ಬೆಂಗಳೂರು: ದುಡ್ಡು ಏನು ಪ್ರಿಂಟ್ ಮಾಡ್ಲಾ? ಅಂತ ಸಿಎಂ ಸಿದ್ದರಾಮಯ್ಯ ಅವರು ಗರಂ ಆಗಿರುವ ಘಟನೆ ನಡೆದಿದೆ. ಅವರು ಇಂದು ಗುತ್ತಿಗೆದಾರರ ಸಮ್ಮೇಳನದಲ್ಲಿ ಮಾತನಾಡುತ್ತ ಈ ಬಗ್ಗೆ ಹೇಳಿದರು.
ಹಿಂದಿನ ಸರ್ಕಾರವು ಮಾಡಿರುವ ಯಡವಟ್ಟಿನಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಖಚಾನೆಯಲ್ಲಿ ಹಣವಿದ್ದರೇ ಮಾತ್ರ ಈ ಕೆಲಸವನ್ನು ಮಾಡಬೇಕು. ನಾನು ಹಣವಿದ್ರೇ ಮಾತ್ರ ಟೆಂಡರ್‌ಗಳನ್ನು ಕರೆಯಲು ಹೇಳುತ್ತಿದೆ. ಆದರೆ ಹಿಂದಿನ ಸರ್ಕಾರ ಮಾಡಿರುವುದು ಈಗ ಈ ಸನ್ನಿವೇಶವನ್ನು ನಿರ್ಮಾಣ ಮಾಡಬೇಕಾಗಿದೆ ಅಂಥ ಹಿಂದಿನ ಸರ್ಕಾರದ ವಿರುದ್ದ ಕಿಡಿಕಾರಿದರು. ನಾನು ಹೇಳಿದರು ಕೂಡ ಗುತ್ತಿಗೆ ಕೆಲಸವನ್ನ ಹಣವಿಲ್ಲದೇ ಮಾಡಬಾರದು, ಇದರಿಂದ ತೊಂದರೆಯಾಗುವುದು ನಿಮಗೆ ಅಂತ ಹೇಳಿದರು. ಸುಮಾರು ಕೋಟಿಗಳ ಹಣ ಬಾಕಿ ಉಳಿದಿದ್ದು, ಹಣವನ್ನು ಎಲ್ಲಿಂದ ತರಲಿ ಅಂತ ಅವರು ತಮ್ಮ ಬೇಸರವನ್ನು ಹೊರ ಹಾಕಿದರು. ಇನ್ನೂ ಇದೇ ವೇಳೆ ಗುತ್ತಿಗೆದಾರರಿಂದ 5 ಪೈಸೆ ಪಡೆದುಕೊಂಡಿದ್ದರೇ ನಾನು ರಾಜಕೀಯ ನಿವೃತ್ತಿಯನ್ನು ಪಡೆದುಕೊಳ್ಳುವೆ ಅಂಥ ಹೇಳಿದರು.