ನವದೆಹಲಿ : ವಾಟ್ಸಪ್ ಪೇ ಇಂಡಿಯಾದ ಮುಖ್ಯಸ್ಥ ಮನೇಶ್ ಮಹತ್ಮೆ ರಾಜೀನಾಮೆ ನೀಡಿದ್ದು, ಮೆಟಾ ಒಡೆತನದ ವಾಟ್ಸಾಪ್ನಲ್ಲಿ 18 ತಿಂಗಳ ಅವಧಿಯ ನಂತ್ರ ಅವರು ತಮ್ಮ ಹಿಂದಿನ ಉದ್ಯೋಗದಾತ ಅಮೆಜಾನ್’ಗೆ ಮರಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಇನ್ನು ಮಹಾತ್ಮೆ ಏಪ್ರಿಲ್ 2021ರಲ್ಲಿ ವಾಟ್ಸಾಪ್ ಪೇಗೆ ಸೇರಿದ್ದರು ಮತ್ತು 2022ರ ಸೆಪ್ಟೆಂಬರ್’ನಲ್ಲಿ ಹೊರಟು ಹೋದರು ಎಂದು ಅವರ ಲಿಂಕ್ಡ್ಇನ್ ಪ್ರೊಫೈಲ್ ತಿಳಿಸಿದೆ.
ವಾಟ್ಸ್ಆ್ಯಪ್ಗೆ ಸೇರುವ ಮೊದಲು, ಮಹಾತ್ಮೆ ಸುಮಾರು ಏಳು ವರ್ಷಗಳ ಕಾಲ ಅಮೆಜಾನ್ ಪೇ ಇಂಡಿಯಾದ ನಿರ್ದೇಶಕ ಮತ್ತು ಮಂಡಳಿಯ ಸದಸ್ಯರಾಗಿದ್ದರು, ಅಲ್ಲಿ ಅವರು ಅಮೆಜಾನ್ ಒಳಗೆ ಮತ್ತು ಹೊರಗೆ ಕಂಪನಿಯ ಪಾವತಿ ಅನುಭವವನ್ನ ಅಭಿವೃದ್ಧಿಪಡಿಸುವಲ್ಲಿ ಹಿರಿಯ ಉತ್ಪನ್ನ, ಎಂಜಿನಿಯರಿಂಗ್, ವ್ಯವಹಾರ ಅಭಿವೃದ್ಧಿ ಮತ್ತು ಮಾರಾಟ ನಾಯಕರ ತಂಡವನ್ನು ಮುನ್ನಡೆಸಿದರು ಎಂದು ವರದಿ ತಿಳಿಸಿದೆ.