ಮಂಡ್ಯ : ಎಚ್ ಡಿ ದೇವೇಗೌಡ ಸುಧೀರ್ಘ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಸಹವಾಸ ಮಾಡಿದ್ದೆ ತಪ್ಪಾಗಿದೆ. ಕಾಂಗ್ರೆಸ್ ದೇವೇಗೌಡರಿಂದ ಬಿ ಫಾರಂ ಕಿತ್ತುಕೊಂಡಾಗಲೇ ಚೂರಿ ಹಾಕಿದ್ರು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದ ಅತ್ಯಂತ ಶ್ರೀಮಂತ ಅಭ್ಯರ್ಥಿ ‘ಸ್ಟಾರ್ ಚಂದ್ರು’ ಆಸ್ತಿ 600ಕೋಟಿ! : 3 ಟ್ರಾಕ್ಟರ್ ಬಿಟ್ಟರೆ ಸ್ವಂತ ಕಾರಿಲ್ಲ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಸರಿ ಶಾಲು ಹಾಕಿಕೊಂಡರೆ ತಪ್ಪಾ? ಸಿದ್ದಾಂತ ಇರುವುದು ಕೇಸರಿ ಶಾಲುಗಳನ್ನು ಹಾಕಿಕೊಳ್ಳುವವುದರಲ್ಲಿ ಅಲ್ಲ ನಮ್ಮ ನಡವಳಿಕೆಯಲ್ಲಿ ಹಾಗೂ ನಮ್ಮ ಮನಸ್ಸಿನಲ್ಲಿ ಸಿದ್ದಾಂತವಿದೆ.ಇವರು ಮನಸ್ಸಿನಲ್ಲಿ ಏನು ಇಟ್ಟುಕೊಂಡಿದ್ದಾರೆ ಇವರ ನಡವಳಿಕೆ ಹೇಗೆ ಇದೆ? ಎಂದು ಪ್ರಶ್ನಿಸಿದರು.
BREAKING : ಎಎಪಿ ಮಾಜಿ ಸಂಸದ ‘ಧರಮ್ವೀರ್ ಗಾಂಧಿ’ ಕಾಂಗ್ರೆಸ್ ಸೇರ್ಪಡೆ
ನಾಳೆ ಬೆಳಗ್ಗೆ ದೇವೇಗೌಡರು ಪ್ರಧಾನ ಮಂತ್ರಿ ಅಥವಾ ರಾಷ್ಟ್ರಪತಿಯು ಆಗುವುದಿಲ್ಲ ನೀವು ಮಾಡಿರುವ ತಪ್ಪುಗಳನ್ನು ಸರಿಪಡಿಸಲು ಬಿಜೆಪಿ ಜೊತೆ ಹೋಗಿರುವುದು ಎಂದು ಎಚ್ ಡಿ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ದೇವೇಗೌಡರು ಈ ಹಿಂದೆ ಆಡಿರುವ ಮಾತುಗಳನ್ನು ಪದೇಪದೇ ಹೇಳುತ್ತೀರಾ. ನೀವು ಕಾಂಗ್ರೆಸ್ ನ ಹಾಕಿ ಸೋನಿಯಾ ಗಾಂಧಿ ಬಗ್ಗೆ ಏನು ಮಾತಾಡಿದ್ದೀರಾ? ಈಗ ನಡುಬಗ್ಗಿಸಿ ನಿಲ್ತೀರಾ ಅದು ನೋಡಿ ಸ್ವಲ್ಪ ಅಂತ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.ಈ ಹಿಂದೆ ಸೋನಿಯಾ ವಿರುದ್ಧ ಬೈದಿದ್ದನ್ನು ಹೆಚ್‍ಡಿ ಕುಮಾರಸ್ವಾಮಿ ಪ್ರಸ್ತಾಪಿಸಿ ತಿರುಗೇಟು ನೀಡಿದರು.
ನಮ್ಮ ಮನಸ್ಸಿನಲ್ಲಿ ಮತ್ತು ನಡವಳಿಕೆಯಲ್ಲಿ ಸಿದ್ದಾಂತ ಇರುವುದು, ಕೇಸರಿ ಶಾಲಿನಲ್ಲಿಲ್ಲ : ಡಿಕೆಗೆ HDK ತಿರುಗೇಟು
ಡಿಸಿಎಂ ಡಿಕೆ ಶಿವಕುಮಾರ್ ಟೂರಿಂಗ್ ಟಾಕೀಸ್ ಇಟ್ಟುಕೊಂಡಿದ್ದು, ಈಗ ಟೂರಿಂಗ್ ಟಾಕೀಸ್ ಮಹತ್ವವನ್ನು ಡಿಕೆ ಶಿವಕುಮಾರ್ ಮರೆತಿದ್ದಾರೆ. ಈಗ ಡಿಕೆ ಶಿವಕುಮಾರ್ ಅದೆಲ್ಲವನ್ನು ಮರೆತು ಬಲಿಷ್ಠವಾಗಿ ಬೆಳೆದಿದ್ದಾರೆ. ಕಾಂಗ್ರೆಸ್ನವರು ಜಾತ್ಯತೀತ ಅರ್ಥ ಏನು ಅಂತ ಮೊದಲು ಹೇಳಲಿ ಕಾಂತರಾಜು ವರದಿ ಯಾವ ಆಧಾರದ ಮೇಲಿದೆ? ಜಾತ್ಯಾತೀತವಾಗಿ ಇದೆಯಾ ಜಾತಿಯನ್ನು ಎತ್ತಿ ಕಟ್ಟಲು ವರದಿ ಮಾಡುತ್ತಿದ್ದೀರಾ? ಅಂತ ಸರ್ಕಾರಕ್ಕೆ ಎಚ್ ಡಿ ಕುಮಾರಸ್ವಾಮಿ ಟಾಂಗ್ ನೀಡಿದರು.