಗೆ ಸಾವು ಅಂತ್ಯವಲ್ಲ ಸಾವಿನ ನಂತರವೂ ಬದುಕುವುದು ಸಾಧನೆ. ಅಂತಹ ಸಾದನೆಯನ್ನು ನೀವು ಮಾಡಿ, ನಿಮ್ಮ ಸಾವಿನ ನಂತರವೂ ನಿಮ್ಮ ಸಾಧನೆ ಉಳಿಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್, ಚಿತ್ರನಟಿ ಸಂಗೀತಾ ಶೃಂಗೇರಿ, ವಿಜಯ ಕರ್ನಾಟಕ ಪತ್ರಿಕೆ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಹಾಜರಿದ್ದರು.

Share. Facebook Twitter LinkedIn WhatsApp Email

Related Posts

ಮದುವೆ ನಿರಾಕರಿಸಿದ್ದಕ್ಕೆ ಯುವತಿ ಸೇರಿ ಕುಟುಂಬದವರ ಮೇಲೆ ಭೀಕರ ಹಲ್ಲೆ: ಬೆಳಗಾವಿಯಲ್ಲಿ ಪಾಗಲ್ ಪ್ರೇಮಿಯ ಅಟ್ಟಹಾಸ!

18/03/2026 3:18 PM1 Min Read

ಶಾಲಾ ಆಡಳಿತ ಮಂಡಳಿ : ಎಡವಟ್ಟು : ಪ್ರವೇಶ ಪತ್ರ ನಿರಾಕರಿಸಿದ ಹಿನ್ನೆಲೆ, ಇಬ್ಬರು SSLC ವಿದ್ಯಾರ್ಥಿಗಳ ಭವಿಷ್ಯ ಅತಂತ್ರ!

18/03/2026 3:17 PM1 Min Read

ರಾಜ್ಯದಲ್ಲೊಂದು ‘ವಿಸರ್ಜನೆ’ ಅಭಿಯಾನ: ಭಗ್ನಗೊಂಡ ದೇವರ ಫೋಟೋಗಳಿಗೆ ಸಿಗಲಿದೆ ಗೌರವಪೂರ್ಣ ವಿದಾಯ!

18/03/2026 2:49 PM2 Mins Read
Recent News

ಮದುವೆ ನಿರಾಕರಿಸಿದ್ದಕ್ಕೆ ಯುವತಿ ಸೇರಿ ಕುಟುಂಬದವರ ಮೇಲೆ ಭೀಕರ ಹಲ್ಲೆ: ಬೆಳಗಾವಿಯಲ್ಲಿ ಪಾಗಲ್ ಪ್ರೇಮಿಯ ಅಟ್ಟಹಾಸ!

18/03/2026 3:18 PM

ಶಾಲಾ ಆಡಳಿತ ಮಂಡಳಿ : ಎಡವಟ್ಟು : ಪ್ರವೇಶ ಪತ್ರ ನಿರಾಕರಿಸಿದ ಹಿನ್ನೆಲೆ, ಇಬ್ಬರು SSLC ವಿದ್ಯಾರ್ಥಿಗಳ ಭವಿಷ್ಯ ಅತಂತ್ರ!

18/03/2026 3:17 PM

ರಾಜ್ಯದಲ್ಲೊಂದು ‘ವಿಸರ್ಜನೆ’ ಅಭಿಯಾನ: ಭಗ್ನಗೊಂಡ ದೇವರ ಫೋಟೋಗಳಿಗೆ ಸಿಗಲಿದೆ ಗೌರವಪೂರ್ಣ ವಿದಾಯ!

18/03/2026 2:49 PM

BREAKING : ಮಾರ್ಗ ಬದಲಿಸಿದ 7 ‘ಟ್ಯಾಂಕರ್’ಗಳು : ಚೀನಾಗೆ ಹೋಗುತ್ತಿದ್ದ ರಷ್ಯಾದ ತೈಲ ಭಾರತಕ್ಕೆ ರವಾನೆ!

18/03/2026 2:42 PM
State News
KARNATAKA

ಮದುವೆ ನಿರಾಕರಿಸಿದ್ದಕ್ಕೆ ಯುವತಿ ಸೇರಿ ಕುಟುಂಬದವರ ಮೇಲೆ ಭೀಕರ ಹಲ್ಲೆ: ಬೆಳಗಾವಿಯಲ್ಲಿ ಪಾಗಲ್ ಪ್ರೇಮಿಯ ಅಟ್ಟಹಾಸ!

By kannadanewsnow0918/03/2026 3:18 PM KARNATAKA 1 Min Read

ಬೆಳಗಾವಿ: ಪ್ರೀತಿ ಹೆಸರಿನಲ್ಲಿ ಹುಚ್ಚು ಹಿಡಿದ ವ್ಯಕ್ತಿಯೊಬ್ಬ ಮದುವೆಯಾಗಲು ನಿರಾಕರಿಸಿದ ಯುವತಿ ಹಾಗೂ ಆಕೆಯ ಹೆತ್ತವರ ಮೇಲೆ ಮಾರಣಾಂತಿಕ ಹಲ್ಲೆ…

ಶಾಲಾ ಆಡಳಿತ ಮಂಡಳಿ : ಎಡವಟ್ಟು : ಪ್ರವೇಶ ಪತ್ರ ನಿರಾಕರಿಸಿದ ಹಿನ್ನೆಲೆ, ಇಬ್ಬರು SSLC ವಿದ್ಯಾರ್ಥಿಗಳ ಭವಿಷ್ಯ ಅತಂತ್ರ!

18/03/2026 3:17 PM

ರಾಜ್ಯದಲ್ಲೊಂದು ‘ವಿಸರ್ಜನೆ’ ಅಭಿಯಾನ: ಭಗ್ನಗೊಂಡ ದೇವರ ಫೋಟೋಗಳಿಗೆ ಸಿಗಲಿದೆ ಗೌರವಪೂರ್ಣ ವಿದಾಯ!

18/03/2026 2:49 PM

ಪ್ರಜ್ವಲ್ ಪೆನ್‌ಡ್ರೈವ್ ಹಂಚಿಕೆ ಪ್ರಕರಣ: 13,712 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ; 39 ಆರೋಪಿಗಳ ಹೆಸರು ಉಲ್ಲೇಖ!

18/03/2026 2:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.