ಕೆಎನ್ ಎನ್ ನ್ಯೂಸ್ ಡೆಸ್ಕ್ : ವಾಸ್ತುಶಾಸ್ತ್ರ ಪ್ರತಿಯೊಬ್ಬರು ನಂಬುತ್ತಾರೆ. ವಾಸ್ತ ಇಲ್ಲದೆ ಯಾವ ಮನೆಯೂ ಇಲ್ಲ. ಅಂದಿನ ಕಾಲದಿಂದಲೂ ಇದಕ್ಕೆ ಅವರದ್ದೇ ಆದ ಪ್ರಾಮುಖ್ಯತೆ ಇದೆ. ಪ್ರತಿಯೊಂದು ವಾಸ್ತು ಪ್ರಕಾರದಲ್ಲಿ ಕಟ್ಟಲಾಗಿರುತ್ತದೆ. ಆದ್ದರಿಂದ ಅಂತಹ ಮನೆಗಳಲ್ಲಿ ಸದಾ ಕಾಲ ಸುಖ, ಸಂತೋಷ, ಐಶ್ವರ್ಯ, ನೆಮ್ಮದಿ ನೆಲೆಸಿರುತ್ತದೆ.
ಮನೆಯ ವಿವಿಧ ಭಾಗಗಳ ವಾಸ್ತುಗಳಂತೆ ಮುಖ್ಯದ್ವಾರದ ವಾಸ್ತು ಕೂಡಾ ಬಹಳ ಮುಖ್ಯವಾಗಿದೆ. ಕೆಲವರು ವಾಸ್ತುವಿಗೆ ಬಹಳ ಪ್ರಾಮುಖ್ಯತೆ ನೀಡಿದರೆ ಇನ್ನೂ ಕೆಲವರು ಅದನ್ನು ನಂಬುವುದಿಲ್ಲ. ಆದರೆ ಮನೆ ಕಟ್ಟುವಾಗ ಆಗಲೀ, ಮನೆ ಖರೀಸುವಾಗ ಆಗಲೀ, ವಾಸ್ತು ಶಾಸ್ತ್ರದ ಪ್ರಕಾರ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎನ್ನುತ್ತಾರೆ ವಾಸ್ತು ತಜ್ಞರು.
ನಿಮ್ಮ ಮನೆಯ ಮುಖ್ಯ ದ್ವಾರದ ಮುಂದೆ ಕೆಲವು ವಸ್ತುಗಳನ್ನು ಇಡುವುದರಿಂದ ಋಣಾತ್ಮಕ ಫಲಿತಾಂಶಗಳು ಉಂಟಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಮುಖ್ಯದ್ವಾರ ಹೇಗಿರಬೇಕು. ಯಾವ ವಸ್ತುಗಳನ್ನು ಅಲ್ಲಿ ಇಡಬಾರದು..? ಎಂಬುದನ್ನು ತಿಳಿಯೋಣ.
ಮುಖ್ಯದ್ವಾರದ ಬಳಿ ಕಸದ ಡಬ್ಬಿ ಅಥವಾ ಪೊರಕೆ ಇಡುವುದು ಬೇಡ
ಸಾಮಾನ್ಯವಾಗಿ ಕೆಲವರು ಮನೆಯ ಕಸ ಗುಡಿಸಿ ಮುಖ್ಯ ದ್ವಾರದ ಬಳಿ ಅಥವಾ ಬಾಗಿಲ ಹಿಂದೆ ಕಸದ ಡಬ್ಬಿ ಇಟ್ಟು ಅದಕ್ಕೆ ಕಸ ತುಂಬುತ್ತಾರೆ. ಕೆಲವರು ಕವರ್ನಲ್ಲಿ ತುಂಬಿ ಇಡುತ್ತಾರೆ. ಹಾಗೇ ಮುಖ್ಯ ದ್ವಾರದ ಹಿಂಭಾಕ ಪೊರಕೆ ಇಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಯಾವ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು. ಏಕೆಂದರೆ ಮುಖ್ಯ ದ್ವಾರದ ಬಳಿ ಇರುವ ಕಸವು ನಿಮ್ಮ ಆರ್ಥಿಕ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಮರಗಳು ಮತ್ತು ಗಿಡಗಳು ಇರಬಾರದು
ವಾಸ್ತು ಪ್ರಕಾರ, ನಿಮ್ಮ ಮನೆಯ ಮುಖ್ಯ ದ್ವಾರದ ಬಳಿ ಯಾವುದೇ ಮರಗಳು ಅಥವಾ ಗಿಡಗಳು ಇರಬಾರದು. ಏಕೆಂದರೆ ಅದು ನಿಮ್ಮ ಪ್ರಗತಿಗೆ ಅಡ್ಡಿಯಾಗುತ್ತದೆ. ಇದು ನಿಮ್ಮ ಮನೆಯಲ್ಲಿರುವ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ಮುಖ್ಯ ದ್ವಾರದ ನೇರವಾಗಿ ರಸ್ತೆ ಇರಬಾರದು
ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯ ಮುಖ್ಯ ದ್ವಾರದ ಮುಂದೆ ನೇರ ರಸ್ತೆ ಇರಬಾರದು ಎಂಬುದನ್ನು ಗಮನದಲ್ಲಿಡಿ. ಮುಖ್ಯ ರಸ್ತೆಗೆ ಎದುರಾಗಿ ನೇರವಾಗಿ ರಸ್ತೆ ಇದ್ದರೆ ಮನೆಯಲ್ಲಿ ಕುಟುಂಬ ಸದಸ್ಯರ ನಡುವೆ ಸಾಮರಸ್ಯ ಕಡಿಮೆಯಾಗಿ ಸಂಬಂಧ ಹದಗೆಡುವ ಸಾಧ್ಯತೆ ಹೆಚ್ಚು.