ಮೈಸೂರು : ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಈಗಾಗಲೇ ರಾಜ್ಯಾದ್ಯಂತ ಬಹುತೇಕ ಸಮೀಕ್ಷೆ ಕಾರ್ಯಾ ಪೂರ್ಣಗೊಂಡಿದೆ. ನಿನ್ನೆ ಸುಧಾಮೂರ್ತಿ ಜಾತಿಗಣತಿಯಲ್ಲಿ ಭಾಗವಹಿಸಲ್ಲ ಎಂದು ಹಿಂಬರಹ ತೆಗೆದುಕೊಂಡಿದ್ದರು. ಇದಕ್ಕೆ ಇದೀಗ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದವರು ಜಾತಿಗಣತಿ ಮಾಡುವಾಗ ಆಗ ಸುಧಾಮೂರ್ತಿಯವರು ಏನು ಹೇಳುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಭಾಗಿಯಾಗಲ್ಲ ಎಂದು ಸುಧಾಮೂರ್ತಿ ಹಿಂಬರಹ ವಿಚಾರವಾಗಿ ಇದು ಕೇವಲ ಹಿಂದುಳಿದವರ ಸರ್ವೆ ಅಲ್ಲ ಎಲ್ಲರ ಸರ್ವೆ ಆಗಿದೆ. ಶಕ್ತಿ ಯೋಜನೆ ಮಾಡಿದ್ದೇವೆ ಮೇಲ್ಜಾತಿ ಅವರು ಬಸ್ ನಲ್ಲಿ ಹೋಗಲ್ವಾ? ಕೇಂದ್ರ ಜಾತಿಗಣತಿ ಮಾಡುವಾಗ ಸುಧಾ ಮೂರ್ತಿ ಆಗ ಏನು ಹೇಳುತ್ತಾರೆ ರಾಜ್ಯದ 7 ಕೋಟಿ ಜನರ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆಯಾಗಿದೆ ಈ ಸಮೀಕ್ಷೆ ಒಂದು ಜಾತಿ, ಧರ್ಮದವರಿಗೆ ಸೀಮಿತವಲ್ಲ. ಇದು ಎಲ್ಲಾ ಜಾತಿ ಧರ್ಮದವರು ಒಳಗೊಂಡು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬಿಹಾರ್ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲುತ್ತದೆ. ಬಿಹಾರ ರಾಜ್ಯದ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ ಹೀಗಾಗಿ ಈ ಬಾರಿ ಇಂಡಿಯಾ ಮೈತ್ರಿಕೂಟ ಗೆಲ್ಲುವ ವಿಶ್ವಾಸವಿದೆ. ಬಿಹಾರ ಚುನಾವಣಾ ಪ್ರಚಾರಕ್ಕೆ ಕರೆದರೆ ನಾನು ಹೋಗುತ್ತೇನೆ ಎಂದು ತಿಳಿಸಿದರು. ಇನ್ನು ಗುತ್ತಿಗೆದಾರರ ಬಳಿ ಕಮಿಷನ್ ಪಡೆಯುತ್ತಿದ್ದಾರೆ ಎಂಬ ಆರೋಪ ವಿಚಾರವಾಗಿ ಗುತ್ತಿಗೆದಾರರು ಕೋರ್ಟಿಗೆ ಹೋಗಲಿ. ಕಮಿಷನ್ ಪಡೆಯುತ್ತಿದ್ದಾರೆ ಎಂಬ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಹೀಗೆ ಪ್ರತಿಕ್ರಿಯೆ ನೀಡಿದರು.