ನವದೆಹಲಿ: ಹೊಸ ಐಟಿ ನಿಯಮಗಳು, 2021 ರ ಅನುಸರಣೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ 26 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಮೆಟಾ ಮಾಲೀಕತ್ವದ ವಾಟ್ಸಾಪ್ ನಿಷೇಧಿಸಿದೆ. ದೇಶದಲ್ಲಿ ಸುಮಾರು 500 ಮಿಲಿಯನ್ ಬಳಕೆದಾರರನ್ನು (ಥರ್ಡ್-ಪಾರ್ಟಿ ಡೇಟಾದ ಪ್ರಕಾರ) ಹೊಂದಿರುವ ಮೆಸೇಜಿಂಗ್ ಪ್ಲಾಟ್ಫಾರ್ಮ್ ಸೆಪ್ಟೆಂಬರ್ನಲ್ಲಿ ಭಾರತದಲ್ಲಿ 666 ದೂರು ವರದಿಗಳನ್ನು ಎನ್ನಲಾಗಿದೆ..
ಇದೇ ವೇಳೇ “ಐಟಿ ನಿಯಮಗಳು 2021 ರ ಪ್ರಕಾರ, ನಾವು 2022 ರ ಸೆಪ್ಟೆಂಬರ್ ತಿಂಗಳ ನಮ್ಮ ವರದಿಯನ್ನು ಪ್ರಕಟಿಸಿದ್ದೇವೆ. ಈ ಬಳಕೆದಾರ-ಸುರಕ್ಷತಾ ವರದಿಯು ಸ್ವೀಕರಿಸಿದ ಬಳಕೆದಾರರ ದೂರುಗಳು ಮತ್ತು ವಾಟ್ಸಾಪ್ ತೆಗೆದುಕೊಂಡ ಸಂಬಂಧಿತ ಕ್ರಮಗಳ ವಿವರಗಳು ಮತ್ತು ನಮ್ಮ ಪ್ಲಾಟ್ಫಾರ್ಮ್ನಲ್ಲಿ ದುರುಪಯೋಗವನ್ನು ಎದುರಿಸಲು ವಾಟ್ಸಾಪ್ನ ಸ್ವಂತ ತಡೆಗಟ್ಟುವ ಕ್ರಮಗಳನ್ನು ಒಳಗೊಂಡಿದೆ” ಎಂದು ಕಂಪನಿಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ಲಾಟ್ಫಾರ್ಮ್ ಆಗಸ್ಟ್ನಲ್ಲಿ ಭಾರತದಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ ಅಂತ ತಿಳಿಸಿದೆ. ನವೀಕರಿಸಿದ ಐಟಿ ನಿಯಮಗಳು 2021 ರ ಅಡಿಯಲ್ಲಿ, ಪ್ರಮುಖ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು, ಐದು ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಮಾಸಿಕ ಅನುಸರಣಾ ವರದಿಗಳನ್ನು ಪ್ರಕಟಿಸಬೇಕಾಗುತ್ತದೆ.