ಕೆಎನ್ ಎನ್ ನ್ಯೂಸ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಜಾಸ್ತಿಯಾಗಿದೆ. ಸಣ್ಣ ಸಣ್ಣ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡುತ್ತಿದ್ದಾರೆ. ಆದರೆ ಯಾಕೆ ಹೀಗೆ ಆಗುತ್ತಿದೆ ಎಂದು ಎನ್ಸಿಆರ್ಬಿ ಸಮೀಕ್ಷೆ ಪ್ರಕಾರ ಕೆಲವರಿಗೆ ಕೌಟುಂಬಿಕ ಸಮಸ್ಯೆ, ಗಂಭೀರ ಅನಾರೋಗ್ಯ, ಮಾದಕ ದ್ರವ್ಯ ಮತ್ತು ಮದ್ಯ ವ್ಯಸನ, ಪ್ರೇಮ ವೈಫಲ್ಯ, ಸಾಲ ಸೇರಿದಂತೆ ಅನೇಕ ಕಾರಣಗಳಿವೆ ಎಂದು ಹೇಳಿದ್ದಾರೆ.
ಕೆಲವಮ್ಮೊ ಮನೆಯಲ್ಲಿ ಒಬ್ಬರೇ ಕೂತಾಗ ಹಾಗೆ ತುಂಬಾ ಬೇಸರವಾಗದಗೂ ಕೂಡ ಆತ್ಮಹತ್ಯೆಯ ಆಲೋಚನೆಗಳು ಬಂದೇ ಬರುತ್ತದೆ.
ಎನ್ಸಿಆರ್ಬಿ ಸಮೀಕ್ಷೆ ಪ್ರಕಾರ, ಕಳೆದ ವರ್ಷ ದಾಖಲಾದ ಒಟ್ಟು ಆತ್ಮಹತ್ಯೆ ಪ್ರಕರಣದಲ್ಲಿ ಯಾವ ಕಾರಣದ್ದು ಎಷ್ಟು ಪಾಲು ಎಂದು ಗಮನಿಸುವುದಾದರೆ, ಕೌಟುಂಬಿಕ ಸಮಸ್ಯೆಗೆ ಶೇಕಡ 33.2, ಗಂಭೀರ ಅನಾರೋಗ್ಯಕ್ಕೆ ಶೇಕಡ 18.6, ಡ್ರಗ್ ಅಬ್ಯೂಸ್/ಆಲ್ಕೋಹಾಲಿಕ್ ಅಡಿಕ್ಷನ್ಗೆ ಶೇಕಡ 6.4, ವೈವಾಹಿಕ ಬಿಕ್ಕಟ್ಟಿಗೆ ಶೇಕಡ 4.8, ಲವರ್ ಅಫೇರ್ಸ್ಗೆ ಶೇಕಡ 4.6, ಸಾಲ ಮತ್ತು ದಿವಾಳಿತನದ ಕಾರಣಕ್ಕೆ ಶೇಕಡ 3.9, ನಿರುದ್ಯೋಗದ ಕಾರಣ ಶೇಕಡ 2.2, ಪರೀಕ್ಷೆಯಲ್ಲ ಫೇಲಾದುದಕ್ಕೆ ಶೇಕಡ 1, ವೃತ್ತಿಪರ ಕಾರಣಗಳಿಗೆ ಶೇಕಡ 1.6, ಬಡತನದ ಕಾರಣ ಶೇಕಡ 1.1 ಆತ್ಮಹತ್ಯೆಗಳಾಗಿವೆ.
ಸ್ತ್ರೀಯರು ಆತ್ಮಹತ್ಯೆ ಮಾಡಿಕೊಂಡವರೆಲ್ಲ ವೈವಾಹಿಕ ವಿಚಾರಕ್ಕೆ ವಿಶೇಷವಾಗಿ ವರದಕ್ಷಿಣೆ ಮತ್ತು ಬಂಜೆತನದ ಕಾರಣ ಪ್ರಾಣ ತ್ಯಾಗ ಮಾಡಿದವರು. ಇನ್ನು 18 ವರ್ಷದೊಳಗಿನವರ ಪ್ರಕರಣಗಳನ್ನು ಗಮನಿಸಿದರೆ ಹೆಚ್ಚು ಹೆಣ್ಮಕ್ಕಳೇ ಇದ್ದಾರೆ ಎಂದು ತಿಳಿದುಬಂದಿದೆ.