ಬಾಗಲಕೋಟೆ : ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಮಾಂಸ ತಿನ್ನುವ ವಿಚಾರಕ್ಕೆ ಹೇಳಿಕೆ ನೀಡಿದ್ದು ಇದಕ್ಕೆ ಸಿಎಂ ಸಿದ್ದರಾಮಯ್ಯ ಯುಗಾದಿ ಹಬ್ಬ, ದೀಪಾವಳಿ ಹಬ್ಬದಂದು ನಾನು ಮಾಂಸ ತಿನ್ನುತ್ತೇನೆ. ನಾನು ಮಾಂಸ ತಿನ್ನುವುದು ನಿಜ ಅದರಲ್ಲಿ ತಪ್ಪೇನಿದೆ ಎಂದು ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಪ್ರತಾಪ್ ಸಿಂಹ ಹೇಳಿದ್ದೇನು?
ಸಿದ್ದರಾಮಯ್ಯ ಯುಗಾದಿ ಹಬ್ಬದಂದೂ ಮಾಂಸ ತಿಂತೀನಿ ಅಂತಾರೆ. ಸಿದ್ರಾಮಣ್ಣ ನೀನು ಮಾಂಸನಾದ್ರೂ ತಿನ್ನು, ಸುನ್ನತ್ ಆದರೂ ಮಾಡಿಕೋ, ಏನ್ಬೇಕಾದರೂ ಮಾಡು ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ನೀನು ಯುಗಾದಿ, ದೀಪಾವಳಿ ಹಬ್ಬಕ್ಕೆ ಮಾಂಸ ತಿಂತೀನಿ ಅಂದರೆ 15% ಮುಸ್ಲಿಮರನ್ನು ಓಲೈಸಲು ಹಿಂದೂಗಳ ಭಾವನೆಗೆ ಧಕ್ಕೆ ತಂದಂತೆ. 85% ಹಿಂದೂಗಳಿದ್ದರೂ ಹರಿದು ಹಂಚಿ ಹೋಗಿದ್ದಾರೆ. ಗೌಡ, ಲಿಂಗಾಯತ, ಕುರುಬ, ವಾಲ್ಮೀಕಿ, ದಲಿತರು ವಿಭಜನೆಯಾಗಿದೆ. ಹಿಂದೂಗಳು ಉಳಿಯಬೇಕು ಅಂದ್ರೆ ಒಗ್ಗಟ್ಟಾಗಬೇಕು ಎಂದು ಹೇಳಿದ್ದಾರೆ.







