ಬೆಂಗಳೂರು: ದೀಪಾವಳಿ ಹಬ್ಬ ಬಂತೆಂದರೇ ಸಾಕು ಪಟಾಕಿ ಹೊಡೆಯೋದು ಸಹಜ. ಇದರ ಜೊತೆ ಜೊತೆಗೆ ಮಕ್ಕಳು ಕಣ್ಣು, ಕೈಗಳಿಗೆ ಗಾಯಗಳನ್ನು ಮಾಡಿಕೊಳ್ಳುತ್ತಾರೆ. ಕೆಲವರಂತೂ ಕಣ್ಣನ್ನೇ ಕಳೆದುಕೊಂಡು ಬಿಡುತ್ತಾರೆ. ಸೋ ನೀವು ದಿಪಾವಳಿ ಸಂದರ್ಭದಲ್ಲಿ ಪಟಾಕಿ ಅವಘಡವನ್ನು ತಪ್ಪಿಸಲು ಈ ಕೆಳಗಿನ ಕೆಲ ಸಲಹೆ, ಎಚ್ಚರಿಕೆಗಳನ್ನು ತಪ್ಪದೇ ಪಾಲಿಸಿ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಅವಘಡಗಳು ಸಂಭವಿಸದಲ್ಲಿ ಕಣ್ಣಿಗೆ ಹಾನಿಯಾಗುವುದನ್ನು ತಪ್ಪಿಸಲು ಈಗಾಗಲೇ ಬೆಂಗಳೂರಿನ ಮಿಂಟೋ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳು ಸಜ್ಜುಗೊಂಡಿವೆ. ಪಟಾಕಿ ಅವಘಡದಿಂದ ಉಂಟಾಗುವ ಸುಟ್ಟ ಗಾಯಗಳಿಗೆ ತುರ್ತು ಚಿಕಿತ್ಸೆ ನೀಡಲು ವಿಕ್ಟೋರಿಯಾ ಆಸ್ಪತ್ರೆಯಲ್ಲೂ ವ್ಯವಸ್ಥೆ ಮಾಡಲಾಗಿದೆ.
ಪಟಾಕಿ ಸಿಡಿತದಿಂದ ಗಾಯಗೊಂಡಾಗ ಈ ತುರ್ತು ಕಾಳಜಿ ಅಗತ್ಯ
ಪಟಾಕಿ ಅವಘಡ ಸಂಭವಿಸಿದಲ್ಲಿ ಗಾಬರಿಯಾಗದೇ ಶಾಂತಿ, ಸಮಾಧಾನದಿಂದ ವರ್ತಿಸುವುದು ಒಳಿತು. ಜೊತೆಗೆ ಮಕ್ಕಳನ್ನು ಗದರದೇ ಸಮಾಧಾನದಿಂದ ಸಂತೈಸಿ. ಗಾಯವಾದ ಕಣ್ಣನ್ನು ಮುಚ್ಚಬೇಡಿ. ಕಣ್ಣೊಳಗೆ ಸೇರಿದ ವಸ್ತುಗಳನ್ನು ತೆಗೆಯದೇ, ಹಗುರಾದ ಪೇಪರ್ ಕಪ್ ಅಥವಾ ಪರಿಶುದ್ಧ ಬಟ್ಟೆಯಿಂದ ನಿಧಾನವಾಗಿ ಮುಚ್ಚಬೇಕು ಅಥವಾ ಹೊದಿಸಿ.
ಯಾವುದೇ ಕಾರಣಕ್ಕೂ ಹತ್ತಿ ಉಂಡೆ ಅಥವಾ ಗಾಯಕ್ಕೆ ಕಟ್ಟುವ ತೆಳುವಾದ ಗಾಜ್, ಬಟ್ಟೆಯಿಂದ ಕಣ್ಣನ್ನು ಒರೆಸಬಾರದು ಎಂಬುದಾಗಿ ವೈದ್ಯರ ಸಲಹೆಯಾಗಿದೆ.
ಪಟಾಕಿ ಸಿಡಿಸುವಾಗ ಈ ಎಚ್ಚರಿಕೆ ಕ್ರಮ ತಪ್ಪದೇ ಪಾಲಿಸಿ
- ರಾಕೇಟ್ ಸೇರಿ ಪಟಾಕಿ ಸಿಡಿಸಲು ಗಾಜಿನ ಬಾಟಲಿಗಳನ್ನು ಬಳಸಬೇಡಿ
- ಮಕ್ಕಳು ಒಂಟಿಯಾಗಿ ಪಟಾಕಿ ಸಿಡಿಸುವುದಕ್ಕೆ ಅವಕಾಶ ಕೊಡಬೇಡಿ.
- ಅರೆಬರೆ ಸುಟ್ಟ ಪಟಾಕಿ ತುಣುಕನ್ನು ಗಾಳಿಯಲ್ಲಿ ಎಸೆಯಬೇಡಿ
- ಪಟಾಕಿಗಳ ಮೇಲಿರುವ ಎಚ್ಚರಿಕೆ, ಸೂಚನೆಗಳನ್ನು ತಪ್ಪದೇ ಪಾಲಿಸಿ
- ಕನಿಷ್ಠ ಎರಡರಿಂದ ಮೂರು ಅಡಿ ದೂರದಿಂದ ಪಟಾಕಿಯನ್ನು ಹಚ್ಚಿ.
- ಪಟಾಕಿ ಹಚ್ಚುವಾಗ ಉದ್ದನೆಯ ಕೋಲು ಬಳಸಿ ಹಚ್ಚಿ.
- ಪಟಾಕಿಗಳನ್ನು ಮೈದಾನ, ಖಾಲಿ ಸ್ಥಳಗಳಲ್ಲಿ ಮಾತ್ರವೇ ಹಚ್ಚಿ.
- ಯಾವುದೇ ಕಾರಣಕ್ಕೂ ಕೈಯಲ್ಲೇ ಪಟಾಕಿ ಹಚ್ಚುವ ಹುಚ್ಚ ಸಾಹಸ ಮಾಡಬೇಡಿ.
- ಐಎಸ್ಐ ಗುರುತಿನ ಹಸಿರು ಪಟಾಕಿಗಳನ್ನೇ ಖರೀದಿಸಿ
- ಥಟ್ ಎಂದು ಬೆಂಕಿ ಹೊತ್ತಿಕೊಳ್ಳುವ ವಸ್ತುಗಳ ಬಳಿ ಪಟಾಕಿ ಸಂಗ್ರಹಿಸಿ ಇಡಬೇಡಿ.
- ಪಟಾಕಿ ಸಿಡಿಸುವಾಗ ಕಿಡಿ ಬಿದ್ದರೇ ಕಣ್ಣನ್ನು ಉಜ್ಜಿಕೊಳ್ಳಬೇಡಿ. ತಕ್ಷಣವೇ ಹತ್ತಿರದ ನೇತ್ರ ವೈದ್ಯರನ್ನು ಸಂಪರ್ಕಿಸಿ.
ತುರ್ತು ಸಂದರ್ಭದಲ್ಲಿ ಈ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ
-ಮಿಂಟೋ ಕಣ್ಣಿನ ಆಸ್ಪತ್ರೆಯ ದೂರವಾಣಿ ಸಂಖ್ಯೆ 080-26707176, 26706221
-ಶೇಖರ್ ಕಣ್ಣಿನ ಆಸ್ಪತ್ರೆ ಜೆಪಿ ನಗರ- 9980562020
-ನಾರಾಯಣ ನೇತ್ರಾಲಯ ರಾಜಾಜಿನಗರ- 080-66121641/ 1643, 9902546046
– ನೇತ್ರಧಾಮ, ಜಯನಗರ- 080-26088000, 9448071816.
– ಡಾ.ಅಗರವಾಲ್ ಕಣ್ಣಿನ ಆಸ್ಪತ್ರೆ, ಬನ್ನೇರುಘಟ್ಟ ಶಾಖೆ – 080 48193419, 918048193501
BREAKING: ನಟಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ದಂಪತಿಗೆ ಗಂಡು ಮಗು ಜನನ | Actor Parineeti Chopra
ಮಂಗಳೂರಲ್ಲಿ ಆಟೋ ಚಾಲಕನನ್ನು ನಿಂದಿಸಿ, ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಸ್ಪೆಂಡ್