ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ 17 ಆರೋಪಿಗಳಿಗೆ ಜುಲೈ 18 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದರ ಮಧ್ಯ ಇಂದು ನಟ ದರ್ಶನ್ ಭೇಟಿಗೆ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ್ ಭೇಟಿಯಾಗಲು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದರು.
ಈ ವೇಳೆ ಪತ್ನಿ ಸಹೋದರ ಹಾಗೂ ಕುಟುಂಬದ ಸದಸ್ಯರು ದರ್ಶನ್ ಅವರನ್ನು ಭೇಟಿಯಾದರು. ನಂತರ ಪತ್ನಿಯೊಂದಿಗೆ ದರ್ಶನ್ ಕೆಲ ಕಾಲ ಮಾತುಕತೆ ನಡೆಸಿದರು. ಈ ವೇಳೆ ಪತ್ನಿ ವಿಜಯಲಕ್ಷ್ಮಿ ತನಿಖೆ ಪ್ರಗತಿಯಲ್ಲಿ ಇರುವುದರಿಂದ ಸದ್ಯ ಜಾಮೀನು ಸಿಗುವುದು ಸಾಧ್ಯವಿಲ್ಲ ಕಾನೂನು ಹೋರಾಟ ನಡೆಸೋಣ ಎಂದರು. ಈ ಒಂದು ಮಾತಿಗೆ ನಟ ದರ್ಶನ್ ಅವರು ಸ್ವಲ್ಪ ಬೇಸರ ಆಗಿದ್ದು ಕಂಡುಬಂದಿತು.
ನಂತರ ದರ್ಶನ್ ಅವರು ನೋಡೋಣ ಬಿಡಿ ಎಂದು ಬೇಸರದಲ್ಲಿ ತಿಳಿಸಿದ್ದಾರೆ ವೇಳೆ ನನಗೆ ಜೈಲಿನ ಊಟ ಒಗ್ಗುತ್ತಿಲ್ಲ. ಮನೆ ಊಟ ಬೇಕು ಎಂದು ಮತ್ತೆ ಕುಟುಂಬಸ್ಥರ ಬಳಿ ತಿಳಿಸಿದ್ದಾರೆ. ಇದೆ ವೇಳೆ ಸಹೋದರ ದಿನಕರ್ ಅವರ ಇಂದಿಗೂ ನಡೆ ದರ್ಶನ್ ಕಾನೂನು ಹೋರಾಟದ ಕುರಿತು ಚರ್ಚಿಸಿದ್ದಾರೆ ನಟ ದರ್ಶನ್ ಗಾಗಿ ಹಣ್ಣು ಹಂಪಲುಗಳನ್ನು ತಂದಿದ್ದರು ಎಂದು ತಿಳಿದುಬಂದಿದೆ.