ಪ್ರಯಾಗ್ ರಾಜ್: ಕೆಲಸದ ಟೈಮ್ನಲ್ಲಿ ಬ್ಯೂಟಿ ಪಾಲರ್ಗೆ ತೆರಳಿ ಫೇಸ್ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಪೋಲಿಸ್ ಈಗ ಮನೆ ಸೇರಿರುವ ಘಟನೆ ಪ್ರಯಾಗ್ ರಾಜ್ನಲ್ಲಿ ನಡೆದಿದೆ. ಪೊಲೀಸ್ ಸಮವಸ್ತ್ರದಲ್ಲಿದ್ದ ದ ಪ್ರಯಾಗ್ರಾಜ್ನ ಸಿವಿಲ್ ಲೈನ್ ಔಟ್ಪೋಸ್ಟ್ ಇನ್ಚಾರ್ಜ್ ರಾಕೇಶ್ ಚಂದ್ ಶರ್ಮಾ ಮಹಿಳೆಯಿಂದ ಮುಖ ಮಸಾಜ್ ಮಾಡಿಸಿಕೊಳ್ಳುತ್ತಿದ್ದರಂತೆ. ಇದೇ ವೇಳೆ ಯಾರೋ ಒಬ್ಬರು ವೀಡಿಯೊ ಮಾಡಿ ಅದನ್ನು ಪೊಲೀಸ್ ಇಲಾಖೆಯ ಟ್ವಿಟ್ಟರ್ ಗೆ ಕಳುಹಿಸಿದ್ದಾರೆ. ದರೋಗಾ ಅವರು ತಮ್ಮ ಪ್ರದೇಶದ ಸಿವಿಲ್ ಲೈನ್ ನ ಸ್ಪಾದಲ್ಲಿ ಮಹಿಳೆಯಿಂದ ಮಸಾಜ್ ಅಂತ ಹೇಳಲಾಗಿದೆ.
ವೀಡಿಯೊದಲ್ಲಿ, ಹೊರಠಾಣೆಯ ಸಿವಿಲ್ ಲೈನ್ ಉಸ್ತುವಾರಿ ರಾಕೇಶ್ ಚಂದ್ರ ಶರ್ಮಾ ಸ್ಪಾ ಅಥವಾ ಸಲೂನ್ ನಲ್ಲಿ ತಿರುಗುವ ಕುರ್ಚಿಯ ಮೇಲೆ ಕುಳಿತಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಒಬ್ಬ ಹೆಂಗಸು ಅವನ ಹಿಂದೆ ನಿಂತು ಮಸಾಜ್ ಮಾಡುವುದನ್ನು ಕಾಣಬಹುದಾಗಿದೆ. ವೈರಲ್ ವೀಡಿಯೊವನ್ನು ಗಮನಿಸಿದ ಪ್ರಯಾಗ್ರಾಜ್ ಎಸ್ಎಸ್ಪಿ ಶೈಲೇಂದ್ರ ಕುಮಾರ್ ಪಾಂಡೆ ಅವರು ಸಮವಸ್ತ್ರ ಧರಿಸಿ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡದಕ್ಕೆ ಅವರನ್ನು ಅಮಾನತುಗೊಳಿಸಿದ್ದಾರೆ. ಆದಾಗ್ಯೂ, ಸಬ್ ಇನ್ಸ್ಪೆಕ್ಟರ್ ರಾಕೇಶ್ ಚಂದ್ರ ಶರ್ಮಾ ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದು, ನನಗೆ ಪೇಸ್ ವಾಶ್ ಮಾಡುತ್ತಿದ್ದ ಪುರುಷ ಕ್ಷೌರಿಕನಿಗೆ ಕರೆ ಬಂತು, ನಂತರ ಮಹಿಳೆ ಮುಖದ ಮೇಲಿನ ಪೇಸ್ಟ್ ಅನ್ನು ಸ್ವಚ್ಛಗೊಳಿಸುತ್ತಿದ್ದಳು ಅಂತ ತಿಳಿಸಿದ್ದಾರೆ.
प्रयागराज सिविल लाइन थाने के दारोगा जी को फेस मसाज कराना मंहगा पड़ा। सस्पेंड हो गए हैं#Prayagraj #PRAYAGRAJ_POLICE pic.twitter.com/XbwEix4JMy
— Alok Kumar (@dmalok) August 27, 2022