ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಹೆಚ್ಚು ಅನಾರೋಗ್ಯ ಹಾಗೂ ಕಾಯಿಲೆಗಳಿಗೆ ಜನರು ಹೆಚ್ಚು ತುತ್ತಾಗುತ್ತಿದ್ದಾರೆ. ರೋಗಗಳಿಂದ ತಮ್ಮನ್ನು ಕಾಪಾಡಲು ನಡಿಗೆ, ಗ್ರೀನ್ ಟೀ ಹೆಚ್ಚಿನ ಜನರು ಅವಲಂಬಿಸಿರುವ ಆಹಾರ ಪರಿಹಾರಗಳು ಆಗಿವೆ. ಬದಲಾಗುತ್ತಿರುವ ಋತುವಿನಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಖರ್ಜೂರ ಸೇವನೆ ಸಹಕಾರಿ ಆಗಿದೆ.
ಸಾರ್ವಜನಿಕರ ಗಮನಕ್ಕೆ: ‘ದೀಪಾವಳಿ ಹಬ್ಬ’ದ ಅವಘಡಗಳಿಗೆ ‘ತುರ್ತು ಚಿಕಿತ್ಸೆ’ಗಾಗಿ ಈ ಸಂಖ್ಯೆಗಳಿಗೆ ಕರೆ ಮಾಡಿ
ನೆನೆಸಿದ ಖರ್ಜೂರದ ಸೇವನೆ
ಒಣಗಿದ ಖರ್ಜೂರಕ್ಕಿಂತ ನೆನೆಸಿದ ಖರ್ಜೂರ ಸೇವಿಸುವುದು ಹೆಚ್ಚು ಪ್ರಯೋಜನಕಾರಿ. ನಿಮ್ಮ ಆರೋಗ್ಯಕ್ಕೆ ಇದು ಪ್ರಯೋಜನಕಾರಿ ಎಂದು ಹೇಳಲಾಗುತ್ತಿದೆ. ಹಾಗಾದರೆ ನಿಮ್ಮ ದಿನಚರಿಗೆ ಖರ್ಜೂರವನ್ನು ಸೇರಿಸಿದರೆ ಇದು ಸಾಕಷ್ಟು ಆರೋಗ್ಯ ವೃದ್ಧಿಸಲು ಸಹಕಾರಿ ಆಗಿದೆ.
ಖರ್ಜೂರ ಸಕ್ಕರೆಗೆ ಆರೋಗ್ಯಕರ ಪರ್ಯಾಯ ಪದಾರ್ಥ
ಖರ್ಜೂರದ ಬಗ್ಗೆ ದೊಡ್ಡ ವಿಷಯಗಳಿವೆ. ಹೆಚ್ಚಿನ ಜನರು ಖರ್ಜೂರ ಬಿಸಿ ಸ್ವಭಾವ ಹೊಂದಿದೆ ಎಂದು ನಂಬುತ್ತಾರೆ. ಆದರೆ ಅದು ಹಾಗಲ್ಲ. ಖರ್ಜೂರವು ತುಂಬಾ ಶೀತ ಸ್ವಭಾವ ಹೊಂದಿದೆ. ಮತ್ತು ಇದನ್ನು ಸೇವಿಸುವುದು ದೇಹವು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಸಹಕಾರಿ ಆಗಿದೆ. ಆಹಾರದಿಂದ ಸಕ್ಕರೆ ತೆಗೆದು ಹಾಕುವುದು ಖರ್ಜೂರದ ಮೇಲಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.
ಒಣಗಿದ ಖರ್ಜೂರಕ್ಕಿಂತ ನೆನೆಸಿದ ಖರ್ಜೂರ ಹೆಚ್ಚು ಆರೋಗ್ಯ ವರ್ಧಕ
ನೆನೆಸಿ ಸೇವನೆ ಮಾಡುವ ಖರ್ಜೂರವು ಟ್ಯಾನಿನ್/ಫೈಟಿಕ್ ಆಮ್ಲ ತೆಗೆದು ಹಾಕುತ್ತದೆ. ಅದರ ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳಲು ನಮಗೆ ಸುಲಭ ಆಗುತ್ತದೆ. ನೆನೆಸಿದಾಗ ಖರ್ಜೂರ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ.ಅವುಗಳನ್ನು ತಿನ್ನುವ ಮೊದಲು ರಾತ್ರಿ ಎಂಟರಿಂದ ಹತ್ತು ಗಂಟೆ ನೆನೆಸಿಡಿ. ಖರ್ಜೂರ ತಿನ್ನಲು ರುಚಿಕರ. ಮಾತ್ರವಲ್ಲದೆ ಅನೇಕ ಪ್ರಯೋಜನ ನೀಡುತ್ತದೆ.
ನೆನೆಸಿದ ಖರ್ಜೂರ ಸೇವನೆಯ ಪ್ರಯೋಜನಗಳು
ಮಲಬದ್ಧತೆ ತಡೆಯುತ್ತದೆ, ಹೃದಯದ ಆರೋಗ್ಯ ಸುಧಾರಿಸುತ್ತದೆ, ನೆನೆಸಿದ ಖರ್ಜೂರ ಕೂಡ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಸಹಕಾರಿ, ಮೂಳೆಯ ಆರೋಗ್ಯ ಸುಧಾರಿಸುತ್ತದೆ, ರಕ್ತದೊತ್ತಡ ನಿಯಂತ್ರಿಸುತ್ತದೆ, ಪುರುಷರು ಮತ್ತು ಮಹಿಳೆಯರ ಲೈಂಗಿಕ ಶಕ್ತಿ ಸುಧಾರಿಸುತ್ತದೆ, ಮಾನಸಿಕ ಆರೋಗ್ಯವನ್ನು ಉತ್ತೇಜಿಸುತ್ತದೆ.
ಆಯಾಸ ತೊಡೆದು ಹಾಕುತ್ತದೆ, ಖರ್ಜೂರ ಕೂಡ ರಕ್ತಹೀನತೆಯಿಂದ ರಕ್ಷಿಸಲು ಸಹಕಾರಿ, ತೂಕ ಹೆಚ್ಚಿಸಿಕೊಳ್ಳಲು ಸಹಕಾರಿ, ಪೈಲ್ಸ್ ಸಮಸ್ಯೆ ತಡೆಯುತ್ತದೆ. ಉರಿಯೂತ ಕಡಿಮೆ ಮಾಡುತ್ತದೆ, ಗರ್ಭಾವಸ್ಥೆಯಲ್ಲಿಯೂ ಖರ್ಜೂರ ತಿನ್ನುವುದು, ಚರ್ಮ ಮತ್ತು ಕೂದಲಿಗೆ ಉತ್ತಮ ಆಯ್ಕೆ ಆಗಿದೆ.
ಖರ್ಜೂರವನ್ನು ಯಾವ ಸಮಯದಲ್ಲಿ ತಿನ್ನಬೇಕು?
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು, ಸಂಜೆ ತಿಂಡಿಗಳ ರೂಪದಲ್ಲಿ ಸೇವಿಸುವುದು, ನಿಮಗೆ ಸಿಹಿ ತಿನ್ನಬೇಕೆನಿಸಿದಾಗ ಸೇವಿಸಿ, ತೂಕ ಹೆಚ್ಚಳಕ್ಕೆ ರಾತ್ರಿ ಮಲಗುವಾಗ ತುಪ್ಪದ ಜೊತೆ ಖರ್ಜೂರ ತಿನ್ನಿರಿ.
ಒಂದೇ ಬಾರಿಗೆ ಎಷ್ಟು ಖರ್ಜೂರ ತಿನ್ನಬೇಕು?
ಖರ್ಜೂರ ತಿನ್ನಲು ಪ್ರಾರಂಭಿಸಲು ಬಯಸಿದರೆ ಕೇವಲ ಎರಡು ಖರ್ಜೂರ ತಿನ್ನಲು ಪ್ರಾರಂಭಿಸಿ. ಆದರೆ ನೀವು ತೂಕ ಪಡೆಯಲು ಬಯಸಿದರೆ ನೀವು ಪ್ರತಿದಿನ ನಾಲ್ಕು ಖರ್ಜೂರ ತಿನ್ನಬಹುದು. ಆದರೆ ಅವುಗಳು ಜೀರ್ಣವಾಗುತ್ತಿವೆಯೇ ಎಂಬುದನ್ನು ನೆನಪಿಡಿ.
ಮಕ್ಕಳ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿ ಸುಧಾರಿಸಲು ಖರ್ಜೂರ ಅತ್ಯುತ್ತಮ. ಕಡಿಮೆ ತೂಕ ಮತ್ತು ಕಡಿಮೆ ಹಿಮೋಗ್ಲೋಬಿನ್ ಇರುವವರು ದಿನಕ್ಕೆ ಒಂದು ಖರ್ಜೂರ ಸೇವಿಸಿ. ಅತ್ಯಂತ ತಣ್ಣಗಿರುತ್ತವೆ . ಎಲ್ಲಾ ಪಿತ್ತ ಅಸ್ವಸ್ಥತೆಗಳಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ.
BREAKING NEWS ; ‘ಬರೋಡಾ ಮಹಿಳಾ ಕ್ರಿಕೆಟ್ ತಂಡ’ದ ಬಸ್ ಅಪಘಾತ ; ತರಬೇತುದಾರ ಸೇರಿ ನಾಲ್ವರು ಆಟಗಾರ್ತಿಯರಿಗೆ ಗಾಯ