Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಪೇಪರ್ ಲೀಕ್ ಸಾಕು, ಇನ್ನು ಸಹಿಸಲು ಸಾಧ್ಯವಿಲ್ಲ’: ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗೆ Gen-Z ಯುವಕರಿಗೆ ಕೇಜ್ರಿವಾಲ್ ಕರೆ!

ಎಐಎಡಿಎಂಕೆ ಶಾಸಕರಿಗೆ ಬಿಗ್ ಶಾಕ್: TVK ಪರ ಮತ ಹಾಕಿದ 25 ಶಾಸಕರು ಪಕ್ಷದ ಹುದ್ದೆಗಳಿಂದ ವಜಾ!

ಅದಾನಿ ಗ್ರೂಪ್ ಜೊತೆ ಕೈಜೋಡಿಸಿದ ಉಬರ್: ಭಾರತದಲ್ಲಿ ತಲೆಯೆತ್ತಲಿದೆ ಮೊದಲ ಬೃಹತ್ ಡೇಟಾ ಸೆಂಟರ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜಮೀನು ಮ್ಯುಟೇಷನ್ ಎಂದರೇನು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಇಲ್ಲಿದೆ ಮಾಹಿತಿ
KARNATAKA

ಜಮೀನು ಮ್ಯುಟೇಷನ್ ಎಂದರೇನು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಇಲ್ಲಿದೆ ಮಾಹಿತಿ

By kannadanewsnow57

ಬೆಂಗಳೂರು: ಆಸ್ತಿ ಖರೀದಿ ಮಾಡಿದ ನಂತರ ಅಥವಾ ವಾರಸಾ ಹಕ್ಕಿನ ಮೂಲಕ ಜಮೀನು ವರ್ಗಾವಣೆಯಾದಾಗ ಖಾತಾ ಬದಲಾವಣೆಗಾಗಿ (ಮ್ಯುಟೇಷನ್) ಕಂದಾಯ ಕಚೇರಿಗಳಿಗೆ ಅಲೆಯುವ ದಿನಗಳಿಗೆ ಈಗ ಬ್ರೇಕ್ ಬಿದ್ದಿದೆ. ರಾಜ್ಯ ಕಂದಾಯ ಇಲಾಖೆಯು ಭೂ ಆಡಳಿತದಲ್ಲಿ ಪಾರದರ್ಶಕತೆ ತರಲು ‘ಸ್ವಯಂಚಾಲಿತ ಮ್ಯುಟೇಷನ್’ (Automatic Mutation) ವ್ಯವಸ್ಥೆಯನ್ನು ಜಾರಿಗೆಗೊಳಿಸಿದೆ.

ಈ ಹೊಸ ನಿಯಮದಂತೆ, ನಿಗದಿತ ಸಮಯದಲ್ಲಿ ಯಾವುದೇ ಆಕ್ಷೇಪಣೆ ಬರದಿದ್ದರೆ ಕಂದಾಯ ನಿರೀಕ್ಷಕರ (RI) ಬೆರಳಚ್ಚು ಅಥವಾ ಭೌತಿಕ ಸಹಿಯ ಅಗತ್ಯವಿಲ್ಲದೆಯೇ ಪಹಣಿಯಲ್ಲಿ ಮಾಲೀಕರ ಹೆಸರು ಬದಲಾವಣೆಯಾಗಲಿದೆ.

ಮ್ಯುಟೇಷನ್ ಎಂದರೇನು?

ಜಮೀನು ಅಥವಾ ಆಸ್ತಿಯ ಮಾಲೀಕತ್ವವು ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾವಣೆಯಾದಾಗ (ಮಾರಾಟ, ದಾನ, ಅಥವಾ ಮರಣದ ನಂತರದ ವಾರಸಾ ಹಕ್ಕು), ಸರ್ಕಾರದ ಅಧಿಕೃತ ದಾಖಲೆಗಳಾದ ಪಹಣಿ ಮತ್ತು ರಿಜಿಸ್ಟರ್ಗಳಲ್ಲಿ ಹೊಸ ಮಾಲೀಕನ ಹೆಸರನ್ನು ಅಧಿಕೃತವಾಗಿ ಸೇರಿಸುವ ಪ್ರಕ್ರಿಯೆಯೇ ಮ್ಯುಟೇಷನ್.

ಹೊಸ ವ್ಯವಸ್ಥೆಯ 3 ಪ್ರಮುಖ ಹಂತಗಳು:
ಕೇಸ್ಗಳ ಗಂಭೀರತೆ ಮತ್ತು ಸ್ವರೂಪಕ್ಕೆ ಅನುಗುಣವಾಗಿ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ:

ತಕ್ಷಣದ ದಾಖಲಾತಿ (Zero Days): ಬ್ಯಾಂಕ್ ಸಾಲಗಳು, ಸರ್ಕಾರದ ಭೂಸ್ವಾಧೀನ ಮತ್ತು ಆಸ್ತಿ ಅಡಮಾನಕ್ಕೆ ಸಂಬಂಧಿಸಿದ ಪ್ರಕರಣಗಳು ಯಾವುದೇ ನೋಟಿಸ್ ಅವಧಿಯಿಲ್ಲದೆ ನೇರವಾಗಿ ಮತ್ತು ತಕ್ಷಣವೇ ಸ್ವಯಂಚಾಲಿತವಾಗಿ ದಾಖಲೆಗಳಲ್ಲಿ ನಮೂದಾಗುತ್ತವೆ.

7 ದಿನಗಳ ಕಾಲಮಿತಿ: ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾದ ಕ್ರಯ ಪತ್ರಗಳಿಗೆ 7 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಬರದಿದ್ದರೆ, 8ನೇ ದಿನಕ್ಕೆ ವ್ಯವಸ್ಥೆಯು ತಾನಾಗಿಯೇ ಮ್ಯುಟೇಷನ್ ಪೂರ್ಣಗೊಳಿಸುತ್ತದೆ.

15 ದಿನಗಳ ಕಾಲಮಿತಿ: ನ್ಯಾಯಾಲಯದ ಆದೇಶಗಳು, ಪೌತಿ ಖಾತೆ (ವಾರಸಾ ಹಕ್ಕು) ಮತ್ತು ‘ವಿಲ್’ ಆಧಾರಿತ ವರ್ಗಾವಣೆಗಳಿಗೆ 15 ದಿನಗಳ ಕಾಲಾವಕಾಶವಿದ್ದು, 16ನೇ ದಿನಕ್ಕೆ ಹಕ್ಕು ವರ್ಗಾವಣೆಯಾಗಲಿದೆ.

ಅರ್ಜಿದಾರರಿಗೆ ಆಗುವ ಪ್ರಮುಖ ಅನುಕೂಲಗಳು:
ಭ್ರಷ್ಟಾಚಾರಕ್ಕೆ ಮುಕ್ತಿ: ಅಧಿಕಾರಿಗಳ ಹಸ್ತಕ್ಷೇಪವಿಲ್ಲದ ಕಾರಣ ಅನಗತ್ಯ ವಿಳಂಬ ಮತ್ತು ಲಂಚದ ಹಾವಳಿ ತಪ್ಪಲಿದೆ.

ಡಿಜಿಟಲ್ ಪಾರದರ್ಶಕತೆ: ಪ್ರತಿ ಹಂತದ ಮಾಹಿತಿಯು ಅರ್ಜಿದಾರರ ಮೊಬೈಲ್ಗೆ ಎಸ್ಎಂಎಸ್ ಮೂಲಕ ತಲುಪುತ್ತದೆ.

ಸುಲಭ ಲಭ್ಯತೆ: ರೈತರು ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದೆ ಆನ್ಲೈನ್ ಮೂಲಕವೇ ಪಹಣಿ ಅಥವಾ ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

ಅಧಿಕೃತ ಭೂಮಿ ಪೋರ್ಟಲ್ landrecords.karnataka.gov.in ಗೆ ಭೇಟಿ ನೀಡಿ.

ನಿಮ್ಮ ಲಾಗಿನ್ ವಿವರಗಳನ್ನು ಬಳಸಿ ಅಥವಾ ಹೊಸದಾಗಿ ನೋಂದಾಯಿಸಿ ಲಾಗಿನ್ ಆಗಿ.

“Mutation Application” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಆಸ್ತಿಗೆ ಸಂಬಂಧಿಸಿದ ಸರ್ವೆ ನಂಬರ್ ಮತ್ತು ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.

ಅಗತ್ಯ ದಾಖಲೆಗಳಾದ ಕ್ರಯ ಪತ್ರ, ಆಧಾರ್ ಕಾರ್ಡ್ ಮತ್ತು ವಾರಸಾ ಹಕ್ಕಿನ ಪತ್ರಗಳನ್ನು ಅಪ್ಲೋಡ್ ಮಾಡಿ.

ನಿಗದಿತ ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಿ ಸ್ವೀಕೃತಿ ರಸೀದಿ ಪಡೆದುಕೊಳ್ಳಿ.

ಅಗತ್ಯ ದಾಖಲೆಗಳು: ಕ್ರಯ ಪತ್ರ ಅಥವಾ ದಾನ ಪತ್ರ, ಆಧಾರ್ ಕಾರ್ಡ್/ವೋಟರ್ ಐಡಿ, ಹಳೆಯ ಪಹಣಿ ಪ್ರತಿ ಮತ್ತು ವಾರಸಾ ಹಕ್ಕಿನ ಆಸ್ತಿಯಾಗಿದ್ದರೆ ಮರಣ ಪ್ರಮಾಣಪತ್ರ.

What is land mutation? What are the documents required to apply? Here is the information
Share. Facebook Twitter LinkedIn WhatsApp Email

Related Posts

ಸುಶಿಕ್ಷಿತ ಯುವಶಕ್ತಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ: ಸಚಿವ ಕೆ.ಜೆ.ಜಾರ್ಜ್

2 Mins Read

BREAKING: ಬೆಂಗಳೂರಿನಲ್ಲಿ ಬೃಹತ್ GST ವಂಚನೆ ಜಾಲ ಪತ್ತೆ: ₹410 ಕೋಟಿ ಐಟಿಸಿ ಹಗರಣದ ಕಿಂಗ್‌ಪಿನ್ ಬಂಧನ

2 Mins Read

ಬೆಂಗಳೂರಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತಾ ಬಿಡುಗಡೆ ದೇಶದಲ್ಲೇ ದಾಖಲೆ: ಡಿಸಿಎಂ ಡಿ ಕೆ ಶಿವಕುಮಾರ್

6 Mins Read
Recent News

‘ಪೇಪರ್ ಲೀಕ್ ಸಾಕು, ಇನ್ನು ಸಹಿಸಲು ಸಾಧ್ಯವಿಲ್ಲ’: ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗೆ Gen-Z ಯುವಕರಿಗೆ ಕೇಜ್ರಿವಾಲ್ ಕರೆ!

ಎಐಎಡಿಎಂಕೆ ಶಾಸಕರಿಗೆ ಬಿಗ್ ಶಾಕ್: TVK ಪರ ಮತ ಹಾಕಿದ 25 ಶಾಸಕರು ಪಕ್ಷದ ಹುದ್ದೆಗಳಿಂದ ವಜಾ!

ಅದಾನಿ ಗ್ರೂಪ್ ಜೊತೆ ಕೈಜೋಡಿಸಿದ ಉಬರ್: ಭಾರತದಲ್ಲಿ ತಲೆಯೆತ್ತಲಿದೆ ಮೊದಲ ಬೃಹತ್ ಡೇಟಾ ಸೆಂಟರ್!

‘ಇರಾನ್ ಮೇಲೆ ಅಮೆರಿಕ ಸಂಪೂರ್ಣ ಹಿಡಿತ ಸಾಧಿಸಿದೆ’: ಹಾರ್ಮುಜ್ ಜಲಸಂಧಿ ಬಿಕ್ಕಟ್ಟಿನ ನಡುವೆ ಟ್ರಂಪ್ ಮತ್ತು ರಕ್ಷಣಾ ಕಾರ್ಯದರ್ಶಿ ಅಧಿಕೃತ ಘೋಷಣೆ!

State News
KARNATAKA

ಸುಶಿಕ್ಷಿತ ಯುವಶಕ್ತಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ: ಸಚಿವ ಕೆ.ಜೆ.ಜಾರ್ಜ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಸುಶಿಕ್ಷಿತ, ಪ್ರಜ್ಞಾವಂತ ಯುವಶಕ್ತಿಯಿಂದ ನಮ್ಮ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ. ಇಂಡಿಯನ್ ಅಕಾಡೆಮಿ…

BREAKING: ಬೆಂಗಳೂರಿನಲ್ಲಿ ಬೃಹತ್ GST ವಂಚನೆ ಜಾಲ ಪತ್ತೆ: ₹410 ಕೋಟಿ ಐಟಿಸಿ ಹಗರಣದ ಕಿಂಗ್‌ಪಿನ್ ಬಂಧನ

ಬೆಂಗಳೂರಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತಾ ಬಿಡುಗಡೆ ದೇಶದಲ್ಲೇ ದಾಖಲೆ: ಡಿಸಿಎಂ ಡಿ ಕೆ ಶಿವಕುಮಾರ್

BIG BREAKING: ರಾಜ್ಯ ಸರ್ಕಾರದಿಂದ ‘ಶಾಲಾ-ಕಾಲೇಜು’ಗಳಲ್ಲಿ ‘ಹಿಜಾಬ್ ನಿಷೇಧ’ ಆದೇಶ ವಾಪಾಸ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.