ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕೋಟಿಗಟ್ಟಲೇ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ನವೆಂಬರ್ನಲ್ಲಿ ಭಾರತದಲ್ಲಿ 37.16 ಲಕ್ಷ ಖಾತೆಗಳನ್ನು ನಿಷೇಧಿಸಿದೆ ಎಂದು ಬುಧವಾರ ಹೇಳಿದೆ.
ಅಕ್ಟೋಬರ್ನಲ್ಲಿ, ವಾಟ್ಸಾಪ್ ದೇಶದಲ್ಲಿ 23.24 ಲಕ್ಷ ಖಾತೆಗಳನ್ನು ನಿಷೇಧಿಸಿತ್ತು. ಇದರಲ್ಲಿ 8.11 ಲಕ್ಷ ಖಾತೆಗಳನ್ನು ಪೂರ್ವಭಾವಿಯಾಗಿ ನಿರ್ಬಂಧಿಸಲಾಗಿತ್ತು. ಇದು ಹಿಂದಿನ ತಿಂಗಳು (ಅಕ್ಟೋಬರ್) ತಿಂಗಳಲ್ಲಿ ನಿರ್ಬಂಧಿಸಿದ ಖಾತೆಗಳಿಗಿಂತ ಶೇ. 60 ರಷ್ಟು ಹೆಚ್ಚು ಎನ್ನಲಾಗುತ್ತಿದೆ.
ನವೆಂಬರ್ 1 ರಿಂದ 30ರ ನಡುವೆ 3,716,000 ಖಾತೆಗಳನ್ನು ನಿಷೇಧಿಸಲಾಗಿದೆ. ಈ ಖಾತೆಗಳಲ್ಲಿ 9,90,000 ಬಳಕೆದಾರರಿಂದ ಯಾವುದೇ ವರದಿಗಳ ಮೊದಲು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ. ಮಾಹಿತಿ ತಂತ್ರಜ್ಞಾನ ನಿಯಮಗಳು 2021 ರ ಅಡಿಯಲ್ಲಿ ಪ್ರಕಟವಾದ ನವೆಂಬರ್ ತಿಂಗಳ ಮಾಸಿಕ ವರದಿಯಾಗಿದೆ.
ಕಳೆದ ವರ್ಷ ಜಾರಿಗೆ ಬಂದ ಕಠಿಣ ಐಟಿ ನಿಯಮಗಳು, ದೊಡ್ಡ ಡಿಜಿಟಲ್ ಪ್ಲಾಟ್ಫಾರ್ಮ್ಗಳು ಪ್ರತಿ ತಿಂಗಳು ಅನುಸರಣೆ ವರದಿಗಳನ್ನು ಪ್ರಕಟಿಸಲು ಕಡ್ಡಾಯಗೊಳಿಸಿದ್ದವು. ಈ ಹಿನ್ನೆಲೆ ವರದಿ ಬಿಡುಗಡೆಯಾಗಿದ್ದು, ಇದರಲ್ಲಿ ಸ್ವೀಕರಿಸಿದ ದೂರುಗಳ ವಿವರಗಳನ್ನು ಮತ್ತು ತೆಗೆದುಕೊಂಡ ಕ್ರಮಗಳನ್ನು ಉಲ್ಲೇಖಿಸಿದ್ದಾರೆ.
ದೊಡ್ಡ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ತಮ್ಮ ಪ್ಲಾಟ್ಫಾರ್ಮ್ಗಳಲ್ಲಿ ಹರಡುತ್ತಿರುವ ದ್ವೇಷದ ಭಾಷಣ, ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳ ಮೇಲೆ ಈ ಹಿಂದೆ ಕ್ರಮ ಕೈಗೊಂಡಿತ್ತು.
ಅಕ್ಟೋಬರ್ಗೆ ಹೋಲಿಸಿದರೆ ಖಾತೆಗಳನ್ನು ನಿಷೇಧಿಸಲು ನವೆಂಬರ್ನಲ್ಲಿ ಬಳಕೆದಾರರಿಂದ ಹೆಚ್ಚಿನ ಸಂಖ್ಯೆಯ ಮನವಿಗಳನ್ನು ವಾಟ್ಸಾಪ್ ಸ್ವೀಕರಿಸಿದೆ.
ನವೆಂಬರ್ನಲ್ಲಿ ಬಳಕೆದಾರರಿಂದ 946 ದೂರುಗಳನ್ನು ಸ್ವೀಕರಿಸಿದ್ದು, ಇದರಲ್ಲಿ 830 ಖಾತೆಗಳನ್ನು ನಿಷೇಧಿಸುವಂತೆ ಮನವಿ ಮಾಡಲಾಗಿದೆ. 73 ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಕುಂದುಕೊರತೆ ಚಾನೆಲ್ ಮೂಲಕ ಬಳಕೆದಾರರ ದೂರುಗಳಿಗೆ ಪ್ರತಿಕ್ರಿಯಿಸುವ ಮತ್ತು ಕ್ರಮ ಕೈಗೊಳ್ಳುವುದರ ಜೊತೆಗೆ, ಪ್ಲಾಟ್ಫಾರ್ಮ್ನಲ್ಲಿ ಹಾನಿಕಾರಕ ನಡವಳಿಕೆಯನ್ನು ತಡೆಯಲು ವಾಟ್ಸಾಪ್ ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ನಿಯೋಜಿಸುತ್ತದೆ ಎಂದು ವರದಿ ಹೇಳಿದೆ.
ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಿಗ್ಗಾಮುಗ್ಗಾ ವಾಗ್ಧಾಳಿ
ಸಿದ್ದಾಪುರದಲ್ಲಿ‘ಕ್ಷೀರಭಾಗ್ಯ’ದ ಹಾಲು ಕುಡಿದ 11 ವಿದ್ಯಾರ್ಥಿಗಳು ಅಸ್ವಸ್ಥ : ಆಸ್ಪತ್ರೆಗೆ ದಾಖಲು