ಮಂಗಳೂರು : ಮಂಗಳೂರಿನಲ್ಲಿ ಶಾಸಕ ಭರತ್ ಶೆಟ್ಟಿ ವಿರುದ್ಧ ದಾಖಲಾಗಿರುವ ಎಂದು ಬಿಜೆಪಿ ನಾಯಕರು ಮಂಗಳೂರಿನ ಜಂಕ್ಷನ್ ಬಳಿ ಪ್ರತಿಭಟನೆ ನಡೆಸಿದರು ಈ ವೇಳೆ ವಿಪಕ್ಷ ನಾಯಕ ಮಾತನಾಡಿದ್ದು, ನಮ್ಮ ಮೈಯಲ್ಲಿ ಹರಿಯುತ್ತಿರುವುದು ಭಾರತ ಮಾತೆಯ ರಕ್ತ ನಾವು ಇಂತಹ ಗೊಡ್ಡು ಬೆದರಿಕೆಗಳಿಗೆಲ್ಲ ಹೆದರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮಂಗಳೂರು ಶಾಸಕ ಭಾರತ ಶೆಟ್ಟಿ ವಿರುದ್ಧ FIR ಹಿನ್ನೆಲೆಯಲ್ಲಿ ಇಂದು ಮಂಗಳೂರು ಜಂಕ್ಷನ್ ನಲ್ಲಿ ಬಿಜೆಪಿ ನಾಯಕರು ಧರಣಿ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಹೋರಾಟ ಪೊಲೀಸರು ವಿರುದ್ಧ ಅಲ್ಲ ಬಿಜೆಪಿ ಶಾಸಕರನ್ನು ಹೆದರಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ.
ಕಾಂಗ್ರೆಸ್ ಮೋದಿ ಹತ್ಯೆ ಮಾಡಬೇಕು ಎಂದವನಿಗೆ ಟಿಕೆಟ್ ನೀಡಿದೆ. ಪಾಕ್ ಜಿಂದಾಬಾದ್ ಎಂದವರ ಪರ ಮಂತ್ರಿಗಳ ಬ್ಯಾಟಿಂಗ್ ಮಾಡಿದ್ದಾರೆ. ಬಾಂಬ್ ಹಾಕಿದವರನ್ನು ಡಿಕೆ ಸಹೋದರರು ಬ್ರದರ್ಸ್ ಅಂತಾರೆ. ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಪದೇ ಪದೇ ತೋರಿಸುತ್ತೆ. ಜೈ ಶ್ರೀ ರಾಮ್ ಅಂದರೆ ಚಾಕು ಹಾಕುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಂ ಓಲೈಕೆ ನಡೆಯುತ್ತೆ.
ಇವರು ಮಜಾ ಮಾಡಿಕೊಂಡು ಅಧಿಕಾರಕ್ಕೆ ಬಂದವರು. ಯಾರದ್ದೋ ಹೆಸರೇಳಿ ನಾವು ಬಂದಿಲ್ಲ. ದೇಶವನ್ನು ಆಳುತ್ತಿರುವ ಪಾರ್ಟಿ ಬಿಜೆಪಿ ನಮ್ಮ ಮೈಯಲ್ಲಿ ಹರಿದಿರೋದು ಭಾರತಮಾತೆಯ ರಕ್ತ ಇಂತಹ ಗೊಡ್ಡು ಬದರಿಕೆಗಳಿಗೆಲ್ಲ ನಾವು ಹೆದರುವುದಿಲ್ಲ. ಕಾಂಗ್ರೆಸ್ ನವರಿಗೆ ಕೇಡುಗಾಲ ಬಂದಿದೆ. ಇದು ತಾಲಿಬಾನ್ ಸರ್ಕಾರ ಪ್ರಜಾಪ್ರಭುತ್ವ ಸರ್ಕಾರ ಅಲ್ಲ ಎಂದು ಮಂಗಳೂರಿನಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.