ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಈಗ ಕೇಸ್ಗೆ ಮತ್ತೊಂದು ಸಿಕ್ಕಿದ್ದು, ಕೊಲೆಯ ದಿನ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ, ಪಟ್ಟಣಗೆರೆ ಶೆಡ್ಗೆ ದರ್ಶನ್ ವಿನಯ್ ಜೊತೆಗೆ ಬಂದಿದ್ದರು. ಸಂಜೆ 4:30ಕ್ಕೆ ಬಂದು 5:20ಕ್ಕೆ ಶೆಡ್ ನಿಂದ ತೆರಳಿದ್ದಾರೆ.ಈ ಮಧ್ಯ ರೇಣುಕಾ ಸ್ವಾಮಿ ಮೇಲೆ 30 ನಿಮಿಷ ವರೆಗೂ ಹಲ್ಲೆ ಮಾಡಿದ್ದಾರೆ ಎಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಹೌದು ದರ್ಶನ್ ಸಿನಿಮಾ ಮಾದರಿಯಲ್ಲಿ ರೇಣುಕಾ ಸ್ವಾಮಿ ಮೇಲೆ ಕ್ರೌರ್ಯ ಮೆರೆದಿದ್ದಾರೆ. ವಾಹನಗಳ ಮೇಲೆ ರೇಣುಕಾ ಸ್ವಾಮಿಯನ್ನು ಬಿಸಾಡಿದ್ದ ದರ್ಶನ. ಬೂಟ್ ಕಾಲಿನಲ್ಲಿ ಒದ್ದು ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಪವಿತ್ರಾಗೆ ಕಳುಹಿಸಿದ್ದ ಮೆಸೇಜನ್ನು ದರ್ಶನ್ ಸಹಚರರು ಓಪನ್ ಮಾಡಿದ್ದರು.ರೇಣುಕಾ ಸ್ವಾಮಿ ಕಳಿಸಿದ್ದ ಮೆಸೇಜ್ ಓದಲು ದರ್ಶನ್ ಪವನ್ ಗೆ ಹೇಳಿದ್ದಾರೆ.
ಜೋರು ಧ್ವನಿಯಲ್ಲಿ ಪವನ್ ಮೆಸೇಜ್ ಓದುತ್ತಿದ್ದ. ಈ ವೇಳೆ ಮೆಸೇಜ್ ಓದುತ್ತಿದ್ದ ಟೋನಲ್ಲೇ ದರ್ಶನ್ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡುತ್ತಿದ್ದರು. ಮೊದಲು ಎರಡೇಟು ಹೊಡೆದು ಹಣಕೊಟ್ಟು ಹೊರಡು ಎಂದು ತಿಳಿಸಿದರು. ದರ್ಶನ್ ಅವರ 50 ನಿಮಿಷ ಶೆಡ್ ನಲ್ಲಿದ್ದ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದರು. ಕೊನೆಗೆ ಸಾಕ್ಷಿ ಮುಂದೆ ಇಟ್ಟುಕೊಂಡು ಪೊಲೀಸರು ವಿಚಾರಣೆ ನಡೆಸಿದ್ದರು ಇವಳೇ ಹಲ್ಲೆ ಮಾಡಿರುವುದಾಗಿ ದರ್ಶನ್ ಸತ್ಯವನ್ನು ಒಪ್ಪಿಕೊಂಡಿದ್ದಾರೆ ದರ್ಶನ್ ಹಲ್ಲೆ ಮಾಡಿರುವುದಾಗಿ ಪವಿತ್ರ ಗೌಡ ಕೂಡ ಹೇಳಿಕೆ ನೀಡಿದ್ದಾರೆ.