ಕೋಲಾರ : ಎಸ್ ಎಸ್ ಎಲ್ ಸಿ ಪಾಸ್ ಗೆ ಕನಿಷ್ಠ 33 ಅಂಕ ನಿಗದಿ ಮಾಡಿದ ವಿಚಾರವಾಗಿ ಎಲ್ಲರ ಅಭಿಪ್ರಾಯದಂತೆ ಕನಿಷ್ಠ ಅಂಕ 33ಕ್ಕೆ ನಿಗದಿ ಮಾಡಲಾಗಿದೆ ಎಂದು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕನಿಷ್ಠ ಅಂಕದ ಬಗ್ಗೆ ತುಂಬಾ ವರ್ಷಗಳಿಂದ ಚರ್ಚೆ ನಡೆಯುತ್ತಿತ್ತು. ಒಂದೇ ಬಾರಿ ಇಂಥ ನಿರ್ಧಾರ ಮಾಡುವುದಕ್ಕೆ ಆಗುವುದಿಲ್ಲ. ತಮಿಳುನಾಡಿನಲ್ಲಿ ಇನ್ನೂ ಕಡಿಮೆ ಅಂಕ ನಿಗದಿ ಮಾಡಲಾಗಿದೆ. ಸಮಾನತೆಯ ಶಿಕ್ಷಣ ಪಡೆಯಬೇಕಾದರೆ ತೀರ್ಮಾನ ಮುಖ್ಯವಾಗುತ್ತದೆ ದೇಶ ರಾಜ್ಯಗಳ ನಿರ್ಧಾರ ಮುಖ್ಯವಾಗಿರುತ್ತದೆ. ವೆಬ್ ಕಾಸ್ಟಿಂಗ್ ನಿಂದ ನಕಲು ಮಾಡುವುದನ್ನು ತಡೆಯಲಾಗಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.